
ಪ್ಯಾರಿಸ್: 2018ರ ಚಾಂಪಿಯನ್, ವಿಶ್ವ ನಂ.2 ರೋಮೇನಿಯಾದ ಸಿಮೊನಾ ಹಾಲೆಪ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ನಿಂದ ಹೊರಬಿದ್ದಿದ್ದಾರೆ.
ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಹಾಲೆಪ್, ಶ್ರೇಯಾಂಕ ರಹಿತೆ ಪೋಲೆಂಡ್‌ನ ಇಗಾ ಸ್ವಿಟೆಕ್ ವಿರುದ್ಧ 1-6, 2-6 ನೇರ ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಸ್ವಿಟೆಕ್, ಗ್ರ್ಯಾನ್‌ಸ್ಲಾಮ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಪ್ರವೇಶಿಸಿದರು. ಉಕ್ರೇನ್‌ನ ಎಲಿನಾ ಸ್ವಿಟೊಲಿನಾ, ಇಟಲಿಯ ಮಾರ್ಟಿನಾ, ಅರ್ಜೆಂಟೀನಾದ ನದಿಯಾ ಕ್ವಾರ್ಟರ್ ಗೇರಿದರು.
ಫ್ರೆಂಚ್ ಓಪನ್: ನಡಾಲ್, ಜ್ವರೆವ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ
ನಡಾಲ್ ಕ್ವಾರ್ಟರ್‌ಗೆ: ದಾಖಲೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆಬಾಸ್ಟಿಯನ್ ವಿರುದ್ಧ 6-1, 6-1, 6-2 ರಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. ಮತ್ತೊಂದು ಪ್ರಿಕ್ವಾರ್ಟರ್‌ನಲ್ಲಿ ಜರ್ಮನಿಯ ಜ್ವೆರೆವ್, ಇಟಲಿಯ ಸಿನ್ನೆರ್ ವಿರುದ್ಧ ಸೋತು ಹೊರಬಿದ್ದರು.
ಪ್ರಿಕ್ವಾರ್ಟರ್‌ಗೆ ಜೋಕೋ: ವಿಶ್ವ ನಂ.1 ಸರ್ಬಿಯಾದ ಟೆನಿಸಿಗ ನೊವಾಕ್ ಜೋಕೋವಿಚ್, 3ನೇ ಸುತ್ತಲ್ಲಿ ಕೊಲಂಬಿಯಾದ ಡೆನಿಲ್ ಗಲನ್ ವಿರುದ್ಧ 6-0, 6-3, 6-2ರಲ್ಲಿ ಗೆದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.