ಜಿ.ಪಂ. ಉಪಾಧ್ಯಕ್ಷರುಗಳಿಗೆ ಹೊಸ ವಾಹನ ಖರೀದಿ ಭಾಗ್ಯ

Published : Apr 03, 2017, 02:53 PM ISTUpdated : Apr 11, 2018, 01:06 PM IST
ಜಿ.ಪಂ. ಉಪಾಧ್ಯಕ್ಷರುಗಳಿಗೆ ಹೊಸ ವಾಹನ ಖರೀದಿ ಭಾಗ್ಯ

ಸಾರಾಂಶ

* 2.7 ಕೋಟಿ ರೂ.ವೆಚ್ಚದಲ್ಲಿ ವಾಹನ ಖರೀದಿ * ಬರಗಾಲದಲ್ಲೂ ಹೊಸ ವಾಹನ ಖರೀದಿಗೆ ಸರ್ಕಾರ ಮಂಜೂರು * 11 ಲಕ್ಷ ರೂ.ಮಿತಿಗೆ ಪರಿಷ್ಕರಿಸಲು ಆರ್ಥಿಕ ಇಲಾಖೆ ನಕಾರ

ಬೆಂಗಳೂರು(ಏ. 03): ಜಿಲ್ಲಾ ಪಂಚಾಯತ್​ ಉಪಾಧ್ಯಕ್ಷರುಗಳಿಗೆ ಹೊಸ ವಾಹನ ಖರೀದಿಸಲು ಇದ್ದ ಆರ್ಥಿಕ ಮಿತಿಯನ್ನು ಹೆಚ್ಚಳ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​'ರಾಜ್​ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಉಪಾಧ್ಯಕ್ಷರುಗಳಿಗೆ 9 ಲಕ್ಷ ರೂ. ಆರ್ಥಿಕ ಮಿತಿಯೊಳಗೆ ಹೊಸ ವಾಹನ ಖರೀದಿಸಲು ಸರ್ಕಾರ ಮಂಜೂರು ಮಾಡಿದೆ. 30 ಜಿಲ್ಲಾ ಪಂಚಾಯತ್​ ಉಪಾಧ್ಯಕ್ಷರುಗಳಿಗೆ ವಾಹನ ಖರೀದಿಸಲು ಒಟ್ಟು 2. 7 ಕೋಟಿ ರೂ. ಖರ್ಚಾಗಲಿದೆ.

ಜನ, ಜಾನುವಾರುಗಳಿಗೆ ಕುಡಿಯಲು  ನೀರು ಮತ್ತು ಮೇವು ಒದಗಿಸಲು ಹಣಕಾಸಿನ ಕೊರತೆ ಎದುರಿಸುತ್ತಿರುವ ಮಧ್ಯೆಯೇ ಜಿ.ಪಂ.ಉಪಾಧ್ಯಕ್ಷರುಗಳಿಗೆ 9 ಲಕ್ಷ ವೆಚ್ಚದಲ್ಲಿ  ಹೊಸ ವಾಹನ ಖರೀದಿಸಲು ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆಯಾ ಜಿಲ್ಲಾ ಪಂಚಾಯತ್​ನಲ್ಲಿ ಲಭ್ಯ ಇರುವ ಅನುದಾನದಲ್ಲಿ ವಾಹನ ಖರೀದಿಸಲು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಜಿಲ್ಲಾ ಪಂಚಾಯತ್​ ಅಧ್ಯಕ್ಷರುಗಳಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು. ಅಧ್ಯಕ್ಷರುಗಳಿಗೆ ನೀಡುತ್ತಿರುವ ಶೇ.75ರಷ್ಟು ಸೌಲಭ್ಯ, ಭತ್ಯೆಯನ್ನು ಜಿಲ್ಲಾ ಪಂಚಾಯತ್​ ಉಪಾಧ್ಯಕ್ಷರುಗಳಿಗೆ ನೀಡಲು ಸಚಿವ ಎಚ್​.ಕೆ.ಪಾಟೀಲ್​ ಅವರ ಮೇಲೆ ಒತ್ತಡ ಹೇರಲಾಗಿತ್ತು. ಒತ್ತಡಕ್ಕೆ ಮಣಿದಿದ್ದ  ಎಚ್​.ಕೆ.ಪಾಟೀಲ್​ ಅವರು ಹೊಸ ವಾಹನ ಖರೀದಿಗೆ ಇದ್ದ ಮಿತಿ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲು ಅನುಮೋದಿಸಿದ್ದರು.

2010ರ ಆದೇಶದ ಪ್ರಕಾರ ಉಪಾಧ್ಯಕ್ಷರುಗಳಿಗೆ ವಾಹನವನ್ನು 6.50 ಲಕ್ಷ ರೂ. ಮಿತಿಯೊಳಗೆ ಖರೀದಿಸಬಹುದಿತ್ತು. ಆದರೆ ಜಿ.ಪಂ.ಅಧ್ಯಕ್ಷರುಗಳಿಗೆ ವಾಹನ ಖರೀದಿಗೆ 16 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಅದೇ ರೀತಿ ಉಪಾಧ್ಯಕ್ಷರುಗಳಿಗೂ 11 ಲಕ್ಷ ರೂ.ಗೆ ಹೆಚ್ಚಿಸಲು ಆರ್ಥಿಕ ಇಲಾಖೆಗೆ 2 ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆ, 6.5 ಲಕ್ಷ ರೂ.ಬದಲಿಗೆ 9 ಲಕ್ಷ ರೂ.ಮಿತಿಗೊಳಪಟ್ಟು ವಾಹನ ಖರೀದಿಸಲು ಅನುಮತಿ ನೀಡಿತ್ತು. ಹೀಗಾಗಿ ಮತ್ತೊಮ್ಮೆ 9 ಲಕ್ಷ ರೂ.ಗಳಿಂದ 11 ಲಕ್ಷ ರೂ.ಗಳಿಗೆ ಪರಿಷ್ಕರಿಸಲು ಗ್ರಾ.ಪಂ.ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಡಳಿತ ಇಲಾಖೆಗೆ ಆರ್ಥಿಕ ಇಲಾಖೆ ತಿಳಿಸಿತ್ತು.

- ಜಿ.ಮಹಾಂತೇಶ್, ಸುವರ್ಣ ನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ
Hate Speech Bill: ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ