ದುಬೈ(ಮೇ.30): ಭಾರತದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 51 ಕೆಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ಸ್ ಸುತ್ತಿನಲ್ಲಿ ಮೇರಿ ಕೋಮ್, ಕಜಕಿಸ್ತಾನದ ನಾಜಿಮ್ ಕಿಜೈಬೇ ವಿರುದ್ಧ ಕಠಿಣ ಹೋರಾಟ ನಡೆಸಿದರೂ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೊರೋನಾ ಲಸಿಕೆ ಮೊದಲ ಡೋಸ್ ಪಡೆದ ಮೇರಿ ಕೋಮ್
ಎರಡು ಬಾರಿ ವಿಶ್ವಚಾಂಪಿಯನ್ ಆಗಿರುವ ನಾಜಿಮ್, ಏಷ್ಯನ್ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಪಂಚಿಂಗ್ ಮೂಲಕ 3-2 ಅಂತರ ಮುನ್ನಡೆ ಸಾಧಿಸಿದರು. 6 ಬಾರಿ ವಿಶ್ವಚಾಂಪಿಯನ್ ಮೇರಿಗೆ ನಾಜಿಮ್ ಪ್ರಬಲ ಪೈಪೋಟಿ ನೀಡಿದರು.
ಮೇರಿ ಕೋಮ್ ಬಾಕ್ಸಿಂಗ್ ಫೌಂಡೇಶನ್‌ಗೆ ಡ್ರೀಮ್ ಸ್ಪೋರ್ಟ್ಸ್ ಸಾಥ್
ಮೊದಲ ಸುತ್ತಿನಲ್ಲಿ ದಿಟ್ಟ ಹೋರಾಟ ನೀಡಿದ ಮೇರಿ ಕೋಮ್ ಗೆಲುವು ಸಾಧಿಸಿದರು. ಆದರೆ ಮುಂದಿನ 2 ಸುತ್ತುಗಳಲ್ಲಿ ನಾಜಿಮ್ ತಿರುಗೇಟು ನೀಡಿದರು. ಅಂತಿಮ ಸುತ್ತಿನ ಕೊನೆಯ 3 ನಿಮಿಷ ಮೇರಿ ಕೋಮ್ ತಿರುಗೇಟು ನೀಡೋ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.
ಬೆಳ್ಳಿಗೆ ಗೆದ್ದ ಮೇರಿ ಕೋಮ್ 5,000 ಅಮೆರಿಕನ್ ಡಾಲರ್(3,61,968 ರೂಪಾಯಿ) ಬಹುಮಾನ ಪಡೆದರೆ, ಚಿನ್ನದ ಪದಕ ಗೆದ್ದ ನಾಜಿಮ್ 10,000 ಅಮೆರಿಕನ್ ಡಾಲರ್(7,23,937 ರೂಪಾಯಿ) ಮೊತ್ತವನ್ನು ಬಹುಮಾನವಾಗಿ ಪಡೆದರು. .