ವಿಶ್ವ ಅಥ್ಲೆಟಿಕ್ಸ್; ರಿಲೆಯಲ್ಲಿ ಪದಕ ವಿಜೇತ ಕನ್ನಡತಿ ಪ್ರಿಯಾ ಮೋಹನ್‌ಗೆ ಸನ್ಮಾನ!

By Suvarna NewsFirst Published Aug 25, 2021, 8:24 PM IST
Highlights
  • ಕೀನ್ಯಾದ ನೈರೋಬಿಯದಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್
  • ಮಿಕ್ಸ್ ರೀಲೆಯಲ್ಲಿ ಭಾರತಕ್ಕೆ ಕಂಚಿನ ಪದಕ ಪಡೆದಿದ್ದ ಪ್ರಿಯಾ
  • ಕನ್ನಡತಿ ಪ್ರಿಯಾ ಮೋಹನ್‌ಗೆ ಸನ್ಮಾನ

ನವದೆಹಲಿ(ಆ.25): ವಿಶ್ವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತದ ಅದ್ವಿತೀಯ ಸಾಧನೆ ಮಾಡಿದೆ. ಮಿಕ್ಸ್ ರಿಲೆಯಲ್ಲಿ ಭಾರತ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಭಾರತ ಇದೇ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ ನಲ್ಲಿ ಪದಕ ಗೆದ್ದುಕೊಂಡಿದೆ. ಮಿಕ್ಸ್ ರಿಲೆನಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಕನ್ನಡತಿ ಪ್ರಿಯಾ ಮೋಹನ್‌ಗೆ ಅಥ್ಲೆಟಿಕ್ಸ್ ಅಸೋಸಿಯೇಶನ್ ಸನ್ಮಾನಿಸಿದೆ.

ಯುವ ಅಥ್ಲೀಟ್‌ಗಳನ್ನು ಸನ್ಮಾನಿಸಿ ಹುರಿದುಂಬಿಸಿದ ಕ್ರೀಡಾಸಚಿವ ಅನುರಾಗ್‌ ಠಾಕೂರ್

ಕೀನ್ಯಾಜ ನೈರೋಬಿಯಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಭಾರತದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಅಗಸ್ಟ್ 18 ರಿಂದ 22ರ ವರಗೆ ನಡೆದಿದ್ದ ಅಥ್ಲೆಟಿಕ್ ಕೂಟದಲ್ಲಿ ಕನ್ನಡತಿ ಪ್ರಿಯಾ ಮೋಹನ್ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. 

ಭಾರತ ಮಿಕ್ಸ್ ರಿಲೆ ತಂಡದಲ್ಲಿ ಸ್ಥಾನ ಪಡೆದ ಪ್ರಿಯಾ ಮೋಹನ್ ಮೂಲತಃ ತುಮಕೂರಿನ ಹಬ್ಬತ್ತನಹಳ್ಳಿಯವರು. ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪ್ರಿಯಾ ಮೋಹನ್ ಈಗಾಗಲೇ 15 ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದಾರೆ. ಭಾರತ ಅಥ್ಲಿಟಿಕ್ಸ್ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವರಾಗಿರುವ ಅನುರಾಗ್ ಠಾಕೂರ್ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ್ದಾರೆ. ಭಾರತೀಯ ಅಥ್ಲೆಟಿಕ್ ಫೆಡರೇಶನ್ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ.

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆದಿದ್ದ ಅಭಿನಂದನಾ ಸಮಾರಂಭದಲ್ಲಿ ಭಾರತ ತಂಡವನ್ನು ಸನ್ಮಾನಿಸಲಾಗಿದೆ. ಕನ್ನಡತಿ ಪ್ರಿಯಾ ಮೋಹನ್ ಸಾಧನೆಯನ್ನು ಕೊಂಡಿದ್ದಾರೆ.

click me!