52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ!

By Santosh NaikFirst Published Aug 2, 2024, 6:36 PM IST
Highlights

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಮಹಾದಾಖಲೆಯ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಪ್ರಮುಖ ಪಂದ್ಯದಲ್ಲಿ ಟೀಮ್‌ ಇಂಡಿಯಾ ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಸೋಲಿಸಿತು.
 

ಪ್ಯಾರಿಸ್‌ (ಆ.2): ಕಟ್ಟಾ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ತಂಡ ಮಹಾ ಗೆಲುವು ದಾಖಲಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಹಾಕಿ ತಂಡ 3-2 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಇದು ಒಲಿಂಪಿಕ್ಸ್‌ನಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ನಂತರ ಬಂದಿರುವ ಗೆಲುವು ಎನಿಸಿದೆ. ಇದಕ್ಕೂ ಮುನ್ನ 1972ರ ಒಲಿಂಪಿಕ್‌ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 3-1 ರಿಂದ ಸೋಲಿಸಿತ್ತು. ಅದಾದ 50 ವರ್ಷಗಳ ಬಳಿಕ ಈ ಗೆಲುವು ದಾಖಲಿಸಿದೆ.  ಈ ನಡುವೆ ಆಡಿದ ಆರು ಪಂದ್ಯಗಳಲ್ಲಿ ಭಾರತ ಸೋಲು ಕಂಡಿದ್ದರೆ, ಒಂದು ಪಂದ್ಯವನ್ನು ಡ್ರಾ ಮಾಡಕೊಂಡಿತ್ತು. ಭಾರತ ತಂಡ ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಬಿ ಗುಂಪಿನ 2ನೇ ಸ್ಥಾನಿಯಾಗಿ ಲೀಗ್‌ ಹೋರಾಟ ಮುಗಿಸಿದೆ. ಹಾಲಿ ಒಲಿಂಪಿಕ್‌ ಚಾಂಪಿಯನ್‌ ಬೆಲ್ಜಿಯಂ ತಂಡ ಅಗ್ರಸ್ಥಾನ ಸಂಪಾದಿಸಿದೆ. ಬಿ ಗುಂಪಿನಿಂದ ಭಾರತ ಬೆಲ್ಜಿಯಂ ಅಲ್ಲದೆ, ಆಸ್ಟ್ರೇಲಿಯಾ ಹಾಗೂ ಅರ್ಜೆಂಟೀನಾ ತಂಡಗಳು ಕ್ವಾರ್ಟರ್‌ ಫೈನಲ್‌ಗೇರಿವೆ. ಎ ಗುಂಪಿನಿಂದ ನೆದರ್ಲೆಂಡ್ಸ್‌, ಜರ್ಮನಿ, ಗ್ರೇಟ್‌ ಬ್ರಿಟನ್‌ ಹಾಗೂ ಸ್ಪೇನ್‌ ತಂಡಗಳು ಮುಂದಿನ ಹಂತಕ್ಕೇರಿದೆ.

ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಜೋಡಿ ಗೋಲ್‌ಗಳುಗಳು ಹಾಗೂ ಪಿಆರ್‌ ಶ್ರೀಜೇಶ್‌ ಅವರ ಗೋಲ್‌ಕೀಪಿಂಗ್‌ ವೀರಾವೇಶದಿಂದ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ದೊಡ್ಡ ಗೆಲುವು ದಾಖಲಿಸಲು ಕಾರಣವಾಯಿತು. ಭಾರತ ತಂಡಕ್ಕೆ ಅಭಿಷೇಕ್‌ 12ನೇ ನಿಮಿಷದಲ್ಲಿ ಮುನ್ನಡೆ ನೀಡಿದರೆ, ಅಷ್ಟೇ ವೇಗವಾಗಿ ಈ ಮುನ್ನಡೆಯನ್ನು ಹರ್ಮನ್‌ಪ್ರೀತ್‌ ಡಬಲ್‌ ಮಾಡಿದರು. ಆ ಬಳಿಕ ಅನುಭವಿ ಗೋಲ್‌ಕೀಪರ್‌ ಪಿಆರ್‌ ಶ್ರೀಜೇಶ್‌ ಆಸ್ಟ್ರೇಲಿಯಾದ ಅಟಾಕರ್‌ಗಳ ಎಲ್ಲಾ ದಾಳಿಯನ್ನೂ ಹಾಳು ಮಾಡಿದರು.

Latest Videos

ಹ್ಯಾಟ್ರಿಕ್ ಒಲಿಂಪಿಕ್ ಮೆಡಲ್‌ನತ್ತ ಮನು ಭಾಕರ್; 2ನೇ ಸ್ಥಾನಿಯಾಗಿ ಫೈನಲ್‌ಗೆ ಲಗ್ಗೆಯಿಟ್ಟ ಹರ್ಯಾಣ ಶೂಟರ್

ಭಾರತ ತಂಡದ ನಾಯಕ ಮೂರನೇ ಅವಧಿಯ ಆಟದ ಆರಂಭದಲ್ಲಿಯೇ ಮೂರನೇ ಗೋಲು ಬಾರಿಸುವ ಸಮೀಪ ಬಂದಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ತಂಡ ಪ್ಲೇಕ್‌ ಗೋವರ್ಸ್‌ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಪ್ರಯತ್ನ ಮಾಡಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹಾಲಿ ವರ್ಷದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇದು 8ನೇ ಪಂದ್ಯವಾಗಿತ್ತು.ಈ ವರ್ಷ ಆಡಿದ ಎಲ್ಲಾ ಏಳೂ ಪಂದ್ಯಗಳಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ, ಒಲಿಂಪಿಕ್ಸ್‌ ಕಣದಲ್ಲ ಸೋಲು ಕಂಡಿದೆ. ಇನ್ನೊಂದೆಡೆ ಭಾರತ ತಂಡ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ ಕಳೆದ ಪಂದ್ಯದಲ್ಲಿ ಎದುರಾದ ಸೋಲಿನಿಂದ ಚೇತರಿಕೆ ಕಾಣುವ ಪ್ರಯತ್ನದಲ್ಲಿ ಯಶಸ್ವಿಯಾಯಿತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿದ್ದಂತೆಯೇ ಭಾರತೀಯ ರೈಲ್ವೇಯಿಂದ ಡಬಲ್ ಪ್ರಮೋಷನ್..!

click me!