ಭಾರತದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಚೀನಾ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ಈ ಕುರಿತಾದ ಜೋಡಿ ಇಲ್ಲಿದೆ ನೋಡಿ
ಫುಝೋ(ನ.10): ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ, ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದರು.
Highlights | Minions activate ludicrous mode with unimaginable speed as they prevail over Rankireddy and Shetty in an electrifying semifinal 🏸
pic.twitter.com/ZqQ7l8SBEx
ಚೀನಾ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಸಾತ್ವಿಕ್-ಚಿರಾಗ್!
ಶನಿವಾರ ನಡೆದ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ, ವಿಶ್ವ ನಂ.1 ಇಂಡೋನೇಷ್ಯಾದ ಮಾರ್ಕಸ್-ಕೆವಿನ್ ಜೋಡಿ ವಿರುದ್ಧ 16-21, 20-22 ರಿಂದ ಸೋತರು. ಇಂಡೋನೇಷ್ಯಾದ ಜೋಡಿ ಮೊದಲ ಗೇಮ್’ನಲ್ಲಿ ಮಿಂಚಿನ ಆಟ ಪ್ರದರ್ಶಿಸಿ ಮುನ್ನಡೆ ಗಳಿಸಿತು. ಆದರೆ ಎರಡನೇ ಗೇಮ್’ನಲ್ಲಿ ಆಕ್ರಮಣಕಾರಿಯಾಟ ಪ್ರದರ್ಶಿಸಿದ ಭಾರತದ ಜೋಡಿ, ವಿಶ್ವ ನಂ.1 ಶ್ರೇಯಾಂಕಿತ ಜೋಡಿಗೆ ಆಘಾತ ಮೂಡಿಸುವ ಹೊಸ್ತಿಲಲ್ಲಿತ್ತು. ಆದರೆ ಕೊನೆಯ ಎಚ್ಚೆತ್ತುಕೊಂಡು ಕೇವಲ 2 ಅಂಕಗಳ ಅಂತರಲ್ಲಿ ಜಯ ಸಾಧಿಸಿತು. ಸಾತ್ವಿಕ್-ಚಿರಾಗ್ ಜೋಡಿ ಟೂರ್ನಿ ಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದರು.
Play of the Day | Reflexes that defy the laws of nature in a classic Gideon and Sukamuljo display 🏸 pic.twitter.com/O3U23eGM2w
— BWF (@bwfmedia)ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.3ನೇ ಶ್ರೇಯಾಂಕಿತ ಜೋಡಿಯಾದ ಚೀನಾದ ಲಿ ಜುನ್ ಹುಯಿ ಹಾಗೂ ಲಿಯು ಯು ಚೆನ್ ವಿರುದ್ಧ ಜಯಭೇರಿ ಭಾರಿಸುವ ಮೂಲಕ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿತ್ತು.