ಇನ್ನುಮುಂದೆ ತಕ್ಷಣ ಪಾನ್ ಕಾರ್ಡ್ : ಹೇಗೆ..?

Published : Jul 02, 2018, 09:05 AM IST
ಇನ್ನುಮುಂದೆ ತಕ್ಷಣ ಪಾನ್ ಕಾರ್ಡ್ : ಹೇಗೆ..?

ಸಾರಾಂಶ

ಪ್ಯಾನ್‌ಕಾರ್ಡ್ ಪಡೆಯಲು ಇದೀಗ ದಿನಗಟ್ಟಲೆ ಕಾಯಬೇಕಿಲ್ಲ. ಅರ್ಜಿ ಹಾಕಿದ ತಕ್ಷಣ ಪ್ಯಾನ್ ನಂಬರ್ ನೀಡುವ ಇನ್ಸ್‌ಟಂಟ್ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ. 

ನವದೆಹಲಿ :  ಪ್ಯಾನ್‌ಕಾರ್ಡ್ ಪಡೆಯಲು ಇದೀಗ ದಿನಗಟ್ಟಲೆ ಕಾಯಬೇಕಿಲ್ಲ. ಅರ್ಜಿ ಹಾಕಿದ ತಕ್ಷಣ ಪ್ಯಾನ್ ನಂಬರ್ ನೀಡುವ ಇನ್ಸ್‌ಟಂಟ್ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ. ಆದರೆ ಈ ಯೋಜನೆಗೆ ಆಧಾರ್ ಸಂಖ್ಯೆ ಕಡ್ಡಾಯ. ಮೊದಲ ಬಾರಿಗೆ ಪಾನ್ ಸಂಖ್ಯೆಯನ್ನು ಪಡೆಯಲು ಇಚ್ಛಿಸುವವರಿಗೆ ಈ ಯೋಜನೆ ಅನ್ವಯವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸೇರಿದಂತೆ ವಿವಿಧ ವಹಿವಾಟಿಗೆ ಪ್ಯಾನ್ ಸಂಖ್ಯೆ ಕಡ್ಡಾಯ ಮಾಡಿರುವ ಕಾರಣ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿ ಸುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಹೀಗಾಗಿ ಇಂಥವರಿಗೆ ಪ್ಯಾನ್ ಸಂಖ್ಯೆಯನ್ನು ತ್ವರಿತವಾಗಿ ನೀಡುವ ಉದ್ದೇಶದಿಂದ  ಇನ್‌ಸ್ಟಂಟ್ ಪ್ಯಾನ್ ವಿತರಣೆ ಆರಂಭಿಸಲಾಗಿದೆ. 

ಇದು ನಿಗದಿತ ಅವಧಿಗೆ ಲಭ್ಯವಾಗಿರುವ ಯೋಜನೆಯಾಗಿದ್ದು, ಮೊದಲು ಬಂದವರಿಗೆ ಮೊದಲ  ಆದ್ಯತೆಯ ಮೇರೆಗೆ ನೀಡಲಾಗುತ್ತದೆ. ಪ್ಯಾನ್‌ಗೆ ಅರ್ಜಿ ಸಲ್ಲಿಸಿದ ನಂತರ ಆಧಾರ್‌ನಲ್ಲಿ ಸಂಯೋಜನೆಯಾದ ಮೊಬೈಲ್ ನಂಬರ್‌ಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಬರುತ್ತದೆ. ಇದರ ಮೂಲಕ ಇನ್‌ಸ್ಟಂಟ್ ಪ್ಯಾನ್ ಸಂಖ್ಯೆ ಪಡೆಯಬಹುದು. ಆಧಾರ್‌ನಲ್ಲಿರುವ ವ್ಯಕ್ತಿ ವಿವರಗಳೇ ಪ್ಯಾನ್‌ನಲ್ಲೂ ನಮೂದಾಗುತ್ತವೆ. ಅರ್ಜಿ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಆಧಾರ್ ಆಧರಿತ ಮರು ಪರಿಶೀಲನಾ ವ್ಯವಸ್ಥೆ ಮೂಲಕ ಪ್ಯಾನ್ ಸಂಖ್ಯೆಯನ್ನು ವಿತರಿಸಲಾಗುತ್ತದೆ. ಬಳಿಕ ಕೆಲವು ದಿವಸಗಳ ನಂತರ ಅಂಚೆ ಮೂಲಕ ಪ್ಯಾನ್ ಕಾರ್ಡು, ವ್ಯಕ್ತಿಯ ವಿಳಾಸಕ್ಕೆ ಬರುತ್ತದೆ. 

https://www.incometaxindiaefiling.gov.in  ಮೂಲಕ ಅರ್ಜಿ ಸಲ್ಲಿಸಿ ಈ ಪ್ರಯೋಜನ ಪಡೆಯಬಹುದಾಗಿದೆ. ಆಧಾರನ್ನು ಬಳಸಿಕೊಂಡು ತಕ್ಷಣವೇ ಸರ್ಕಾರಿ ಸೇವೆ ನೀಡುವ ಯತ್ನವಿದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ