
ಪ್ಯಾರಿಸ್ (ಫ್ರಾನ್ಸ್): ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿಜೋಡಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ರನ್ನರ್‌ಅಪ್ ಪ್ರಶಸ್ತಿ ಗೆದ್ದಿದೆ. ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ವಿಶ್ವ ನಂ.1 ಇಂಡೋನೇಷ್ಯಾ ಜೋಡಿ ಮಾರ್ಕಸ್ ಫೆನಾಲ್ಡಿ ಹಾಗೂ ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 18-21, 16-21 ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿ ಸೋಲುಂಡಿತು.
ಇದನ್ನೂ ಓದಿ: ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ
ಇಂಡೋನೇಷ್ಯಾ ಜೋಡಿ ವಿರುದ್ಧ ಈ ಪಂದ್ಯಕ್ಕೂ ಮುನ್ನ 0-6 ಗೆಲುವು ಸೋಲಿನ ದಾಖಲೆ ಹೊಂದಿದ್ದ ಸಾತ್ವಿಕ್-ಚಿರಾಗ್ ಸತತ 7ನೇ ಸೋಲು ಅನುಭವಿಸಿದರು. ಆಗಸ್ಟ್‌ನಲ್ಲಿ ಥಾಯ್ಲೆಂಡ್ ಓಪನ್ ಗೆಲ್ಲುವ ಮೂಲಕ ಚೊಚ್ಚಲ ಸೂಪರ್ 500 ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್-ಚಿರಾಗ್, ವಿಶ್ವಕಪ್ ಟೂರ್ 750 ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಜೋಡಿ ಎನ್ನುವ ಹಿರಿಮೆಗೆ ಪಾತ್ರವಾಯಿತು.
ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು
35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತೀಯ ಜೋಡಿ ಎಂದಿನ ಆತ್ಮವಿಶ್ವಾಸದೊಂದಿಗೆ ಆಡಲಿಲ್ಲ. ಮೊದಲ ಗೇಮ್‌ನಲ್ಲಿ 1-7ರ ಆರಂಭಿಕ ಹಿನ್ನಡೆ ಅನುಭವಿಸಿದ ಸಾತ್ವಿಕ್ ಹಾಗೂ ಚಿರಾಗ್, ಬಳಿಕ ಚೇತರಿಸಿಕೊಂಡು 17-17ರಲ್ಲಿ ಸಮಬಲ ಸಾಧಿಸಿದರು. ಆದರೆ ಇಂಡೋನೇಷ್ಯಾ ಆಟಗಾರರು ಆಕ್ರಮಣಕಾರಿ ಆಟದ ಮೂಲಕ ಗೇಮ್ ತಮ್ಮದಾಗಿಸಿಕೊಂಡರು.
2ನೇ ಗೇಮ್‌ನಲ್ಲಿ 6-6ರಲ್ಲಿ ಸಮಬಲ ಸಾಧಿಸಿದ ಭಾರತೀಯ ಜೋಡಿ ಬಳಿಕ 10-10, 12-12ರಲ್ಲಿ ಪೈಪೋಟಿ ನೀಡಿತು. ಆದರೆ ಬಿಡುವಿನ ವೇಳೆ ಬಳಿಕ ಇಂಡೋನೇಷ್ಯಾ ಜೋಡಿ ವಿಭಿನ್ನ ರಣತಂತ್ರದೊಂದಿಗೆ ಭಾರತೀಯರನ್ನು ಕಟ್ಟಿಹಾಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.