ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಜಪಾನಿನ ನವೊಮಿ ಒಸಾಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನ್ಯೂಯಾರ್ಕ್(ಸೆ.14): ಜಪಾನ್‌ನ ನವೊಮಿ ಒಸಾಕ ಅವರು 2020ರ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಶನಿವಾರ ತಡರಾತ್ರಿ ಮುಕ್ತಾಯವಾದ ಮಹಿಳಾ ಸಿಂಗಲ್ಸ್ ಫೈನಲ್ ಒಸಾಕ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಎದುರು 1-6, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಜಯದೊಂದಿಗೆ 22 ವರ್ಷದ ಒಸಾಕ, 2ನೇ ಬಾರಿ ಯುಎಸ್ ಓಪನ್ ಹಾಗೂ ಅಂ.ರಾ. ಟೆನಿಸ್ ವೃತ್ತಿ ಜೀವನದಲ್ಲಿ 3ನೇ ಗ್ರ್ಯಾನ್ ಸ್ಲಾಮ್ ಪಡೆದ ಸಾಧನೆ ಮಾಡಿದರು. 2018ರ ಯುಎಸ್ ಓಪನ್, 2019ರ ಆಸ್ಪ್ರೇಲಿಯನ್ ಓಪನ್‌ನಲ್ಲಿ ಒಸಾಕ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದೀಗ ಯುಎಸ್ ಓಪನ್ ಗೆಲ್ಲುವ ಮೂಲಕ ಸತತ 3 ವರ್ಷಗಳಲ್ಲಿ ಮೂರು ಗ್ರ್ಯಾನ್ ಸ್ಲಾಮ್ ಗೆದ್ದ ಕೀರ್ತಿಗೆ ಭಾಜನರಾದರು.
ಯುಎಸ್ ಓಪನ್: ಸೆರೆನಾ ಪ್ರಶಸ್ತಿ ಕನಸು ಭಗ್ನ!
From start to finish. completes an impressive with a 1-6, 6-3, 6-3 win over Victoria Azarenka in the final! pic.twitter.com/GzhXpFVhnf
— US Open Tennis (@usopen)1 ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಬೆಲಾರಸ್‌ನ ಅಜರೆಂಕಾ ಪ್ರಬಲ ಪೈಪೋಟಿ ಒಡ್ಡಿದರು. ಮೊದಲ ಸೆಟ್‌ನಲ್ಲಿ ಒಸಾಕ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದ ಅಜರೆಂಕಾ, ನಂತರದ ಎರಡು ಸೆಟ್‌ಗಳಲ್ಲಿ ಒಸಾಕ ಸರ್ವ್‌ಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು. ಕೊನೆಯ ಎರಡು ಸೆಟ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡ ಒಸಾಕ ಪಂದ್ಯ ತಮ್ಮದಾಗಿಸಿಕೊಂಡರು.