ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ' ಕೆನಡಾದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕನ್ನಡಚಿತ್ರರಂಗಕ್ಕೆ ಹೆಮ್ಮೆ ತಂದು ಕೊಡುವಂತಹ ಪೌರಾಣಿಕ ಚಿತ್ರ 'ಮುನಿರತ್ನ ಕುರುಕ್ಷೇತ್ರ' ಕೆನಡಾದ ಟೊರೆಂಟೋದಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ದರ್ಶನ್ ಫೋಟೋ ಹಿಡಿದು ಡಿ-ಬಾಸ್ ಎಂದು ಕೂಗಾಡಿದ್ದಾರೆ.
ಆಗಸ್ಟ್ 9 ರಂದು ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಂಡ ಕುರುಕ್ಷೇತ್ರ ಸಿನಿಮಾ ಕೆನಡಾ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದೇ ಆಗಸ್ಟ್ 15 ರಂದು ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ರಿಲೀಸ್ ಆಗಲು ರೆಡಿಯಾಗುತ್ತಿದೆ.
ದುರ್ಯೋಧನ ಪಾತ್ರದಲ್ಲಿ ಮಿಂಚಿದ ದರ್ಶನ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ದರ್ಶನ್ ಪೋಟೋಗೆ ಹಾರ ಹಾಕಿ 'ಬಾಸ್ ಅಂದ್ರೆ ಬಾಸ್ ಅದು ನಮ್ಮ ಡಿ-ಬಾಸ್ ' ಎಂದು ಅಭಿಮಾನ ಮೆರೆದಿದ್ದಾರೆ.