USA: ರಸ್ತೆ ಅಪಘಾತಕ್ಕೆ ಬೀದರ್ ತಂದೆ-ಮಗಳ ಬಲಿ, ಬರ್ತಡೆ ಸಂಭ್ರಮದ ಜಾಗದಲ್ಲಿ ಸೂತಕ

Published : Jun 07, 2019, 09:58 PM IST
USA: ರಸ್ತೆ ಅಪಘಾತಕ್ಕೆ ಬೀದರ್ ತಂದೆ-ಮಗಳ ಬಲಿ, ಬರ್ತಡೆ ಸಂಭ್ರಮದ ಜಾಗದಲ್ಲಿ ಸೂತಕ

ಸಾರಾಂಶ

ಇಡೀ ಕುಟುಂಬ ಆ ಮಗುವಿನ ಜನ್ಮದಿನಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಅದೊಂದು ಘೋರ ಅಪಘಾತ ತಂದೆ ಮತ್ತು ಮಗು ಇಬ್ಬರ ಪ್ರಾಣ ಹೊತ್ತೊಯ್ದಿದೆ.

ಕೋಲಂಬಸ್ ಕೌಂಟಿ, ಯುಎಸ್ ಎ[ಜೂ. 07]  ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ತಂದೆ-ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಅಮೆರಿಕದ ನಾರ್ತ್ ಕೆರೋಲಿನಾದ ಕೋಲಂಬಸ್ ಕೌಂಟಿಯಲ್ಲಿ ನಡೆದ ಭೀಕರ ಅಪಘಾತ ಇಬ್ಬರ ಪ್ರಾಣ ಹೊತ್ತೊಯ್ದಿದೆ.

2 ವರ್ಷದ ಮಗು ಮತ್ತು ಮುಖೇಶ ಶಿವಾಜಿವಾರ ದೇಶಮುಖ್(37) ಮೃತರು ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಂಗಳ್ಳಿ ಮೂಲದವರು ಎಂದು ಹೇಳಲಾಗಿದೆ. ಜನ್ಮದಿನಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ಮಗು ಅಫಘಾರತಕ್ಕೆ ಬುಲಿಯಾಗಿದೆ.

ಗುರುವಾರ ಮಧ್ಯರಾತ್ರಿ 1.30ರ ಸುಮಾರಿಗೆ ಘೋರ ಅಪಘಾತ ಸಂಭವಿಸಿದೆ. ಮುಖೇಶ್ ಹೆಂಡತಿ ಮೋನಿಕಾ[36] ಕಾರು ಚಲಾಯಿಸುತ್ತಿದ್ದರು. ಸಿಗ್ನಲ್ ಗುರುತಿಸಲು ವಿಫಲರಾದ ಮೋನಿಕಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಇದಾದ ಮೇಲೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಗೆ ಅಪ್ಪಳಿಸಿದೆ. ತೀವ್ರ ಗಾಯಗೊಂಡಿದ್ದ 2 ವರ್ಷದ ದಿವಿಜಾಳನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲ ನೀಡಲಿಲ್ಲ.

 

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ