
ಹೆಲ್ಸಿಂಕಿ: ಜಾನ್ ಟ್ರಾವೊಲ್ಟಾಮತ್ತು ಟಾಮ್ ಕ್ರೂಸ್'ರಂಥ ಸೆಲೆಬ್ರಿಟಿಗಳು ತಮ್ಮದೇ ವಿಮಾನವನ್ನು ತಾವೇ ಚಲಾಯಿಸುವುದಕ್ಕೆ ಸುದ್ದಿಯಾಗಿದ್ದಾರೆ. ಆದರೆ ಒಂದು ದೇಶದ ಪ್ರಮುಖರಾಗಿಯೂ, ಫಿನ್ಲೆಂಡ್'ನ ಪ್ರಧಾನಿ ಜುಹಾ ಸಿಪಿಲಾ ಅವರು ತಮ್ಮ ವಿಮಾನವನ್ನು ತಾವೇ ಚಲಾಯಿಸುವ ಮೂಲಕ, ಪ್ರಯಾಣ ವೆಚ್ಚದ ಪ್ರಮಾಣ ಕೊಂಚ ತಗ್ಗಿಸುವ ಯತ್ನ ನಡೆಸಿದ್ದಾರೆ.
ತೆರಿಗೆದಾರರ ಹಣದ ಉಳಿತಾಯ ಮತ್ತು ದುಂದು ವೆಚ್ಚ ತಡೆಯುವ ಬದ್ಧತೆಯನ್ನು ಘೋಷಿಸಿರುವ ಸಿಪಿಲ ಕೆಲವೊಮ್ಮೆ ತಮ್ಮ ಅಧಿಕೃತ ಪ್ರವಾಸಗಳಿಗೂ ಬಾಡಿಗೆಗೆ ಖಾಸಗಿ ಜೆಟ್ ಪಡೆದುಕೊಂಡು ಅದಕ್ಕೆ ತಾವೇ ಪೈಲಟ್ ಆಗುತ್ತಾರೆ. 2015ರ ಮೇಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಸಿಪಿಲ 19 ಬಾರಿ ಫಿನ್ಲೆಂಡ್ ಮತ್ತು ವಿದೇಶಿ ಪ್ರವಾಸಗಳ ಸಂದರ್ಭ ತಾವೇ ವಿಮಾನ ಚಲಾಯಿಸಿದ್ದಾರೆ. ಅಧಿಕೃತ ಪ್ರವಾಸಕ್ಕೆ ಖಾಸಗಿ ಜೆಟ್ ಬಳಸಿದ್ದಕ್ಕೆ ಅದರ ಶುಲ್ಕವನ್ನು ತಾವೇ ಭರಿಸಿದ್ದಾರೆ. ಎಷ್ಟು ಶುಲ್ಕ ಭರಿಸಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಕಳೆದ ವರ್ಷ ಸಿಪಿಲಾ 5 ಸಾವಿರ ಕಿ.ಮೀ. ಹಾರಾಟ ನಡೆಸಿದ್ದಾರೆ. ಐರೋಪ್ಯ ನಾಯಕರನ್ನು ಭೇಟಿಯಾಗಲು ಈ ವೇಳೆ ಅವರು ಯುರೋಪ್ ಒಕ್ಕೂಟದ ಪ್ರವಾಸ ಕೈಗೊಂಡಿದ್ದರು. ಮೃದುಭಾಷಿಯಾದ ಸಿಪಿಲಾ ಅವರು ಫಿನ್ಲೆಂಡ್ ಪ್ರಧಾನಿಯಾಗುವುದಕ್ಕೂ ಮೊದಲು ಐಟಿ ಉದ್ಯಮಿಯಾಗಿದ್ದರು.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.