ಒಂದು ವಾರ ದುಬೈನಲ್ಲಿ ಯಾವ ಸರ್ಕಾರಿ ಸೇವೆ ಸಿಗಲ್ಲ!

Published : Oct 22, 2018, 04:52 PM ISTUpdated : Oct 22, 2018, 05:23 PM IST
ಒಂದು ವಾರ ದುಬೈನಲ್ಲಿ ಯಾವ ಸರ್ಕಾರಿ ಸೇವೆ ಸಿಗಲ್ಲ!

ಸಾರಾಂಶ

ಅಕ್ಟೋಬರ್ 21ರಿಂದ 25ರವರೆಗೆ ಒಂದು ವಾರ, ದುಬೈನಲ್ಲಿ ಸರ್ಕಾರದ ಯಾವುದೇ ಗ್ರಾಹಕ ಸೇವಾ ಕೇಂದ್ರಗಳು ತೆರೆದಿರುವುದಿಲ್ಲ. ಎಲ್ಲಾ ಸರ್ಕಾರಿ ಕೆಲಸಗಳನ್ನು ಸ್ಥಗಿತ ಮಾಡಲಾಗುತ್ತಿದೆ.. ಅರೆ ಅಂಥಾದ್ದೇನಾಯಿತು!

ಬೆಂಗಳೂರು[ಅ.22]  ಒಂದು ವಾರ ಕಾಲ  ದುಬೈನಲ್ಲಿ ಸರ್ಕಾರದ ಯಾವುದೇ ಗ್ರಾಹಕ ಸೇವಾ ಕೇಂದ್ರಗಳು ಸೇವೆ ನೀಡುವುದಿಲ್ಲ. ಕಂಪ್ಯೂಟರ್ ನೆಟ್ವರ್ಕ್ ಏನಾದರೂ ಹ್ಯಾಕ್ ಆಗಿದೆಯಾ? ನೌಕರರು ಮುಷ್ಕರದಲ್ಲಿದ್ದಾರಾ? ಯಾವುದೂ ಇಲ್ಲ.

ದುಬೈ ಸರ್ಕಾರ ಇನ್ನೊಂದೈದು ವರ್ಷದಲ್ಲಿ ಎಲ್ಲಾ ಸರ್ಕಾರೀ ಸೇವೆಗಳನ್ನು ಸಂಪೂರ್ಣವಾಗಿ ಆನ್-ಲೈನ್ ವ್ಯವಸ್ಥೆಗೆ ಬದಲಾಯಿಸಲಿದೆ. ಅದಕ್ಕೆ ಪೂರ್ವಭಾವಿಯಾಗಿ, ಜನರನ್ನು ಅದರೆಡೆಗೆ ಸೆಳೆಯಲು, ಸರ್ಕಾರಕ್ಕೆ ಸಲ್ಲಬೇಕಾದ ಫೀಸುಗಳನ್ನು ತಮ್ಮ ಆಪ್ ಹಾಗೂ ವೆಬ್ ಸೈಟುಗಳ ಮೂಲಕವೇ ಪಾವತಿಸಲು ಈ ಕ್ರಮ ತೆಗೆದುಕೊಂಡಿದೆ.

ಸರಕಾರಿ ಸೇವಾ ಕೇಂದ್ರಗಳು ಬಾಗಿಲು ಬಂದ್ ಮಾಡಿದಾಗ ಜನರೆಲ್ಲರೂ ಅನಿವಾರ್ಯವಾಗಿ ಮೊಬೈಲ್ ಮತ್ತು ವೆಬ್ ತಾಣಗಳ ಮೊರೆ ಹೋಗಬೇಕಾಗುತ್ತದೆ. ಬೆಂಗಳೂರು ಒನ್ ನಲ್ಲಿ ಪಾವತಿ ಮಾಡುವ  ರೀತಿಯ ಎಲ್ಲ ಬಿಲ್ ಗಳನ್ನು ಆನ್ ಲೈನ್ ಮೂಲಕವೇ ಭರ್ತಿ ಮಾಡಬೇಕಾಗುತ್ತದೆ.

ಈ ಮೊದಲು "A day without service centers" ಎಂಬ ಕ್ಯಾಂಪೇನ್ ನಡೆಸಿದ್ದ ಸರ್ಕಾರ ಈ ಬಾರಿ "A week without service centers" ನಡೆಸುತ್ತಿದೆ.  ಭಾರತದಲ್ಲಿ ಹೀಗೆ ಮಾಡಲು ಸಾಧ್ಯವೇ? ಮಾಡಿದ್ದರೆ ಯಾವ ಬಗೆಯ ಪ್ರತಿಭಟನೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನೆಲ್ಲ ನೀವೇ ಒಮ್ಮೆ ಯೋಚಿಸಿ!

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ