ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಬಾರ್ಸಿಲೋನಾ(ಫೆ.20): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಪ್ರವೇಶಿಸಿದ್ದಾರೆ.
Saina Nehwal advances to second round in Barcelona Spain Masters but H S Prannoy bows out.
— Press Trust of India (@PTI_News)ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟ ಸೈನಾ, ಶ್ರೀಕಾಂತ್
ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ, ಜರ್ಮನಿಯ ಯೊವೊನ್ನೆ ಲೀ ವಿರುದ್ಧ 21-16, 21-14 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಶ್ರೀಕಾಂತ್, ಭಾರತದವರೇ ಆದ ಶುಭಾಂಕರ್ ಡೇ ವಿರುದ್ಧ 23-21, 21-18 ಗೇಮ್‌ಗಳಲ್ಲಿ ಗೆದ್ದರು ಮುನ್ನಡೆದರು.
ಕ್ರೀಡಾ ಕ್ಷೇತ್ರದ 'ಆಸ್ಕರ್' ಲಾರೆಸ್ ಪ್ರಶಸ್ತಿ ಜಯಿಸಿದ ಸಚಿನ್ ತೆಂಡುಲ್ಕರ್..!
ಈ ವರ್ಷ ಶ್ರೀಕಾಂತ್‌ಗಿದು ಮೊದಲ ಗೆಲುವು. 2ನೇ ಸುತ್ತಿನಲ್ಲಿ ಶ್ರೀಕಾಂತ್‌ಗೆ ಭಾರತದ ಅಜಯ್ ಜಯರಾಮ್ ಎದುರಾಗಲಿದ್ದಾರೆ. ಇದೇ ವೇಳೆ ಪಿ.ಕಶ್ಯಪ್ ಹಾಗೂ ಎಚ್.ಎಸ್.ಪ್ರಣಯ್ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದರು.