
ನವದೆಹಲಿ(ಜೂ.12): 5 ಬಾರಿ ವಿಶ್ವ ಚಾಂಪಿಯನ್, ದಿಗ್ಗಜ ಚೆಸ್ ಪಟು ವಿಶ್ವನಾಥನ್ ಆನಂದ್ ಜೊತೆ ಭಾರತದ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಭಾನುವಾರ ಆನ್‌ಲೈನ್‌ನಲ್ಲಿ ಪ್ರದರ್ಶನ ಚೆಸ್ ಪಂದ್ಯವೊಂದನ್ನು ಆಡಲಿದ್ದಾರೆ. ಚಹಲ್ ಕ್ರಿಕೆಟಿಗನಾಗುವ ಮೊದಲು ಚೆಸ್ ಪಟುವಾಗಿದ್ದರು. ಕಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಅಕ್ಷಯಪಾತ್ರಾ ಯೋಜನೆಯಡಿ ಕೋವಿಡ್ ತಡೆಗೆ ನಿಧಿ ಸಂಗ್ರಹಕ್ಕಾಗಿ ಈ ಪಂದ್ಯ ನಡೆಯಲಿದೆ. ಚಕ್‌ಮೇಟ್ ಕೋವಿಡ್ ಸೆಲಿಬ್ರಿಟಿ ಆವೃತ್ತಿಯಲ್ಲಿ ಆನಂದ್ ಎದುರು ಯುಜುವೇಂದ್ರ ಚಹಲ್ ಮುಖಾಮುಖಿಯಾಗಲಿದ್ದಾರೆ. ಜೂನ್ 13ರ ಸಂಜೆ 5 ಗಂಟೆಗೆ ಈ ಚೆಸ್ ಪಂದ್ಯ ಆರಂಭವಾಗಲಿದ್ದು, ಚೆಸ್.ಕಾಂ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಈ ಚೆಸ್ ಪಂದ್ಯ ನೇರ ಪ್ರಸಾರವಾಗಲಿದೆ. 5 ಬಾರಿಯ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಭಾರತದ 10 ಸೆಲಿಬ್ರಿಟಿಗಳು ಹಾಗೂ ಉದ್ದಿಮೆದಾರರೊಂದಿಗೆ ಒಂದು ಗಂಟೆ ಅವಧಿಯಲ್ಲಿ ಚೆಸ್ ಆಡಲಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ದಿಗ್ಗಜ ಚೆಸ್ ಆಟಗಾರ ಆನಂದ್ ಜತೆ ಆನ್‌ಲೈನ್‌ನಲ್ಲಿ ಚೆಸ್ ಆಡಲಿದ್ದಾರೆ.
ವಿಶ್ವನಾಥನ್ ಆನಂದ್‌ಗೆ ಅಮೀರ್ ಖಾನ್ ಚೆಸ್ ಸವಾಲು..!
ವಿಶ್ವನಾಥನ್ ಆನಂದ್ ಜತೆ ಚೆಸ್ ಆಡುವ ಸೆಲಿಬ್ರಿಟಿಗಳೆಂದರೆ: ನಟ ಅಮೀರ್ ಖಾನ್, ಸುದೀಪ್, ರಿತೇಶ್ ದೇಶ್‌ಮುಖ್, ಸಿಂಗರ್ ಅರ್ಜಿತ್ ಸಿಂಗ್, ಅನನ್ಯ ಬಿರ್ಲಾ, ಯುಜುವೇಂದ್ರ ಚಹಲ್, ನಿರ್ಮಾಪಕ ಸಜಿದ್ ನದಿದ್‌ವಾಲಾ, ಪ್ರಚಾರ ಪಡುಕನ್ನಯ್ಯ, ಉದ್ದಿಮೆದಾರರಾದ ಮನು ಕುಮಾರ್ ಜೈನ್, ನಿಖಿಲ್ ಕಾಮತ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.