ಫ್ರೆಂಚ್‌ ಓಪನ್ 2020‌: ಆ್ಯಂಡಿ ಮರ್ರೆಗೆ ವೈಲ್ಡ್‌ ಕಾರ್ಡ್‌ ಪ್ರವೇಶ

By Suvarna NewsFirst Published Sep 16, 2020, 10:59 AM IST
Highlights

ಮಾಜಿ ನಂ.1 ಶ್ರೇಯಾಂಕಿತ ಟೆನಿಸ್ ಆಟಗಾರ ಆ್ಯಂಡಿ ಮರ್ರೆ ಇದೇ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್(ಸೆ.16)‌: ಬ್ರಿಟನ್‌ನ ತಾರಾ ಟೆನಿಸಿಗ ಆ್ಯಂಡಿ ಮರ್ರೆಗೆ ಸೆಪ್ಟೆಂಬರ್‌ 27 ರಿಂದ ಆರಂಭವಾಗಲಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಟೂರ್ನಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ನೀಡಲಾಗಿದೆ. 

2016ರಲ್ಲಿ ಕೆಂಪುಮಣ್ಣಿನ ಅಂಕಣದಲ್ಲಿ ಚಾಂಪಿಯನ್‌ ಆಗಿದ್ದ ಆ್ಯಂಡಿ ಮರ್ರೆ, ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ 2020ರ ಯುಎಸ್‌ ಓಪನ್‌ನಲ್ಲಿ ಆಡಿದ್ದ ಮರ್ರೆ, 2ನೇ ಸುತ್ತಲ್ಲಿ ಸೋತು ನಿರ್ಗಮಿಸಿದ್ದರು. 

ಈ ಬಾರಿ ಆ್ಯಂಡಿ ಮರ್ರೆ ಸೇರಿದಂತೆ 8 ಆಟಗಾರರು ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ಗೆ ಪ್ರಮುಖ ಸುತ್ತಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆಯಲಿದ್ದಾರೆ. ಇನ್ನು 2014ರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕೆನಡಾದ ಯುಜಿನಿ ಬೌಚರ್ಡ್‌, ಬಲ್ಗೇರಿಯಾದ ಸ್ವೆಟನಾ ಪಿರಂಕೊವಾ ಕೂಡಾ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಯುಎಸ್ ಓಪನ್ 2020: ಡೊಮಿನಿಕ್‌ ಥೀಮ್‌ ನೂತನ ಚಾಂಪಿಯನ್

ಸಾಮಾನ್ಯವಾಗಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯು ಮೇ-ಜೂನ್ ತಿಂಗಳ ಅವಧಿಯಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಕೊರೋನಾ ಭೀತಿಯಿಂದಾಗಿ ಸೆಪ್ಟೆಂಬರ್‌ಗೆ ಮುಂದೂಲ್ಪಟ್ಟಿತ್ತು. ಇದೀಗ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 11ರವರೆಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಜರುಗಲಿದೆ.
 

click me!