ಆಸ್ಟ್ರೇಲಿಯನ್ ಓಪನ್‌ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸನಿಹಕ್ಕೆ ನಡಾಲ್‌

Published : Feb 16, 2021, 09:04 AM IST
ಆಸ್ಟ್ರೇಲಿಯನ್ ಓಪನ್‌ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸನಿಹಕ್ಕೆ ನಡಾಲ್‌

ಸಾರಾಂಶ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ ಟೆನಿಸ್ ದಿಗ್ಗಜ ರಾಫೆಲ್‌ ನಡಾಲ್‌ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಇನ್ನು 3 ಪಂದ್ಯಗಳನ್ನು ಗೆದ್ದರೆ ರಾಫಾ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮೆಲ್ಬರ್ನ್‌(ಫೆ.16): ಸ್ಪೇನ್‌ನ ರಾಫೆಲ್‌ ನಡಾಲ್‌ ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲಲು ಇನ್ನು ಕೇವಲ 3 ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನ ಕ್ವಾರ್ಟರ್‌ ಫೈನಲ್‌ಗೆ ನಡಾಲ್‌ ಪ್ರವೇಶಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, ಇಟಲಿಯ ಫ್ಯಾಬಿಯೋ ಫೋಗ್ನಿನಿ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು. ಅಂತಿಮ 8ರ ಸುತ್ತಿನಲ್ಲಿ ನಡಾಲ್‌ಗೆ ಗ್ರೀಸ್‌ನ ಸ್ಟೆಫಾನೋಸ್‌ ಟಿಟ್ಸಿಪಾಸ್‌ ಎದುರಾಗಲಿದ್ದಾರೆ. 43ನೇ ಬಾರಿಗೆ ನಡಾಲ್‌ ಗ್ರ್ಯಾನ್‌ ಸ್ಲಾಂ ಕ್ವಾರ್ಟರ್‌ಗೇರಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

ಉಳಿದ 3 ಕ್ವಾರ್ಟರ್‌ಗಳಲ್ಲಿ ಜೋಕೋವಿಚ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್‌, ಗ್ರಿಗರ್‌ ಡಿಮಿಟ್ರೊವ್‌ ಹಾಗೂ ಕರಾಟ್ಸೆವ್‌, ರುಬ್ಲೆವ್‌ ಹಾಗೂ ಮೆಡ್ವೆಡೆವ್‌ ಸೆಣಸಲಿದ್ದಾರೆ. ಇದೇ ವೇಳೆ ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಅಮೆರಿಕದ ಶೆಲ್ಬಿ ರೋಜ​ರ್ಸ್‌ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದು ಕ್ವಾರ್ಟರ್‌ ಫೈನಲ್‌ಗೇರಿದರು. ಅಂತಿಮ 8ರ ಸುತ್ತಿನಲ್ಲಿ ಬಾರ್ಟಿಗೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ಎದುರಾಗಲಿದ್ದಾರೆ. ಉಳಿದ 3 ಕ್ವಾರ್ಟರ್‌ಗಳಲ್ಲಿ ಸೆರೆನಾ ವಿಲಿಯಮ್ಸ್‌ ಹಾಗೂ ಸಿಮೋನಾ ಹಾಲೆಪ್‌, ಒಸಾಕ ಹಾಗೂ ಶೀ ಸು ವೀ, ಜೆನಿಫರ್‌ ಬ್ರಾಡಿ ಹಾಗೂ ಜೆಸಿಕಾ ಪೆಗುಲಾ ಮುಖಾಮುಖಿಯಾಗಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗೆಲ್ಲಲು ಭಾರತ ಮಾಡಬೇಕಾದ್ದೇನು? ಪ್ರಧಾನಿ ಮೋದಿ ಮಹತ್ವದ ಸೂತ್ರ
ಕಂಠೀರವ ಸ್ಟೇಡಿಯಂಗೆ ಕ್ರೀಡಾ ಇಲಾಖೆ ಕಾಯಕಲ್ಪ; ಹೊರಾಂಗಣ ಕ್ರೀಡಾಂಗಣದಲ್ಲಿ ಬಹುಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣ!