ಕೋವಿಡ್ 19 ಸೋಂಕಿನಿಂದ ತತ್ತರಿಸಿ ಹೋಗಿರುವ ಭಾರತ ಆದಷ್ಟು ಬೇಗ ಕೊರೋನಾ ಮುಕ್ತವಾಗಲಿ ಎಂದು ದಿಗ್ಗಜ ಫಾರ್ಮುಲಾ ಒನ್ ರೇಸರ್ ಲೆವಿಸ್ ಹ್ಯಾಮಿಲ್ಟನ್ ಹಾರೈಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಲಂಡನ್(ಏ.23): 7 ಬಾರಿ ಫಾರ್ಮುಲಾ ಒನ್ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್, ಕೊರೋನಾದಿಂದ ತತ್ತರಿಸಿ ಹೋಗಿರುವ ಭಾರತದ ಪರ ಕಾಳಜಿ ವ್ಯಕ್ತಪಡಿಸಿದ್ದಾರೆ. ದಿನಕ್ಕೆ 3 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಭಾರತ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಭಾರತಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಗುರುವಾರ(ಏ.23) ಬರೋಬ್ಬರಿ 3.14 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೊರೋನಾ ವೈರಸ್ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿವೆ. ನವದೆಹಲಿ, ಲಖನೌದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಂಜನ್ ಸಿಲಿಂಡರ್ ಕೊರತೆ ಎದುರಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇನ್ನು ಕರ್ನಾಟಕದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ.
undefined
ಬೆಡ್, ವೆಂಟಿಲೇಟರ್, ಆಕ್ಸಿಜನ್ ಕೊರತೆಯಾಗದಂತೆ ಶೀಘ್ರ ವ್ಯವಸ್ಥೆ: ಡಾ. ಸುಧಾಕರ್ ಭರವಸೆ
ಕೋವಿಡ್ 19 ಸೋಂಕಿನಿಂದ ದೂರವಿರಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ. ಅಂದಹಾಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮರೆಯದಿರಿ. ಕೊರೋನಾ ವೈರಸ್ ಬಗ್ಗೆ ಅತೀ ಭಯವೂ ಬೇಡ, ಅಸಡ್ಡೆಯೂ ಬೇಡ.