ದುಬೈನಲ್ಲಿ ಜುಲೈನಿಂದ ಹಾರುವ ಟ್ಯಾಕ್ಸಿ ಸಂಚಾರ!

By Suvarna Web DeskFirst Published Apr 3, 2017, 2:35 PM IST
Highlights

100 ಕೆ.ಜಿ. ತೂಕದ ಒಳಗಿನ ಒಬ್ಬ ಪ್ರಯಾಣಿಕ 23 ನಿಮಿಷ ಗಳ ಕಾಲ ಡ್ರೋನ್‌ ಟ್ಯಾಕ್ಸಿಯಲ್ಲಿ ಸಂಚರಿಸಬಹುದಾಗಿದೆ.

ವಾಷಿಂಗ್ಟನ್‌: ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತಿ ನೀಡಿ ಬೇಕಾದ ಕಡೆಗೆ ಕೆಲವೇ ನಿಮಿಷಗಳಲ್ಲಿ ಚಲಿಸಬಲ್ಲ ಚಾಲಕ ರಹಿತ ಹಾರುವ ಕಾರುಗಳು ದುಬೈನಲ್ಲಿ ಜುಲೈನಿಂದ ಆರಂಭಗೊಳ್ಳಲಿವೆ.

ಅಮೆರಿಕದಲ್ಲಿ ಏರ್‌'ಬಸ್‌ ಮತ್ತು ಊಬರ್‌ ಕಂಪನಿ ಫ್ಲೈಯಿಂಗ್‌ ಕಾರುಗಳನ್ನು ತಯಾರಿಸುವ ಸಿದ್ಧತೆಯಲ್ಲಿದ್ದರೂ ಅದಿನ್ನೂ ಪೂರ್ಣಗೊಂಡಿಲ್ಲ. ಆದರೆ, ಚೀನಾದ ಡ್ರೋನ್‌ ತಯಾರಿಕಾ ಕಂಪನಿಯೊಂದು ಇಹ್ಯಾಂಗ್‌ 184 ಅಟೊನೊಮಸ್‌ ಏರಿಯಲ್‌ ವೆಹಿಕಲ್‌ ಎಂಬ ಹೆಸರಿನ ಹಾರುವ ಡ್ರೋನ್‌ ಕಾರಿನ ಮಾದರಿಗಳನ್ನು ಸಿದ್ಧಪಡಿಸಿದ್ದು, ಇವು ಜುಲೈನಲ್ಲಿ ಕಾರ್ಯ ಆರಂಭಿಸಲಿವೆ. 100 ಕೆ.ಜಿ. ತೂಕದ ಒಳಗಿನ ಒಬ್ಬ ಪ್ರಯಾಣಿಕ 23 ನಿಮಿಷ ಗಳ ಕಾಲ ಡ್ರೋನ್‌ ಟ್ಯಾಕ್ಸಿಯಲ್ಲಿ ಸಂಚರಿಸಬಹುದಾಗಿದೆ. ಆ್ಯಪ್‌ ಮೂಲಕ ಪ್ರಯಾಣಿಕರು ಡ್ರೋನ್‌ ಕಾರನ್ನು ನಿಯಂತ್ರಿಸಬಹುದಾಗಿದೆ. ಇವು 30 ನಿಮಿಷಗಳ ಕಾಲ ಗಾಳಿಯಲ್ಲಿ ಚಲಿಸುವ ಸಾಮರ್ಥ್ಯ ಇದ್ದು, ಗಂಟೆಗೆ 50 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು.

epaper.kannadaprabha.in

click me!