* ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಫೈನಲ್ ಪಂದ್ಯ
* ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಮುಖಾಮುಖಿ
* 21ನೇ ಗ್ರ್ಯಾನ್ ಸ್ಲಾಂ ಜಯಿಸಿ ಇತಿಹಾಸ ಬರೆಯಲು ಸಜ್ಜಾದ ನಡಾಲ್
ಮೆಲ್ಬರ್ನ್(ಜ.30): ಕಳೆದ ವರ್ಷ ವಿಂಬಲ್ಡನ್ (Wimbledon) ಮುಕ್ತಾಯಗೊಂಡಾಗಿನಿಂದಲೂ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ಮೊದಲ ಆಟಗಾರ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಆ ಕುತೂಹಲಕ್ಕೆ ಭಾನುವಾರ (ಜ.30) ಉತ್ತರ ಸಿಗಬಹುದು. ಇಲ್ಲವೇ ಕುತೂಹಲ ಇನ್ನಷ್ಟು ದಿನ ಮುಂದುವರಿಯಲೂಬಹುದು. ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ (Rafael Nadal) ಹಾಗೂ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ (Daniil Medvedev) ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಇಡೀ ಟೆನಿಸ್ ಜಗತ್ತೇ ಕಾಯುತ್ತಿದೆ.
20 ಟೆನಿಸ್ ಗ್ರ್ಯಾನ್ ಸ್ಲಾಂಗಳ ಒಡೆಯ ನಡಾಲ್, ರೋಜರ್ ಫೆಡರರ್ (Roger Federer) ಹಾಗೂ ನೋವಾಕ್ ಜೋಕೋವಿಚ್ (Novak Djokovic) ಜೊತೆ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಈ ಇಬ್ಬರನ್ನೂ ಹಿಂದಿಕ್ಕಬೇಕಿದ್ದರೆ ನಡಾಲ್, ವಿಶ್ವ ನಂ.2 ಹಾಲಿ ಯುಎಸ್ ಓಪನ್ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್‌ರನ್ನು ಸೋಲಿಸಬೇಕಿದೆ. ಇದು ನಡಾಲ್‌ಗೆ ಒಟ್ಟಾರೆ 28ನೇ ಗ್ರ್ಯಾನ್ ಸ್ಲಾಂ ಫೈನಲ್. ಇನ್ನೊಂದು ಗೆಲುವು ದಾಖಲಿಸಿದರೆ ನಡಾಲ್, ಇಬ್ಬರು ಟೆನಿಸ್ ದಿಗ್ಗಜರಾದ ಫೆಡರರ್ ಹಾಗೂ ಜೋಕೋವಿಚ್ ಅವರನ್ನು ಹಿಂದಿಕ್ಕಿ ಅತಿಹೆಚ್ಚು ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಕಳೆದ ವಿಂಬಲ್ಡನ್‌ನಲ್ಲಿ 20ನೇ ಪ್ರಶಸ್ತಿ ಜಯಿಸಿದ್ದ ಜೋಕೋವಿಚ್‌ರನ್ನು ಯುಎಸ್ ಓಪನ್ (US Open Tennis Tournament) ಫೈನಲ್‌ನಲ್ಲಿ ಸೋಲಿಸಿ 21ನೇ ಗ್ರ್ಯಾನ್ ಸ್ಲಾಂ ಗೆಲುವಿಗೆ ಅಡ್ಡಿಯಾಗಿದ್ದ ಮೆಡ್ವೆಡೆವ್, ನಡಾಲ್‌ರ ದಾಖಲೆಯ ಹಾದಿಯಲ್ಲಿ ನಿಂತಿದ್ದಾರೆ. 2019ರ ಯುಎಸ್ ಓಪನ್ ಫೈನಲ್‌ನಲ್ಲಿ ನಡಾಲ್ ವಿರುದ್ಧ ಡ್ಯಾನಿಲ್ ಸೋತಿದ್ದರು. ಒಟ್ಟಾರೆ ಈ ಇಬ್ಬರು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 3ರಲ್ಲಿ ನಡಾಲ್, 1ರಲ್ಲಿ ಮೆಡ್ವೆಡೆವ್ ಗೆದ್ದಿದ್ದಾರೆ.
The final showdown is almost here 🔥 • • pic.twitter.com/iR60HNMRlg
— #AusOpen (@AustralianOpen)Australian Open : ಫೈನಲ್‌ಗೆ ರಾಫೆಲ್ ನಡಾಲ್, ಡ್ಯಾನಿಲ್ ಮೆಡ್ವೆಡೆವ್
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
ಅಂಪೈರ್ ವಿರುದ್ಧ ಕೂಗಾಡಿದ ಮೆಡ್ವೆಡೆವ್‌ಗೆ 9 ಲಕ್ಷ ರುಪಾಯಿ ದಂಡ
ಸೆಮಿಫೈನಲ್‌ನಲ್ಲಿ ಸಿಟ್ಸಿಪಾಸ್‌ರ (Stefanos Tsitsipas) ತಂದೆ ಸ್ಟ್ಯಾಂಡ್ಸ್‌ನಿಂದ ಕೋಚಿಂಗ್ ಮಾಡುತ್ತಿದ್ದಾರೆ ಎಂದು ದೂರಿದಾಗ ಅಂಪೈರ್ ಕ್ರಮಕೈಗೊಳ್ಳದ್ದಕ್ಕೆ ಸಿಟ್ಟಾಗಿ ಕೂಗಾಡಿದ್ದ ಮೆಡ್ವೆಡೆವ್‌ಗೆ ಆಸ್ಪ್ರೇಲಿಯನ್ ಓಪನ್ ಆಯೋಜಕರು 12,000 ಅಮೆರಿಕನ್ ಡಾಲರ್(ಅಂದಾಜು 9 ಲಕ್ಷ ರು.) ದಂಡ ವಿಧಿಸಿದ್ದಾರೆ.
ಫ್ರಾನ್ಸ್‌ನ ಕೋವಿಡ್ ನಿಯಮ ಮತ್ತೆ ಬದಲು: ಜೋಕೋಗೆ ಸಂಕಷ್ಟ
ಪ್ಯಾರಿಸ್: ಫ್ರಾನ್ಸ್‌ನ ಕೋವಿಡ್ ನಿಯಮದಲ್ಲಿ (COVID Rules) ಮತ್ತೊಮ್ಮೆ ಬದಲಾವಣೆಯಾಗಿದ್ದು, ಕೋವಿಡ್ ಲಸಿಕೆ (COVID Vaccine) ಪಡೆಯದೆ ಫ್ರೆಂಚ್ ಓಪನ್‌ನಲ್ಲಿ (French Open) ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದ ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.
Australian Open 2022: ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಜಯಿಸಿ ಇತಿಹಾಸ ಬರೆದ ಆ್ಯಶ್ಲೆ ಬಾರ್ಟಿ
ಹೊಸ ನಿಯಮದ ಪ್ರಕಾರ, 4 ತಿಂಗಳ ಹಿಂದೆ ಸೋಂಕು ತಗುಲಿದ್ದರಷ್ಟೇ ಕೋವಿಡ್ ಲಸಿಕೆ ಪಡೆಯದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ. ಟೂರ್ನಿ ಮೇ ತಿಂಗಳಲ್ಲಿ ನಡೆಯಲಿದ್ದು, ಕಳೆದ ಡಿಸೆಂಬರ್ 16ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದ ಜೋಕೋವಿಚ್, ಲಸಿಕೆ ಪಡೆದರಷ್ಟೇ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಕಳೆದ ವಾರವಷ್ಟೇ ಕೋವಿಡ್‌ಗೆ ತುತ್ತಾಗಿ 6 ತಿಂಗಳ ವರೆಗೂ ಲಸಿಕೆ ಪಡೆಯದೆ ಟೂರ್ನಿಯಲ್ಲಿ ಆಡಬಹುದು ಎಂದು ಫ್ರಾನ್ಸ್ ಸರ್ಕಾರ (France Govt) ತಿಳಿಸಿತ್ತು. ನಿಯಮದಲ್ಲಿ ಬದಲಾವಣೆಯಾಗಿರುವ ಕಾರಣ, ಆಸ್ಪ್ರೇಲಿಯನ್ ಓಪನ್‌ನಿಂದ ಹೊರಬಿದ್ದಂತೆ ಫ್ರೆಂಚ್ ಓಪನ್‌ನಲ್ಲಿ ಆಡುವ ಅರ್ಹತೆಯನ್ನೂ ಜೋಕೋವಿಚ್ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.