ಹೋಬಾರ್ಟ್‌ ಓಪನ್‌: ಫೈನಲ್‌ಗೆ ಸಾನಿಯಾ ಜೋಡಿ

By Suvarna News  |  First Published Jan 18, 2020, 11:23 AM IST

ತಾಯಿಯಾದ ಬಳಿಕ 2 ವರ್ಷ ಟೆನಿಸ್‌ನಿಂದ ದೂರ ಉಳಿದ ಸಾನಿಯಾ ಮಿರ್ಜಾ, ಇದೀಗ ಮತ್ತೆ ಟೆನಿಸ್ ಅಂಗಣದಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.


ಹೋಬಾರ್ಟ್‌(ಜ.18): 2 ವರ್ಷಗಳ ಬಳಿಕ ಟೆನಿಸ್‌ಗೆ ವಾಪಸಾಗಿರುವ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಗೆಲುವಿನ ಓಟ ಮುಂದುವರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಹೋಬಾರ್ಟ್‌ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿಯ ಮಹಿಳಾ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಸಾನಿಯಾ ಹಾಗೂ ಉಕ್ರೇನ್‌ನ ನಾಡಿಯಾ ಕಿಚೆನೊಕ್‌ ಜೋಡಿ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. 

ಇದನ್ನೂ ಓದಿ: ಮಗನ ಮೊದಲ ವರ್ಷದ ಹುಟ್ಟು ಹಬ್ಬ; ಸಾನಿಯಾ ಭಾವನಾತ್ಮಕ ಸಂದೇಶ !.

Tap to resize

Latest Videos

ಸೆಮೀಸ್‌ನಲ್ಲಿ ಸಾನಿಯಾ-ನಾಡಿಯಾ ಜೋಡಿ, ಸ್ಲೋವೆನಿಯಾದ ತಮಾರಾ ಹಾಗೂ ಚೆಕ್‌ ಗಣರಾಜ್ಯದ ಮಾರಿ ಬೌಜ್ಕೋವಾ ಜೋಡಿ ವಿರುದ್ಧ 7-6(3), 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. 1 ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿಯ ಅತ್ಯದ್ಭುತ ಆಟದ ಮುಂದೆ ಎದುರಾಳಿ ಜೋಡಿ ಸೋತು ಶರಣಾಯಿತು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸಾನಿಯಾ ಜೋಡಿ, ಚೀನಾದ ಶೂಯಿ ಪೆಂಗ್‌ ಹಾಗೂ ಶೂಯಿ ಜಾಂಗ್‌ ಜೋಡಿ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!.

ಸಾನಿಯಾ ಮಿರ್ಜಾ ತಾಯಿಯಾದ ಕಾರಣ ಟೆನಿಸ್‌ನಿಂದ ಬರೋಬ್ಬರಿ 2 ವರ್ಷಗಳ ಕಾಲ ದೂರವಿದ್ದರು. ಬಳಿಕ ಸತತ ಅಭ್ಯಾಸದ ಮೂಲಕ ಮತ್ತೆ ತೂಕ ಇಳಿಸಿಕೊಂಡ ಸಾನಿಯಾ ಇದೀಗ ಟೆನಿಸ್ ಅಂಗಣದಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ.

click me!