ಏಷ್ಯನ್‌ ವಾಲಿಬಾಲ್ ಚಾಂಪಿಯನ್‌ಶಿಪ್‌‌: ಭಾರತಕ್ಕೆ 9ನೇ ಸ್ಥಾನ

By Suvarna NewsFirst Published Sep 20, 2021, 9:32 AM IST
Highlights

* ಏಷ್ಯನ್ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ 9ನೇ ಸ್ಥಾನ ಪಡೆದ ಭಾರತ

* ಕರ್ನಾಟಕದ ಕಾರ್ತಿಕ್‌ ಅಶೋಕ್‌ ನೇತೃತ್ವದ ಭಾರತ ವಾಲಿಬಾಲ್ ತಂಡಕ್ಕೆ ನಿರಾಸೆ

* ವಾಲಿಬಾಲ್ ಟೂರ್ನಿಯಲ್ಲಿ ಇರಾನ್‌ ಚಾಂಪಿಯನ್‌ 

ಚಿಬಾ(ಸೆ.20‌): ಏಷ್ಯನ್‌ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ 9ನೇ ಸ್ಥಾನ ಪಡೆದಿದೆ. ‘ಎ’ ಗುಂಪಿನಲ್ಲಿದ್ದ ಭಾರತ ಮೊದಲ 3 ಪಂದ್ಯಗಳಲ್ಲಿ ಸೋಲು ಅನುಭವಿಸಿ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿತ್ತು. 

ಬಳಿಕ 9ರಿಂದ 16ನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕುವೈಟ್‌, ಕಜಕಸ್ತಾನ ವಿರುದ್ಧ ಗೆದ್ದು, 9ರಿಂದ 12ನೇ ಸ್ಥಾನಕ್ಕಾಗಿ ನಡೆದ ಸೆಮಿಫೈನಲ್‌ ಸ್ಪರ್ಧೆ ಪ್ರವೇಶಿಸಿತು. ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 3-0ಯಲ್ಲಿ ಗೆದ್ದ ಭಾರತ, 9 ಹಾಗೂ 10ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಹರೇನ್‌ ವಿರುದ್ಧ 3-2 ಗೇಮಗಳಲ್ಲಿ ಜಯಗಳಿಸಿತು. 

Indian volleyball team finished in ninth place in the Asian volleyball championship with a 3-2 win over Bahrain.😍💥

📸Olympics pic.twitter.com/WLmghwjyPi

— Khel Now (@KhelNow)

16 ದೇಶಗಳು ಸ್ಪರ್ಧಿಸಿದ್ದ ಟೂರ್ನಿಯಲ್ಲಿ ಇರಾನ್‌ ಚಾಂಪಿಯನ್‌ ಆದರೆ, ಜಪಾನ್‌ 2ನೇ ಸ್ಥಾನ ಪಡೆಯಿತು. ಇನ್ನು ಚೀನಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು ಮೊದಲೆರಡು ಸ್ಥಾನ ಪಡೆದ ತಂಡಗಳು 2022ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದವು. ಭಾರತ ತಂಡವನ್ನು ಕರ್ನಾಟಕದ ಕಾರ್ತಿಕ್‌ ಅಶೋಕ್‌ ಮುನ್ನಡೆಸಿದ್ದರು.

ಮೇಜರ್ ಧ್ಯಾನ್‌ಚಂದ್‌ ಖೇಲ್‌ ರತ್ನಕ್ಕೆ 4 ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರ ಹೆಸರು ಶಿಫಾರಸು

2021 Asian Men's Volleyball Championship
🥇 IRAN
🥈 JAPAN
🥉 CHINA

Congratulation IRAN
Well deserved win 🏆🎉

— RYUJIN NIPPON 🇯🇵 🇮🇩 (@ryujin_update)

ಸದ್ಯ ಭಾರತ ಪುರುಷರ ವಾಲಿಬಾಲ್ ತಂಡವು 71ನೇ ರ‍್ಯಾಂಕಿಂಗ್‌ ಹೊಂದಿದೆ. 2019ರಲ್ಲಿ ನಡೆದ ಏಷ್ಯನ್‌ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು. ಇನ್ನ 2005ರಲ್ಲಿ ನಡೆದ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದ ಭಾರತ 4ನೇ ಸ್ಥಾನ ಪಡೆದಿತ್ತು.

click me!