ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ಜೋಕೋವಿಚ್, ಸೆರೆನಾ ವಿಲಿಯಮ್ಸ್ ಅನಾಯಾಸವಾಗಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಫೆ.9): ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿರುವ ಸೆರೆನಾ ವಿಲಿಯಮ್ಸ್ ಹಾಗೂ ನೋವಾಕ್ ಜೋಕೋವಿಚ್ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿದ್ದಾರೆ.
ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ಜರ್ಮನಿಯ ಲಾರಾ ಸೀಜ್‌ಮಂಡ್ ವಿರುದ್ಧ 6-1, 6-1 ನೇರ ಸೆಟ್‌ಗಳಲ್ಲಿ ಜಯಿಸಿದರು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಜೋಕೋವಿಚ್, ಫ್ರಾನ್ಸ್‌ನ ಜೆರೆಮಿ ಚಾರ್ಡಿ ವಿರುದ್ಧ 6-3, 6-1, 6-2 ಸೆಟ್‌ಗಳಲ್ಲಿ ಗೆದ್ದರು.
What a way to kick of 🙌
Catch this moment to see the best of Day 1️⃣👇https://t.co/yAr7Owkos1
✅ Day 1 done
And what a flying start it was 👏 | pic.twitter.com/8MbcbGvjci
ಆಸ್ಟ್ರೇಲಿಯನ್ ಓಪನ್: ದಾಖಲೆ ಹೊಸ್ತಿಲಲ್ಲಿ ಸೆರೆನಾ, ನಡಾಲ್, ಜೋಕೋವಿಚ್
ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್, 3ನೇ ಶ್ರೇಯಾಂಕಿತೆ ನವೊಮಿ ಒಸಾಕ, ಪುರುಷರ ಸಿಂಗಲ್ಸ್‌ನಲ್ಲಿ ಡೊಮಿನಿಕ್ ಥೀಮ್, ಅಲೆಕ್ಸಾಂಡರ್ ಜ್ವೆರೆವ್ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.