ಪುಣೇರಿ ಪಲ್ಟಾನ್ ವಿರುದ್ಧ ಗೆದ್ದ ಪಟನಾ ಪೈರೇಟ್ಸ್
ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ವಿಜಯ ಸಾಧಿಸಿದ ಹರಿಯಾಣ
ಲೀಗ್ ನಲ್ಲಿ ಮೊದಲ ಗೆಲುವು ಕಂಡ ಹರಿಯಾಣ ಸ್ಟೀಲರ್ಸ್
ಬೆಂಗಳೂರು (ಡಿ. 28): ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ (Patna Pirates) ಹಾಗೂ ಸತತ ಎರಡು ಪಂದ್ಯಗಳಲ್ಲಿ ಸೋಲಿನ ನಿರಾಸೆ ಕಂಡಿದ್ದ ಹರಿಯಾಣ ಸ್ಟೀಲರ್ಸ್ (Haryana Steelers) ತಂಡಗಳು 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ (Pro Kabaddi League ) ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸಲು ಯಶಸ್ವಿಯಾಗಿವೆ. ಪಟನಾ ಪೈರೇಟ್ಸ್ ತಂಡ 38-26 ಅಂಕಗಳ ಅಂತರದಿಂದ ಪುಣೇರಿ ಪಲ್ಟನ್ (Puneri Paltan) ತಂಡವನ್ನು ಸೋಲಿಸಿದರೆ, ಹರಿಯಾಣ ಸ್ಟೀಲರ್ಸ್ ತಂಡ ರೋಚಕ ಕದನದಲ್ಲಿ 39-37 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿತು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಟನಾ ತಂಡಕ್ಕೆ ರೈಡರ್ ಸಚಿನ್ (Sachin) ಸೂಪರ್ 10 (10 ಅಂಕ) ಸಾಹಸದ ಮೂಲಕ ಗೆಲುವಿಗೆ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಡಿಫೆನ್ಸ್ ವಿಭಾಗದ ತ್ರಿವಳಿ ಜೋಡಿ ಸುನಿಲ್ (4 ಅಂಕ), ಮೊಹಮದ್ರೆಜಾ ಚೀಯಾನೆಹ್ (3 ಅಂಕ) ಹಾಗೂ ಸಾಜಿನ್ ಸಿ (3 ಅಂಕ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಯುವ ಆಟಗಾರರ ಅತ್ಯುತ್ತಮ ನಿರ್ವಹಣೆಯ ನಡುವೆಯೂ ಅನುಭವಿ ರೈಡರ್ ನ ಕೊರತೆಯನ್ನು ಬಹುವಾಗಿ ಎದುರಿಸುತ್ತಿರುವ ಪುಣೇರಿ ಪಲ್ಟನ್ ತಂಡ ತನ್ನ 3ನೇ ಪಂದ್ಯದಲ್ಲಿ 2ನೇ ಸೋಲು ಕಂಡಿತು.
ಇಡೀ ಪಂದ್ಯದಲ್ಲಿ ಎಲ್ಲರ ಕಣ್ಣು ಪುಣೇರಿ ತಂಡದ ಶೋ ಮ್ಯಾನ್ ಆಟಗಾರ ರಾಹುಲ್ ಚೌಧರಿ ಮೇಲೆ ನೆಟ್ಟಿತ್ತಾದರೂ, ಕೋಚ್ ಅನೂಪ್ ಕುಮಾರ್ ಮೊದಲ ಹಾಫ್ ನಲ್ಲಿಯೇ ಅವರ ಕಳಪೆ ಕಂಡು ಮೋಹಿತ್ ಗೋಯತ್ ರಿಗೆ ಬದಲಿಯಾಗಿ ಪ್ರಕಟಿಸಿದರು. ಮೋಹಿತ್ ಗೋಯತ್, ಅಸ್ಲಂ ಇನಾಂದಾರ್ ಹಾಗೂ ಪಂಕಜ್ ಮೋಹಿತೆ ಪಟನಾ ತಂಡದ ಡಿಫೆನ್ಸ್ ವಿಭಾಗದಲ್ಲಿ ಸಾಕಷ್ಟು ಕಾಟ ನೀಡಿದರು. ಆದರೆ, ಪ್ರಶಾಂತ್ ಕುಮಾರ್ ರೈ ಹಾಗೂ ಸಚಿನ್ ಕೂಡ ಅಷ್ಟೇ ಪ್ರಮಾಣದಲ್ಲಿ ಅಂಕಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಪಂದ್ಯ ಮುಗಿಯಲು ಇನ್ನೇನು 6 ನಿಮಿಷಗಳಿದೆ ಎನ್ನುವಾಗ ಪಟನಾ ತಂಡ ಆಲ್ ಔಟ್ ಆಗುವ ಅಪಾಯದಲ್ಲಿತ್ತು. ಈ ವೇಳೆ ಸಾಜಿನ್ ನಡೆಸಿದ ಆಕರ್ಷಕ ಸೂಪರ್ ಟ್ಯಾಕಲ್ ಇಡೀ ಪಂದ್ಯದ ಫಲಿತಾಂಶ ನಿರ್ಣಯವಾಗುವಲ್ಲಿ ಪ್ರಮುಖ ಪಾತ್ರ ವಹಿಸಿತು. ಮೊದಲ ಅವಧಿಯ ಆಟದ ಮುಕ್ತಾಯಕ್ಕೆ ಎರಡೂ ತಂಡಗಳು ತಲಾ 14 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರೂ, 2ನೇ ಅವಧಿಯ ಆಟದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಆಲೌಟ್ ಮಾಡುವ ಮೂಲಕ ಪಟನಾ ಮೇಲುಗೈ ಸಾಧಿಸಿತು.
Pro Kabaddi League: ಹಾಲಿ ಚಾಂಪಿಯನ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್!
ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 2 ಅಂಕಗಳ ಅಂತರದಲ್ಲಿ ಸೋಲಿಸಿತು. 39-37ರಲ್ಲಿ ಹರಿಯಾಣ ಸ್ಟೀಲರ್ಸ್ ಗೆಲುವು ಕಾಣುವ ಮೂಲಕ ಲೀಗ್ ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ತೆಲುಗು ಟೈಟಾನ್ಸ್ ತಂಡದ ರೈಡರ್ ಗಳು ಅಪಾರ ಶ್ರಮ ವಹಿಸಿ ಆಟವಾಡಿದರಾದರೂ ಡಿಫೆನ್ಸ್ ವಿಭಾಗದ ನೀರಸ ಆಟ ತಂಡದ ಸೋಲಿಗೆ ಕಾರಣವಾಯಿತು. ತೆಲುಗು ಟೈಟಾನ್ಸ್ ಪರವಾಗಿ ನಾಯಕ ಸಿದ್ಧಾರ್ಥ್ ದೇಸಾಯಿ (Siddarth Desai) ಹಾಗೂ ಅಂಕಿತ್ ಬೆನಿವಾಲ್ ತಲಾ 9 ಅಂಕ ಸಂಪಾದನೆ ಮಾಡಿದರೆ, ಕನ್ನಡಿಗ ರಾಕೇಶ್ ಗೌಡ (Rakesh Gowda) 7 ಅಂಕ ಸಂಪಾದನೆ ಮಾಡಿದ್ದರು.
SA vs India Boxing Day Test : ಭಾರತದ ದಾಳಿಗೆ ದಕ್ಷಿಣ ಆಫ್ರಿಕಾ ಕಂಗಾಲು, ದಿನದಲ್ಲಿ ಉರುಳಿತು 18 ವಿಕೆಟ್ !
ಆದರೆ, ಡಿಫೆನ್ಸ್ ವಿಭಾಗದ ಕೆಟ್ಟ ಆಟ ತಂಡದ 2 ಅಂಕಗಳ ಸೋಲಿಗೆ ಕಾರಣವಾಯಿತು. ಹರಿಯಾಣ ಸ್ಟೀಲರ್ಸ್ ಪರವಾಗಿ ಹೊಸ ಆಟಗಾರ ಮೀತು ತಮ್ಮ ಚೊಚ್ಚಲ ಸೂಪರ್ 10 ಸಾಧನೆ ಮಾಡುವ ಮೂಲಕ ಗೆಲುವಿಗೆ ಕಾರಣರಾದರೆ, ಡಿಫೆನ್ಸ್ ವಿಭಾಗದಲ್ಲಿ ರವಿ ಕುಮಾರ್ ಹಾಗೂ ಸುರೇಂದರ್ ನಡ್ಡಾ ಗಮನಸೆಳೆದರು.