ದುಬೈ ಕನ್ನಡಿಗರ ಸಂಘದಿಂದ ಸಂಗೀತ ಸೌರಭ

Published : Apr 02, 2019, 12:23 PM IST
ದುಬೈ ಕನ್ನಡಿಗರ ಸಂಘದಿಂದ ಸಂಗೀತ ಸೌರಭ

ಸಾರಾಂಶ

ಕನ್ನಡಿಗರು ದುಬೈ ಸಂಘದಿಂದ ಸಂಗೀತ ಸೌರಭ| ನಕ್ಕು ನಲಿಯುವಂತೆ ಮಾಡಿದ ರಮೇಶ್‌ ಬಾಬು ಮಿಮಿಕ್ರಿ| ಕರ್ನಾಟಕದಿಂದ ಆಗಮಿಸಿದ್ದ ಸಂಗೀತ ತಂಡದಿಂದ ಸುಮಧುರ ಹಾಡಿನ ಮೂಲಕ ಪ್ರೇಕ್ಷಕರಿಗೆ ಮನರಂಜನೆ

ದುಬೈ[ಏ.02]: ಕನ್ನಡಿಗರು ದುಬೈ ಸಂಘ ಹಾಗೂ ಪ್ರಿಶಿಯಸ್‌ ಪಾರ್ಟೀಸ್‌ ಸಹಯೋಗದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ‘ಸಂಗೀತ ಸೌರಭ-2019’ ಅಲ್‌ಕುಜ್‌ನ ಕ್ರೆಡೆನ್ಸ್‌ ಹೈಸ್ಕೂಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಕರ್ನಾಟಕದಿಂದ ಆಗಮಿಸಿದ್ದ ಸಂಗೀತ ತಂಡ ತಮ್ಮ ಸುಮಧುರ ಹಾಡುಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.

ಮಿಮಿಕ್ರಿ ಕಲಾವಿದರಾದ ರಮೇಶ್‌ ಬಾಬು ಮೈಸೂರು ಇವರ ಹಾಸ್ಯವಂತೂ ಪ್ರೇಕ್ಷಕರ ಹೊಟ್ಟೆಹುಣ್ಣಾಗುವಷ್ಟುನಕ್ಕು ನಲಿಯುವಂತಿತ್ತು. ಕಾರ್ಯಕ್ರಮವನ್ನು ನಟಿ ಹಾಗೂ ನಿರೂಪಕಿ ಸ್ಫೂರ್ತಿ ವಿಶ್ವಾಸ್‌ ಸೊಗಸಾಗಿ ನಡೆಸಿಕೊಟ್ಟರು. ಸುಂದರ ಸಂಜೆಗೆ ಮುಖ್ಯ ಅತಿಥಿಯಾಗಿ ಎಂ.ಸ್ಕೂ್ಯರ್‌ ಮುಖ್ಯಸ್ಥರಾದ ಮುಸ್ತಾಫಾ ಮೊಹಮ್ಮದ್‌ ಆಗಮಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಗಣ್ಯರನ್ನು ಹಾಗೂ ಕನ್ನಡ ಸೇವೆಗಾಗಿ ಸಂಘದ ಮಾಜಿ ಅಧ್ಯಕ್ಷ ಸಾಧನ್‌ದಾಸ್‌ ದಂಪತಿ, ದೀಪಕ್‌ ಸೋಮಶೇಖರ್‌ ದಂಪತಿ ಹಾಗೂ ಶಶಿಧರ್‌ ನಾಗರಾಜಪ್ಪ ದಂಪತಿಯನ್ನು ಗೌರವಿಸಲಾಯಿತು. ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಗೌಡ, ಉಮಾ ವಿದ್ಯಾಧರ, ವೀರೆಂದ್ರ ಬಾಬು, ಮುಖ್ಯ ಕಾರ್ಯದರ್ಶಿ ಚಂದ್ರಕಾಂತ್‌ ಗೌಡ, ಮಲ್ಲಿಕಾರ್ಜುನ್‌ ಅಂಗಡಿ, ವೆಂಕಟರಮಣ ಕಾಮತ, ರಫೀಕ್‌ ಅಲಿ, ಮಧುಗೌಡ, ಶ್ರೀನಿವಾಸ್‌ ಅರಸ್‌ ಮುಂತಾದವರು ಉಪಸ್ಥಿತರಿದ್ದರು.

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ