ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ, ಕಂಚು ಗೆದ್ದ ಹರ್ಜಿಂದರ್ ಕೌರ್!

Published : Aug 02, 2022, 08:35 AM ISTUpdated : Aug 02, 2022, 08:46 AM IST
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ, ಕಂಚು ಗೆದ್ದ ಹರ್ಜಿಂದರ್ ಕೌರ್!

ಸಾರಾಂಶ

ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಇದೀಗ ವೈಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಪದಕ ಗೆದ್ದುಕೊಂಡಿದೆ. ಭಾರತದ ಹರ್ಜಿಂದರ್ ಕೌರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಬರ್ಮಿಂಗ್‌ಹ್ಯಾಮ್(ಆ.02): ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಮೂಲಕ ಹಲವು ಪದಕ ಗೆದ್ದಿದ್ದ ಭಾರತ ಈ ಬಾರಿ ವೈಟ್‌ಲಿಫ್ಟಿಂಗ್ ಮೂಲಕ ಪದಕ ಬಾಚಿಕೊಳ್ಳುತ್ತಿದೆ. ಇದೀಗ ವೈಟ್‌ಲಿಫ್ಟಿಂಗ್ ಮೂಲಕ ಮತ್ತೊಂದು ಪದಕ ಗಿಟ್ಟಿಸಿಕೊಂಡಿದೆ. ಭಾರತದ ಹರ್ಜಿಂದರ್ ಕೌರ್ ಮಹಿಳೆಯರ 71 ಕೆಜಿ ವೈಟ್‌ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.  ಒಟ್ಟು 229 ಕೆಜಿ ಭಾರ ಎತ್ತುವ ಮೂಲಕ ಇಂಗ್ಲೆಂಡ್‌ನ ಸರಹ್ ಡೇವಿಸ್ ಚಿನ್ನದ ಪದಕ ಗೆದ್ದರೆ,  ಕೆನಡಾದ ಅಲೆಕ್ಸ್ ಆ್ಯಶವೂರ್ಥ್ 214 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಹರ್ಜಿಂದರ್ ಕೌರ್ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಹರ್ಜಿಂದರ್ ಕೌರ್ ಮೊದಲ ಯತ್ನಯಲ್ಲಿ 90 ಕೆಜಿ ಭಾರ ಎತ್ತಲು ವಿಫಲರಾದರು. ಎರಡನೇ ಸುತ್ತು ತೀವ್ರ ಒತ್ತಡದಿಂದ ಕೂಡಿತ್ತು. ಆದರೆ ಛಲ ಬಿಡದ ಹರ್ಜಿಂದರ್ ಕೌರ್ 90 ಕೆಜಿ ಭಾರ ಎತ್ತುವ ಮೂಲಕ ಅಡೆ ತಡೆ ನಿವಾರಿಸಿದರು. ಮೂರನೇ ಪ್ರಯತ್ನದಲ್ಲಿ ಹರ್ಜಿಂದರ್ ಕೌರ್ 93 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಖಚಿತ ಪಡಿಸಿಕೊಂಡರು.

ಹರ್ಜಿಂದರ್ ಕೌರ್ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 9ಕ್ಕೇರಿದೆ. ಭಾರತ 3 ಚಿನ್ನ, 3 ಬೆಳ್ಳಿ ಹಾಗೂ 3 ಕಂಚಿನ ಪದಕದೊಂದಿಗೆ ಒಟ್ಟು 9 ಪದಕ ೆದ್ದುಕೊಂಡಿದೆ. ಈ ಮೂಲಕ 6ನೇ ಸ್ಥಾನ ಭದ್ರಪಡಿಸಿದೆ.  ಹರ್ಜಿಂದರ್ ಕೌರ್ ಕಂಚಿನ ಪದಕಕ್ಕೂ ಮುನ್ನ ಮಹಿಳೆಯರ ವಿಭಾಗದಲ್ಲಿ  ದೇವಿ ಲಿಕ್ಮಾದಂ ಬೆಳ್ಳಿ ಪದಕ ಗೆದ್ದುಕೊಂಡರು. ಇನ್ನು  ಪುರುಷರ ವಿಭಾಗದಲ್ಲಿ ವಿಜಯ್ ಕುಮಾರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 

ಚಿನ್ನ ಗೆದ್ದ ಅಚಿಂತಾ ಶೆಯುಲಿಗೆ ಜೈ ಹೋ ಎಂದು ಭಾರತೀಯ ಸೇನೆ..!

ಜುಡೋ: ಕಂಚು ಗೆದ್ದ ವಿಜಯ್‌ ಯಾದವ್‌
ಜುಡೋ ಸ್ಪರ್ಧಿ ವಿಜಯ್‌ ಕುಮಾರ್‌ ಯಾದವ್‌. ಪುರುಷರ 60 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 28 ವರ್ಷದ ವಿಜಯ್‌ ಕಂಚು ಜಯಿಸಿದರು. ಸೈಪ್ರಸ್‌ನ ಪೆಟ್ರೊಸ್‌ ವಿರುದ್ಧ ಕೇವಲ 59 ಸೆಕೆಂಡ್‌ಗಳಲ್ಲಿ ಗೆದ್ದು ಪದಕ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಸೋತರೂ ರಿಪಿಕೇಜ್‌ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿದ್ದರು. ರಿಪಿಕೇಜ್‌ನ ಮೊದಲ ಪಂದ್ಯದಲ್ಲಿ ಗೆದ್ದ ವಿಜಯ್‌ಗೆ ಕಂಚಿನ ಪದಕದಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಿತು. 2018ರ ಏಷ್ಯಾ ಓಪನ್‌ ಟೂರ್ನಿಯಲ್ಲಿ ಕಂಚು ಜಯಿಸಿದ್ದ ವಾರಣಸಿ ಮೂಲದ ವಿಜಯ್‌, 2018, 2019ರ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಸಾಧನೆ ಮಾಡಿದ್ದರು.

ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ, ಭಾರತಕ್ಕೆ 4ನೇ ಪದಕ

22ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ದೊರೆತಿದೆ. ವೇಟ್‌ಲಿಫ್ಟಿಂಗ್‌ ಹೊರತುಪಡಿಸಿ ಬೇರೆ ಕ್ರೀಡೆಯಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಿದು. ಮಹಿಳೆಯರ 48 ಕೆ.ಜಿ. ವಿಭಾಗದ ಜುಡೋ ಸ್ಪರ್ಧೆಯಲ್ಲಿ ಸುಶೀಲಾ ದೇವಿ ಪದಕ ಜಯಿಸಿದ್ದಾರೆ. ಆಕರ್ಷಕ ಪ್ರದರ್ಶನ ತೋರಿ ಫೈನಲ್‌ಗೇರಿದ್ದ ಸುಶೀಲಾ, ಚಿನ್ನದ ಪದಕದ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಜೆರೊನೆ ವೈಟ್‌ಬೊಯಿ ವಿರುದ್ಧ 0-1 ಅಂತರದಲ್ಲಿ ಸೋಲುಂಡರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸಿಲ್ಲಾ ಮೊರಾಂಡ್‌ ವಿರುದ್ಧ ಮಣಿಪುರದ 27 ವರ್ಷದ ಸುಶೀಲಾ ಜಯಗಳಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!