
ಪ್ಯಾರಿಸ್: 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ತೆರೆ ಬಿದ್ದಿದೆ. ಕೋಟ್ಯಂತರ ಭಾರತೀಯರ ಹಾರೈಕೆ, ನಿರೀಕ್ಷೆಗಳ ಮೂಟೆ ಹೊತ್ತುಕೊಂಡು ಪ್ಯಾರಿಸ್ ವಿಮಾನವೇರಿದ್ದ ಭಾರತೀಯ ಕ್ರೀಡಾಪಟುಗಳು ಸಾರ್ವಕಾಲಿಕ ಶ್ರೇಷ್ಠ ಪದಕ ಗಳಿಕೆಯ ಮೂಲಕ ತವರಿಗೆ ಮರಳಲು ಸಜ್ಜಾಗಿದ್ದಾರೆ.
ಈ ಬಾರಿ ಒಟ್ಟು 29 ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಕೊರಳಿಗೇರಿಸಿಕೊಂಡಿದ್ದಾರೆ. 7 ಚಿನ್ನ, 9 ಬೆಳ್ಳಿ, 13 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆದಿದೆ. ಇದು ಇತಿಹಾಸದಲ್ಲೇ ಭಾರತ ಗಳಿಸಿದ ಅತ್ಯುತ್ತಮ ಸ್ಥಾನ.
ಟೀಂ ಇಂಡಿಯಾ ಪ್ರಿನ್ಸ್ ಶುಭ್‌ಮನ್ ಗಿಲ್ ಗರ್ಲ್‌ಫ್ರೆಂಡ್ಸ್ ಒಬ್ಬಿಬ್ಬರಲ್ಲ..! ಗಿಲ್ ನಿಜವಾದ ಗೆಳತಿ ಯಾರು?
ಈ ಸಲ ದಾಖಲೆಯ 84 ಕ್ರೀಡಾಪಟುಗಳನ್ನು ಪ್ಯಾರಿಸ್‌ಗೆ ಕಳುಹಿಸಿದ್ದ ಭಾರತ, 25+ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ ನಮ್ಮ ಕ್ರೀಡಾಪಟುಗಳು 29 ಪದಕ ಸಾಧನೆಗೈದಿದ್ದಾರೆ. ಕೆಲವೊಂದು ಸ್ಪರ್ಧೆಗಳಲ್ಲಿ ಭಾರತೀಯರಿಗೆ ಅಲ್ಪದರಲ್ಲೇ ಪದಕ ಕೈತಪ್ಪಿವೆ.
ಭಾರತಕ್ಕೆ ಈ ಬಾರಿಯೂ ಅಥ್ಲೆಟಿಕ್ಸ್‌ನಲ್ಲೇ ಗರಿಷ್ಠ ಪದಕ ಬಂದಿದ್ದು, ವಿವಿಧ ಸ್ಪರ್ಧೆಗಳಲ್ಲಿ ಬರೋಬ್ಬರಿ 17 ಪದಕಗಳು ಒಲಿದಿವೆ. ಉಳಿದಂತೆ ಬ್ಯಾಡ್ಮಿಂಟನ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ 5, ಶೂಟಿಂಗ್‌ನಲ್ಲಿ 4, ಆರ್ಚರಿಯಲ್ಲಿ 2 ಪದಕ ಲಭಿಸಿವೆ. ಜುಡೊ ಸ್ಪರ್ಧೆಯಲ್ಲಿ ಭಾರತ ಈ ಬಾರಿ ಅನಿರೀಕ್ಷಿತ ಪದಕ ಸಾಧನೆ ಮಾಡಿದ್ದು ವಿಶೇಷ.
ಹಿಂದಿನ 12 ಗೇಮ್ಸಲ್ಲಿ ಒಟ್ಟು 31, ಈ ಬಾರಿ 29 ಮೆಡಲ್!
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 1968ರಿಂದ 2020ರ ವರೆಗೂ ಒಟ್ಟು 12 ಬಾರಿ ಸ್ಪರ್ಧಿಸಿತ್ತು. ಗೆದ್ದಿದು ಒಟ್ಟು 31 ಪದಕ. ಈ ಬಾರಿ ಬರೋಬ್ಬರಿ 29 ಪದಕಗಳು ಭಾರತದ ತೆಕ್ಕೆಗೆ ಬಿದ್ದಿದೆ. 12 ಪ್ರಯತ್ನಗಳಲ್ಲಿ ಒಟ್ಟು 9 ಚಿನ್ನದ ಪದಕ ಜಯಿಸಿದ್ದ ಭಾರತ, ಈ ಬಾರಿ 7 ಚಿನ್ನದ ಪದಕ ಕೊಳ್ಳೆ ಹೊಡೆದಿದೆ. ಭಾರತ ಈ ವರೆಗಿನ ಎಲ್ಲಾ ಪ್ಯಾರಾಲಿಂಪಿಕ್ಸ್‌ಗಳಲ್ಲಿ ಒಟ್ಟಾರೆ 60 ಪದಕ ಗೆದ್ದಿದೆ.
ಪದಕ ಪಟ್ಟಿಯಲ್ಲಿ ಭಾರತ ನಂ.18: ಈ ವರೆಗಿನ ಶ್ರೇಷ್ಠ
ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ 18ನೇ ಸ್ಥಾನ ಪಡೆದುಕೊಂಡಿತು. ಇದು ಈ ವರೆಗಿನ ಶ್ರೇಷ್ಠ ಪ್ರದರ್ಶನ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ ಸೇರಿ 19 ಪದಕದೊಂದಿಗೆ 24ನೇ ಸ್ಥಾನ ಪಡೆದಿದ್ದು ಈ ವರೆಗಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಅದಕ್ಕೂ ಮುನ್ನ 1972ರ 1972ರ ಹೈಡೆಲ್ಬರ್ಗ್(ಜರ್ಮನಿ) ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 1 ಚಿನ್ನ ಗೆದ್ದು 25ನೇ ಸ್ಥಾನ ಪಡೆದಿತ್ತು. -
ಯಾವ ಕ್ರೀಡೆಯಲ್ಲಿ ಎಷ್ಟು ಪದಕ?
ಕ್ರೀಡೆ ಚಿನ್ನ ಬೆಳ್ಳಿ ಕಂಚು ಒಟ್ಟು
ಅಥ್ಲೆಟಿಕ್ಸ್ 4 6 7 17
ಬ್ಯಾಡ್ಮಿಂಟನ್ 1 2 2 5
ಶೂಟಿಂಗ್ 1 1 2 4
ಆರ್ಚರಿ 1 0 1 2
ಜುಡೊ 0 0 1 1
ಒಟ್ಟು 7 9 13 29
02 ಬಾರಿ: ಭಾರತ ಸತತ ಪ್ಯಾರಾಲಿಂಪಿಕ್ಸ್‌ಗಳಲ್ಲಿ ತಲಾ 10ಕ್ಕಿಂತ ಹೆಚ್ಚು ಪದಕ ಗೆದ್ದಿದೆ.
07 ಚಿನ್ನ: ಭಾರತ 7 ಚಿನ್ನ ಗೆದ್ದಿದೆ. ಇದು ಪ್ಯಾರಾಲಿಂಪಿಕ್ಸ್ ಆವೃತ್ತಿಯೊಂದರಲ್ಲಿ ಗರಿಷ್ಠ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.