
ವಾರಾಂಗಲ್(ಸೆ.20): 60ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 1 ಚಿನ್ನದ ಪದಕ ಗೆದ್ದಿದೆ. ಹೆಪ್ಟಾಥ್ಲಾನ್‌ನಲ್ಲಿ ರಾಜ್ಯದ ಅಕ್ಷತಾ ಚಿನ್ನದ ಪದಕ ಜಯಿಸಿದರು.
2ನೇ ಸ್ಥಾನ ಪಡೆದ ರೈಲ್ವೇಸ್ ಅಥ್ಲೀಟ್‌ಗಿಂತ ಅಕ್ಷತಾ 46 ಅಂಕ ಹೆಚ್ಚು ಪಡೆದರು. ಭಾನುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ರೈಲ್ವೇಸ್ 13 ಚಿನ್ನ ಸೇರಿ ಒಟ್ಟು 36 ಪದಕ ಗೆದ್ದು ಮೊದಲ ಸ್ಥಾನ ಪಡೆಯಿತು.
ರಾಷ್ಟ್ರೀಯ ಕುಸ್ತಿ: ರಾಜ್ಯದ ಲೀನಾಗೆ ಕಂಚು
ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಅಂಡರ್-23 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಲೀನಾ ಅಂತೋನಿ ಸಿದ್ದಿ 65 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ವಿಶ್ವ ಪ್ಯಾರಾ ಕ್ಲೈಂಬಿಂಗ್: ರಾಜ್ಯದ ಸುನಿತಾಗೆ ಒಲಿದ ಕಂಚು
ಉತ್ತರ ಕನ್ನಡದ ಹಳಿಯಾಳ ಮೂಲದ ಇವರ ಸಾಧನೆಯನ್ನು ರಾಜ್ಯ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ನಾರಾಯಣಗೌಡ ಅವರು ಶ್ಲಾಘಿಸಿದ್ದು, ಟ್ವೀಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.