ಡೇವಿಸ್‌ ಕಪ್‌: ಫಿನ್ಲೆಂಡ್‌ ವಿರುದ್ಧ ಭಾರತ ಟೆನಿಸ್ ಸೋಲು..!

Suvarna News   | Asianet News
Published : Sep 19, 2021, 08:21 AM IST
ಡೇವಿಸ್‌ ಕಪ್‌: ಫಿನ್ಲೆಂಡ್‌ ವಿರುದ್ಧ ಭಾರತ ಟೆನಿಸ್ ಸೋಲು..!

ಸಾರಾಂಶ

* ಡೇವಿಸ್‌ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಘಾತಕಾರಿ ಸೋಲು * ಫಿನ್ಲೆಂಡ್‌ ಎದುರು ಭಾರತ 1-3ರಲ್ಲಿ ಸೋತು ಹಿಂಬಡ್ತಿ ಪಡೆದಿದೆ.  * ಮೊದಲ ದಿನವೇ 2 ಸಿಂಗಲ್ಸ್‌ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿದ್ದ ಭಾರತ

ಎಸ್ಪೂ(ಸೆ.19‌): ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತ ಮುಖಭಂಗ ಅನುಭವಿಸಿದೆ. ಫಿನ್ಲೆಂಡ್‌ ವಿರುದ್ಧ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತ 1-3ರಲ್ಲಿ ಸೋತು ಹಿಂಬಡ್ತಿ ಪಡೆದಿದೆ. 2022ರ ಡೇವಿಸ್‌ ಕಪ್‌ನಲ್ಲಿ ಭಾರತ, ವಿಶ್ವ ಗುಂಪು-1ರಲ್ಲಿ ಉಳಿದುಕೊಳ್ಳಬೇಕಿದ್ದರೆ ಪ್ಲೇ-ಆಫ್‌ನಲ್ಲಿ ಆಡಬೇಕಿದೆ.

ಮೊದಲ ದಿನವೇ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿದ್ದ ಭಾರತ, ಶನಿವಾರ ಡಬಲ್ಸ್‌ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಕೊನೆ ಕ್ಷಣದಲ್ಲಿ ರೋಹನ್‌ ಬೋಪಣ್ಣ ಜೊತೆ ದಿವಿಜ್‌ ಶರಣ್‌ ಬದಲಿಗೆ ರಾಮ್‌ಕುಮಾರ್‌ ರಾಮನಾಥನ್‌ರನ್ನೇ ಕಣಕ್ಕಿಳಿಸಲು ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ನಿರ್ಧರಿಸದರು. 

ನಮ್ಮ ಸಂಬಂಧ ಸರಿಯಿರಲಿಲ್ಲ: ಭೂಪತಿ ಬಗ್ಗೆ ಪೇಸ್‌ ಅಚ್ಚರಿಯ ಹೇಳಿಕೆ

ಆದರೆ ನಿರ್ಣಾಯಕ ಪಂದ್ಯದಲ್ಲಿ ಬೋಪಣ್ಣ-ರಾಮ್‌ಕುಮಾರ್‌ ಜೋಡಿಯು 6-7, 6-7 ಸೆಟ್‌ಗಳಲ್ಲಿ ಹೆನ್ರಿ ಕೊಂಟಿನೆನ್‌ ಹಾಗೂ ಹಾರ್ರಿ ಹೆಲಿಯೊವಾರ ಜೋಡಿ ವಿರುದ್ಧ ಸೋಲುಂಡಿತು. ಔಪಚಾರಿಕವೆನಿಸಿದ್ದ 4ನೇ ಪಂದ್ಯದಲ್ಲಿ ಪ್ರಜ್ನೇಶ್‌ ಗೆದ್ದು ಸೋಲಿನ ಅಂತರವನ್ನು 1-3ಕ್ಕೆ ತಗ್ಗಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
29 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಗೆದ್ದ ಭಾರತ!