ಫ್ರೆಂಚ್‌ ಓಪನ್‌ ಟೆನಿಸ್‌: ರಾಮ್‌ಕುಮಾರ್‌ಗೆ ಗೆಲುವು, ಪ್ರಜ್ನೇಶ್‌ಗೆ ಸೋಲಿನ ಶಾಕ್

By Suvarna News  |  First Published May 26, 2021, 9:29 AM IST

* ಫ್ರೆಂಚ್ ಓಪನ್‌ ಗ್ರ್ಯಾನ್‌ ಸ್ಲಾಂ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಮಿಶ್ರಫಲ

* ರಾಮ್‌ಕುಮಾರ್‌ ರಾಮನಾಥನ್‌ ಎರಡನೇ ಸುತ್ತಿಗೆ ಲಗ್ಗೆ

* ತಾರಾ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌ಗೆ ಮೊದಲ ಸುತ್ತಿನಲ್ಲೇ ನಿರಾಸೆ


ಪ್ಯಾರಿಸ್(ಮೇ.26)‌: ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ಅರ್ಹತಾ ಸುತ್ತು ಆರಂಭಗೊಂಡಿದ್ದು, ಭಾರತಕ್ಕೆ ಮಿಶ್ರಫಲ ಎದುರಾಗಿದೆ. ಒಂದು ಕಡೆ ಪುರುಷರ ಸಿಂಗಲ್ಸ್‌ ಟೆನಿಸ್ ವಿಭಾಗದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ 2ನೇ ಹಂತಕ್ಕೆ ಪ್ರವೇಶಿಸಿದ್ದಾರೆ. ಆದರೆ ಮತ್ತೊಂದೆಡೆ ತಾರಾ ಆಟಗಾರ ಪ್ರಜ್ನೇಶ್‌ ಗುಣೇಶ್ವರನ್‌ ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ 2ನೇ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ.

ಮಂಗಳವಾರ ನಡೆದ ಕಾದಾಟದಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಅಮೆರಿಕದ ಮೈಕಲ್‌ ಮೊಹ್ ವಿರುದ್ದ 2-6, 7-6(4), ಹಾಗೂ 6-3 ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ಒಂದು ಗಂಟೆ 54 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ರಾಮ್‌ಕುಮಾರ್ ಸಾಕಷ್ಟು ಬೆವರು ಹರಿಸಿ ಗೆಲುವಿನ ನಗೆ ಬೀರಿದರು. ಇನ್ನು ಮುಂದಿನ ಪಂದ್ಯದಲ್ಲಿ ರಾಮ್‌ಕುಮಾರ್ ಉಜ್ಬೇಕಿಸ್ತಾನದ ಅನುಭವಿ ಆಟಗಾರ ಡೇನಿಸ್ ಇಸ್ತೊಮಿನ್ ಅವರನ್ನು ಎದುರಿಸಲಿದ್ದಾರೆ.

Tap to resize

Latest Videos

ಫ್ರೆಂಚ್‌ ಓಪನ್‌ಗೂ ಮುನ್ನ ಸೆರೆನಾ, ಫೆಡರರ್‌ಗೆ ಆಘಾತ!

Ramkumar Ramanathan comes back from the brink to beat Michael Mmoh 2-6, 7-6(7-4), 6-3 and enter the 2nd round of the qualifiers 🎾🙌

Ram will play former World No. 33 Denis Istomin in the second round. pic.twitter.com/dzhwICV8KH

— Tata Open Maharashtra (@MaharashtraOpen)

ಇನ್ನು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ 32ನೇ ಶ್ರೇಯಾಂಕಿತ ಎಡಗೈ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌, ಜರ್ಮನಿಯ ಆಸ್ಕರ್ ಒಟ್ಟೆ ಎದುರು 2-6, 2-6 ನೇರ ಸೆಟ್‌ಗಳಲ್ಲಿ ಶರಣಾಗುವ ಮೂಲಕ ಕೂಟದಿಂದ ಹೊರಬಿದ್ದಿದ್ದಾರೆ.

click me!