ಏಷ್ಯನ್‌ ಕುಸ್ತಿ: ಭಾರತಕ್ಕೆ ಮತ್ತೆ 3 ಕಂಚು

By Suvarna News  |  First Published Feb 20, 2020, 10:22 AM IST

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಎರಡನೇ ದಿನ ಭಾರತದ ಕುಸ್ತಿಪಟುಗಳು 3 ಕಂಚಿನ ಪದಕ ಬಾಚಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ನವದೆಹಲಿ(ಫೆ.20): ಭಾರತದ ಕುಸ್ತಿಪಟುಗಳಾದ ಆಶು, ಆದಿತ್ಯ ಹಾಗೂ ಹರ್‌ದೀಪ್‌, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೋ ರೋಮನ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಏಷ್ಯನ್ ಕುಸ್ತಿ: ವಿನೇಶ್‌, ಭಜರಂಗ್‌ ಮೇಲೆ ಹೆಚ್ಚಿನ ನಿರೀಕ್ಷೆ

Latest Videos

undefined

ಗ್ರೀಕೋ ರೋಮನ್‌ ವಿಭಾಗದಲ್ಲಿ ಭಾರತ 1 ಚಿನ್ನ, 4 ಕಂಚು ಸೇರಿದಂತೆ ಒಟ್ಟು 5 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ. 2019ರ ಆವೃತ್ತಿಯಲ್ಲಿ 3 ಬೆಳ್ಳಿ 1 ಕಂಚು ಗೆದ್ದಿದ್ದ ಭಾರತ ಈ ಬಾರಿ ಚಿನ್ನ ಗೆಲ್ಲುವುದರೊಂದಿಗೆ ಅತ್ಯುತ್ತಮ ಪ್ರದರ್ಶನ ತೋರಿದೆ.

ಏಷ್ಯನ್‌ ಕುಸ್ತಿ: ಐತಿಹಾಸಿಕ ಚಿನ್ನ ಗೆದ್ದ ಸುನಿಲ್‌ ಕುಮಾರ್‌!

ಬುಧವಾರ ನಡೆದ 67 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಶು, ಸಿರಿಯಾದ ಅಬ್ದುಲ್‌ ಕರೀಂ ಮೊಹಮದ್‌ ಅಲ್‌-ಹಸನ್‌ ವಿರುದ್ಧ 6-1 ರಿಂದ ಜಯಗಳಿಸಿದರು. 72 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಆದಿತ್ಯ ಕುಂಡು, ಜಪಾನ್‌ನ ನವೊ ಕುಸಾಕ ಎದುರು 10-0 ಯಿಂದ ಗೆಲುವು ಪಡೆದರೆ, 97 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಹರ್‌ದೀಪ್‌, ಕಜಕಸ್ತಾನದ ಮಕ್‌ಮುದೊವ್‌ ವಿರುದ್ಧ 3-1 ರಿಂದ ಜಯಭೇರಿ ಬಾರಿಸಿ ಪದಕ ಗಳಿಸಿದರು. ಮತ್ತೊಂದು ಪದಕದ ಭರವಸೆ ಮೂಡಿಸಿದ್ದ ಜ್ಞಾನೇಂದ್ರ 60 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ 0-6 ರಿಂದ ಪರಾಭವಗೊಂಡರು.

ಬುಧವಾರ ಗ್ರೀಕೋ ರೋಮನ್‌ ವಿಭಾಗದ ಸ್ಪರ್ಧೆಗಳು ಮುಕ್ತಾಯವಾಗಿದ್ದು ಗುರುವಾರದಿಂದ ಮಹಿಳಾ ವಿಭಾಗದ ಸ್ಪರ್ಧೆಗಳು ಆರಂಭಗೊಳ್ಳಲಿವೆ.
 

click me!