
ಧಾರವಾಡ : ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರು ತಮಗೆ ಸರ್ಕಾರದಿಂದ ಸಿಗುತ್ತಿರುವ ಗೌರವಧನವನ್ನು ರೈತರ ಸಾಲಮನ್ನಾಗೆ ಸಮರ್ಪಿ ಸಲು ಮುಂದಾಗಿದ್ದು, ಇತರ ಜನಪ್ರತಿನಿಧಿಗಳಿಗೂ ಮಾದರಿ ಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಜಿ.ಪಂ. ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ ತಮಗೆ ಎರಡು ವರ್ಷಗಳಿಂದ ಗೌರವಧನವಾಗಿ ದೊರೆತಿರುವ 1.2 ಲಕ್ಷಕ್ಕೆ ಇನ್ನು ಮೂರು ವರ್ಷಗಳ ಕಾಲ ದೊರಕಲಿರುವ ಅಂದಾಜು 1.8 ಲಕ್ಷ ಸೇರಿಸಿ ಒಟ್ಟು 3 ಲಕ್ಷವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸೋಮ ವಾರದಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ 3 ಲಕ್ಷದ ಚೆಕ್ ಅನ್ನು ಸಲ್ಲಿಸುವುದಾಗಿ ತಿಳಿಸಿದರು. ನಿರಂತರ ಬರದಿಂದ ರೈತರು ಕಂಗಾಲಾಗಿದ್ದಾರೆ. ಜನ ಪ್ರತಿನಿಧಿಗಳು ಗೌರವಧನ ಸಲ್ಲಿಸಿದಲ್ಲಿ ಸರ್ಕಾರದ ಮೇಲಿನ ಅದೆಷ್ಟೋ ಭಾರ ಕಡಿಮೆ ಆಗಲಿದೆ ಎಂಬ ಭಾವನೆಯಿಂದ ತಮ್ಮ ಪ್ರತಿ ತಿಂಗಳ 5 ಸಾವಿರದಂತೆ ಐದು ವರ್ಷಗಳ ಅಂದಾಜು 3 ಲಕ್ಷ ಗೌರವ ಧನವನ್ನು ಒದಗಿಸುತ್ತಿದ್ದೇನೆ ಎಂದು ಜ್ಯೋತಿ ಶಿವಾನಂದ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.