*ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತ
*ಸೆಮಿಫೈನಲ್ ಪಂದ್ಯದಲ್ಲಿ ಮಖ್ಮುದ್ ಸಬಿರ್ಖಾನ್ ವಿರುದ್ಧ ಪಂದ್ಯ
*ಕ್ವಾರ್ಟರ್ ಫೈನಲ್ ತಲುಪಿದ ಏಷ್ಯನ್ ಚಾಂಪಿಯನ್ ಶಿವ ಥಾಪ
ಬೆಲ್ಗ್‌ರೇಡ್(ನ.2) : ಭಾರತದ ಯುವ ಬಾಕ್ಸಿಂಗ್ ತಾರೆ ಆಕಾಶ್ ಕುಮಾರ್ (Akash Kumar) (54 ಕೆ.ಜಿ.) ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Boxing World Championship) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದಾರೆ. ಮೊದಲ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಆಕಾಶ್ ಮಂಗಳವಾರ ವೆನೆಜುವೆಲಾದ ಯೋಲ್ ರಿವಾಸ್ (Yoel Finol of Venezuela) ವಿರುದ್ಧ 5-0 ಅಂತರದಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಕಜಕಸ್ತಾನದ ಮಖ್‌ಮುದ್ ವಿರುದ್ಧ ಸೆಣಸಲಿದ್ದಾರೆ. ಇನ್ನು, ಐದು ಬಾರಿ ಏಷ್ಯನ್ ಚಾಂಪಿಯನ್ ಶಿವ ಥಾಪ (63.5 ಕೆ.ಜಿ.) ಫ್ರಾನ್ಸ್‌ನ ಲೌನೆಸ್ ಹಾಮ್ರೋಯಿ ವಿರುದ್ಧ 4-1 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!
undefined
ಆಕಾಶ್ ಕಳೆದ ಸೆಪ್ಟೆಂಬರ್‌ನಲ್ಲಿ ಶ್ವಾಸಕೋಶದ ಸೋಂಕಿನಿಂದ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆದರೆ ಇದರ ಅರಿವಿಲ್ಲದೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಪರ್ಧಿಸಿದ್ದರು. ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆಕಾಶ್ ಕಜಕಿಸ್ತಾನದ ( Kazakhstan) ಮಖ್ಮುದ್ ಸಬಿರ್ಖಾನ್ (Makhmud Sabyrkhan) ಅವರನ್ನು ಎದುರಿಸಲಿದ್ದಾರೆ. ಸಂಜೆ, ಐದು ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪಾ (63.5 ಕೆಜಿ) ಕ್ವಾರ್ಟರ್‌ಫೈನಲ್‌ನಲ್ಲಿ ಇತರ ಮೂವರು ಭಾರತೀಯರೊಂದಿಗೆ ಟರ್ಕಿಯ ಕೆರೆಮ್ ಓಜ್ಮೆನ್ (Turkey's Kerem Oezmen) ವಿರುದ್ಧ ಸೆಣಸಲಿದ್ದಾರೆ.
Team India ಬ್ಯಾಟಿಂಗ್ ಕೋಚ್‌ಗೆ ಮತ್ತೆ ಅರ್ಜಿ ಸಲ್ಲಿಸಿದ ವಿಕ್ರಂ ರಾಥೋಡ್
ನರೇಂದರ್ ಬರ್ವಾಲ್ (Narender Berwal) (+92 ಕೆಜಿ) ಅಜರ್‌ಬೈಜಾನ್‌ನ ಮಹಮ್ಮದ್ ಅಬ್ದುಲ್ಲಾಯೆವ್ (Azerbaijan's Mahammad Abdullayev) ವಿರುದ್ಧ ಸೆಣಸಲಿದ್ದರೆ, ನಿಶಾಂತ್ ದೇವ್ (Nishant Dev) (71 ಕೆಜಿ) ರಷ್ಯಾದ ವಾಡಿಮ್ ಮುಸೇವ್ (Russia's Vadim Musaev) ವಿರುದ್ಧ ಸೆಣಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲಿಸ್ಟ್ ಆಗಿದ್ದ ಹಾಲಿ ಏಷ್ಯನ್ ಚಾಂಪಿಯನ್ ಸಂಜೀತ್ (Sanjeet) (92 ಕೆಜಿ), ಇಟಲಿಯ ಅಜೀಜ್ ಅಬ್ಬೆಸ್ ಮೌಹಿದಿನ್ (Italy's Aziz Abbes Mouhiidine). ಲೈವ್ ಟಿವಿಯನ್ನು ಎದುರಿಸಲಿದ್ದಾರೆ.
ಆಫ್ಘನ್ ವಿರುದ್ಧವಾದ್ರೂ ಗೆಲ್ಲುತ್ತಾ ಭಾರತ?
ಪಾಕಿಸ್ತಾನ (Pakistan)ಹಾಗೂ ನ್ಯೂಜಿಲೆಂಡ್ (New Zealand) ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ, ಬುಧವಾರ ಅಫ್ಘಾನಿಸ್ತಾನ (Afghanistan) ವಿರುದ್ಧ ಸೆಣಸಲಿದ್ದು ಈ ಪಂದ್ಯದಲ್ಲಾದರೂ ತಂಡ ಗೆಲ್ಲಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಸೆಣಸಾಟದಲ್ಲಿ ಭಾರತ ಗೆದ್ದರೆ ಹೆಚ್ಚೇನೂ ಹೊಗಳಿಕೆ ಸಿಗುವುದಿಲ್ಲ, ಆದರೆ ಸೋತರೆ ಅಭಿಮಾನಿಗಳ ಕೆಂಗಣ್ಣಿಗೆ ವಿರಾಟ್ ಕೊಹ್ಲಿ (Virat Kohli) ಪಡೆ ಗುರಿಯಾಗಬಹುದು.
ಸ್ಕಾಟ್ಲೆಂಡ್ ಸವಾಲಿಗೆ ರೆಡಿಯಾದ ಕಿವೀಸ್!
ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಿರುವ ನ್ಯೂಜಿಲೆಂಡ್ (New Zealand) ಸೆಮಿಫೈನಲ್ ರೇಸ್‌ನಲ್ಲಿ ಒಂದು ಹೆಜ್ಜೆ ಮುಂದಿಡಲು ಎದುರು ನೋಡುತ್ತಿದ್ದು, ಬುಧವಾರ ಸ್ಕಾಟ್ಲೆಂಡ್ (Scotland) ವಿರುದ್ಧ ಆಡಲಿದೆ. ಎರಡೂ ಪಂದ್ಯಗಳಲ್ಲಿ ಸೋತಿರುವ ಸ್ಕಾಟ್ಲೆಂಡ್, ಸೆಮೀಸ್ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿದ್ದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್..!
ಕಿವೀಸ್ ಸೂಪರ್-12ರ ಹಂತದಲ್ಲಿ ತಾನಾಡಿದ 2 ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಗುಂಪು 2ರಲ್ಲಿ 3ನೇ ಸ್ಥಾನದಲ್ಲಿದ್ದರೆ, ಸ್ಕಾಟ್ಲೆಂಡ್ ಕೊನೆಯ ಸ್ಥಾನದಲ್ಲಿದೆ. ಉಭಯ ತಂಡಗಳು ಟಿ20 ಮಾದರಿಯಲ್ಲಿ 2ನೇ ಬಾರಿ ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಗಳಿಸಿತ್ತು.ದೊಡ್ಡ ಅಂತರದಲ್ಲಿ ಈ ಪಂದ್ಯವನ್ನು ಗೆದ್ದು ನೆಟ್ ರನ್‌ರೇಟ್ (Run Rate) ಉತ್ತಮಗೊಳಿಸಿಕೊಳ್ಳುವ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆ ಹೊಂದಿದೆ.