MTB ಹಿಮಾಚಲ ಮೌಂಟೈನ್ ಸೈಕ್ಲಿಂಗ್, ಪರ್ವತ ಶ್ರೇಣಿಯಲ್ಲಿ 37 ಕಿ.ಮೀ ಕ್ರಮಿಸಿದ 48 ರೈಡರ್ಸ್!

By Suvarna News  |  First Published Jun 25, 2022, 7:37 PM IST
  • ಹಿಮಾಚಲ ಜಾಂಜೇಹ್ಲಿ ಸೈಕ್ಲಿಂಕ್ ರೇಸ್ 2022
  • ಎರಡನೇ ಹಂತದ ಪರ್ವತ ಶ್ರೇಣಿ ರೇಸ್‌ನಲ್ಲಿ 48 ರೈಡರ್ಸ್
  • 2750 ಮೀಟರ್ ಎತ್ತರ ದಾರಿಯಲ್ಲಿ ಸಾಗಿದ ರೈಡರ್ಸ್

ಹಿಮಾಚಲ ಪ್ರದೇಶ(ಜೂ.25): ಮೊದಲ ಆವೃತ್ತಿ ಎಂಟಿಬಿ ಹಿಮಾಚಲ ಮೌಂಟೈನ್ ಸೈಕ್ಲಿಂಗ್ ರೇಸ್ ಸ್ಪರ್ಧೆ  ಹಂತ ಹಂತಕ್ಕ ರೋಚಕತೆ ಹೆಚ್ಚಿಸುತ್ತಿದೆ. ಅತೀ ದುರ್ಗಮ ಹಾದಿ ಮೂಲಕ ಬರೋಬ್ಬರಿ 37 ಕಿಲೋಮೀಟರ್ ದೂರ ಕ್ರಮಿಸಿದ 48 ರೈಡರ್ಸ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.

ಇದೇ ಮೊದಲಬಾರಿಗೆ ನಡೆಯುತ್ತಿರುವ ಹಿಮಾಚಲ್ ಮೌಂಟೈನ್ ಸೈಕ್ಲಿಂಗ್ ರೇಸ್‌ನ ಮೊದಲ ಹಂತದಲ್ಲಿ 54 ರೈಡರ್ಸ್ ಬರೋಬ್ಬರಿ 80 ಕಿ.ಮೀ ಪ್ರಯಾಣ ಮಾಡಿದ್ದರು. ಇದೀಗ ಸನಾರ್ಲಿ ಬಳಿ ಇರುವ ಶಿಕಾರಿ ಮಾತಾ ದೇವಸ್ಥಾನದಿಂದ 2750 ಮೀಟರ್ ಎತ್ತರದ ಹಾದಿಯನ್ನು ಕ್ರಮಿಸಲಾಗಿದೆ. ಈ ಮೂಲಕ ಕಾರ್ಸೋಗ್‌ನಿಂದ ರಾಯೈಘರ್ ವರೆಗೆ ಪ್ರಯಾಣ ಮಾಡುವ ಮೂಲಕ 2ನೇ ಹಂತವನ್ನು ಯಶಸ್ವಿಯಾಗಿ ಮುಗಿಸಲಾಗಿದೆ.

Tap to resize

Latest Videos

undefined

MTB ಹಿಮಾಚಲ ಪ್ರದೇಶ ಮೌಂಟೈನ್ ಸೈಕ್ಲಿಂಗ್, ಮೊದಲ ಹಂತದಲ್ಲಿ 54 ರೈಡರ್‌ಗಳಿಂದ 80 ಕಿ.ಮೀ ಪ್ರಯಾಣ!

ಹಿಮಾಚಲ ಪ್ರದೇಶದಲ್ಲಿ ಸೈಕ್ಲಿಂಗ್ ಟೂರಿಸಂ ಪ್ರಚುರ ಪಡಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕಾಗಿ ಸುತೇಲ್ಜ್ ನದಿ ಹಾದು ಹೋಗುವ ಪರ್ವತಶ್ರೇಣಿ ಪ್ರದೇಶದಲ್ಲಿ ಸೈಕ್ಲಿಂಗ್ ರೇಸ್ ಆಯೋಜಿಸಲಾಗಿದೆ. ಈ ಮೂಲಕ ಹಿಮಾಚಲ ಪ್ರದೇಶದ ಐತಿಹಾಸಿಕ ಸುತೇಲ್ಜ್ ನದಿ ಹಾಗೂ ಪರ್ವತ ಶ್ರೇಣಿ ಪ್ರದೇಶದಲ್ಲಿರುವ 100ಕ್ಕೂ ತಾಣಗಳ ಪರಿಚಯ ಹಾಗೂ ಹಿಮಾಚಲ ಪ್ರದೇಶದ ಪ್ರವಾಸೋದ್ಯಮವನ್ನು ದೇಶಾದ್ಯಂತ ಪ್ರಚಾರ ಪಡಿಸುವುದಾಗಿದೆ.

ಹಿಮಾಚಲ ಪ್ರದೇಶದಲ್ಲಿರುವ ಸೈಕ್ಲಿಂಗ್ ತಾಣಗಳು, ಹಿಮಾಲಯ ಶ್ರೇಣಿಯನ್ನೇ ಸೆಡ್ಡು ಹೊಡೆಯಬಲ್ಲ ತಾಣಗಳು ಸೇರಿದಂತೆ ಹಲವು ಐತಿಹಾಸಿಕ ತಾಣಗಳ ಪ್ರಚಾರ ಪಡಿಸುವಿಕೆಯನ್ನು ಒಳಗೊಂಡಿದೆ. ಹಿಮಾಚಲ ಪ್ರದೇಶ ಸರ್ಕಾರ, ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಸಚಿವಾಲಯ ಹಾಗೂ ಹಿಮಾಲಯನ್ ಅಡ್ವೆಂಚರ್ ಸ್ಪೋರ್ಟ್ಸ್ ಹಾಗೂ ಟೂರಿಸಂ ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಈ ಸೈಕ್ಲಿಂಗ್ ರೇಸ್ ಆಯೋಜಿಸಿದೆ.

ಹಿಮಾಚಲ ಮೌಂಟೈನ್ ಸೈಕ್ಲಿಂಗ್ ರೇಸ್, ಎರಡನೇ ಹಂತದ ಫಲಿತಾಂಶ
ಅಂಡರ್ 16 ವಿಭಾಗ
1st:ಯುಗಲ್ ಠಾಕೂರ್
2nd: ವಂಶ್ ಕಾಲಿಯಾ
3rd: ಅಧೀರತ್ ವಾಲಿಯಾ

MTB ಹಿಮಾಚಲ ಜಾಂಜೆಹ್ಲಿ 2022ರ ಬೈಕಿಂಗ್ ರೇಸ್‌ನ 1ನೇ ಆವೃತ್ತಿ ಆರಂಭ

ಅಂಡರ್ 19(ಹುಡುಗರ ವಿಭಾಗ)
1st: ರಾಜ್‌ಬೀರ್ ಸಿಂಗ್ ಶ್ಯಾನ್
2nd: ಅರ್ಪಿತ್ ಶರ್ಮಾ
3rd: ಕುನಾಲ್ ಬನ್ಸಾಲ್

ಅಂಡರ್ 19(ಹುಡುಗಿಯರ ವಿಭಾಗ)
1st: ದಿವಿಜಾ ಸೂದ್
2nd: ಕ್ಯಾನಾ ಸೂದ್

A-19 ವಿಭಾಗ
1st: ಸುನೀತಾ ಬರೋನ್ಪಾ
2nd: ಆಸ್ತಾ ದುಬೆ

ಅಂಡರ್ 23(ಯುವಕರ ವಿಭಾಗ)
1st: ಪೃಥ್ವಿರಾಜ್ ಸಿಂಗ್ ರಾಥೋರ್
2nd: ಆರುಷ್ ಉಪಮನ್ಯು
3rd: ಅನೀಶ್ ದುಬೆ

ಅಂಡರ್ 35(ಪುರುಷರ ವಿಭಾಗ)
1st: ರಾಕೇಶ್ ರಾನಾ
2nd: ಕೃಷ್ಣವೇಂದ್ರ ಯಾದವ್
3rd: ರಾಮಕೃಷ್ಣ ಪಟೇಲ್

ಅಂಡರ್ 50(ಪುರುಷರ ವಿಭಾಗ)
1st: ಸುನಿಲ್ ಬರೋಂಗ್ಪಾ
2nd:ಅಮಿತ್ ಬಯಾನ್

A-50 ವಿಭಾಗ
1st: ಮಹೇಶ್ವರ್ ದತ್

click me!