ಹೆಚ್ಚಾದ ಡೋಪಿಂಗ್‌: ಕ್ರೀಡಾ ಸಚಿವ ರಿಜಿಜು ಆತಂಕ

By Kannadaprabha NewsFirst Published Dec 11, 2019, 12:38 PM IST
Highlights

ದೇಶದ ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದರ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನವದೆಹಲಿ(ಡಿ.11): ಭಾರತದಲ್ಲಿ ಹೆಚ್ಚುತ್ತಿರುವ ಡೋಪಿಂಗ್‌ ಪ್ರಕರಣಗಳ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ದೀಪನಾ ಮದ್ದು ಸೇವಿಸಿ ಮೋಸ ಮಾಡುವ ಕ್ರೀಡಾಪಟುಗಳಿಗೆ ತಿಳುವಳಿಕೆ ಹೇಳುವಂತಹ ಕೆಲಸಗಳು ನಡೆಯಬೇಕು. ಈ ಮೂಲಕ ಭಾರತವನ್ನು ಉತ್ಕೃಷ್ಟ ಕ್ರೀಡಾ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಬೇಕು ಎಂದು ರಿಜಿಜು ಹೇಳಿದ್ದಾರೆ. 

ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

‘ಡೋಪಿಂಗ್‌ನಲ್ಲಿ ಸಿಕ್ಕಿಬೀಳುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ಉದ್ದೀಪನಾ ಸೇವನೆ ಮಾಡಿರುತ್ತಾರೆ ಎನ್ನುವುದು ತಪ್ಪು. ಹೀಗಾಗಿ, ಕ್ರೀಡಾಪಟುಗಳಿಗೆ ತಾವು ಸೇವಿಸುವ ಔಷಧ, ಆಹಾರ ಪೂರಕಗಳ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ರಿಜಿಜು ಹೇಳಿದ್ದಾರೆ. ಈ ವರ್ಷ 150ಕ್ಕೂ ಹೆಚ್ಚು ಭಾರತೀಯ ಕ್ರೀಡಾಪಟುಗಳು ಡೋಪಿಂಗ್‌ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ.

ಸುನಿಲ್‌ ಶೆಟ್ಟಿ NADA ರಾಯಭಾರಿ:

ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ)ದ ರಾಯಭಾರಿಯಾಗಿ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿಅವರನ್ನು ಮಂಗಳವಾರ ನೇಮಕ ಮಾಡಲಾಯಿತು. ಶಾಲಾ ಮಟ್ಟದಲ್ಲಿ ಸುನಿಲ್‌ ಶೆಟ್ಟಿ, ಡೋಪಿಂಗ್‌ನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದು ನಾಡಾ ನಿರ್ದೇಶಕ ನವೀನ್‌ ಅಗರ್‌ವಾಲ್‌ ಹೇಳಿದರು.
 

click me!