ಜಿಂಬಾಬ್ವೆಯಲ್ಲಿ ಕ್ಷಿಪ್ರ ಮಿಲಿಟರಿ ಆಡಳಿತ ? 400 ಭಾರತೀಯ ವಲಸಿಗರು ಸುರಕ್ಷಿತ

By Suvarna web DeskFirst Published Nov 15, 2017, 6:23 PM IST
Highlights

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿರುವ ಜಿಂಬಾಬ್ವೆಯ ಭಾರತದ ರಾಯಭಾರಿ ಆರ್. ಮಸಾಕ್ಯೂ, ರಾಷ್ಟ್ರಧ್ಯಕ್ಷರು ಹಾಗೂ ಅವರ ಕುಟುಂಬ ಗೃಹಬಂಧನದಲ್ಲಿದ್ದರೂ ಯಾವುದೇ ತೊಂದರೆಯಿಲ್ಲ'ಎಂದಿದ್ದಾರೆ.

ಹರಾರೆ(ನ.15): ಅಧ್ಯಕ್ಷ ರಾಬರ್ಟ್ ಮುಗಾಂಬೆ ಅವರ ನಾಲ್ಕು ದಶಕಗಳ ಅಧಿಕಾರವನ್ನು ಕೊನೆಗಾಣಿಸಿರುವ ಅಲ್ಲಿನ ಸೇನೆ ಅಧ್ಯಕ್ಷರ ಕುಟುಂಬವನ್ನು ಗೃಹಬಂಧನದಲ್ಲಿರಿಸಿದೆ.

ದೇಶಾದ್ಯಂತ ಸೇನಾ ಆಡಳಿತ ಜಾರಿಯಾಗಿದೆ. ಆದರೆ ತಾವು ಯಾವುದೇ ರೀತಿಯ ಮಿಲಿಟರಿ ಆಡಳಿತ ನಡೆಸುತ್ತಿಲ್ಲ. ಅಪರಾಧಿಗಳನ್ನು ಹತ್ತಿಕುವ ಸಲುವಾಗಿ ಹಾಗೂ ಅಧ್ಯಕ್ಷರನ್ನು ರಕ್ಷಿಸುವ ಕಾರಣದಿಂದಾಗಿ ಗೃಹಬಂಧನದಲ್ಲಿಸಲಾಗಿದೆ'ಎಂದು ಮೇಜರ್ ಜನರಲ್ ಸಿಸಿಸಿಯೋ ಮೊಯೋ ರಾಷ್ಟ್ರೀಯ ವಾಹಿನಿಗಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಪ್ರತಿಯೊಬ್ಬ ನಾಗರಿಕರು ಸುರಕ್ಷಿತವಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿರುವ ಜಿಂಬಾಬ್ವೆಯ  ಭಾರತದ ರಾಯಭಾರಿ ಆರ್. ಮಸಾಕ್ಯೂ, ರಾಷ್ಟ್ರಧ್ಯಕ್ಷರು ಹಾಗೂ ಅವರ ಕುಟುಂಬ ಗೃಹಬಂಧನದಲ್ಲಿದ್ದರೂ ಯಾವುದೇ ತೊಂದರೆಯಿಲ್ಲ'ಎಂದಿದ್ದಾರೆ.

ಜಿಂಬಾಬ್ವೆಯಲ್ಲಿರುವ ಭಾರತೀಯರ ಬಗ್ಗೆ ಮಾಹಿತಿ ನೀಡಿರುವ ಅವರು ದೇಶದಲ್ಲಿ ನೆಲಸಿರುವ 400 ಮಂದಿ ವಲಸಿಗರು ಸುರಕ್ಷಿತವಾಗಿದ್ದಾರೆ. ಒಟ್ಟಾರೆ ದೇಶದಾದ್ಯಂತ ಒಟ್ಟು 9000 ಮಂದಿ ಭಾರತೀಯ ಮೂಲದವರು ನೆಲಸಿದ್ದು, ಎಲ್ಲರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ' ಎಂದು ತಿಳಿಸಿದ್ದಾರೆ.

ಹೊರಬಾರದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೆರಿಕಾ,ಇಂಗ್ಲೆಂಡ್

ಅರಾಜಕತೆ ಉಂಟಾಗಿರುವ ಕಾರಣ ಅಮೆರಿಕಾ ಹಾಗೂ ಇಂಗ್ಲೆಂಡ್ ಸರ್ಕಾರ ಜಿಂಬಾಬ್ವೆಯಲ್ಲಿರುವ ತನ್ನ ನಾಗರಿಕರಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದೆ. ಮಿಲಿಟರಿ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸ್ಪಷ್ಟ ನಿರ್ದೇಶನಗಳು ರಾಷ್ಟ್ರಾದ್ಯಂತ ಗೋಚರಿಸುತ್ತಿವೆ. ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಮಿಲಿಟರಿ ವಾಹನಗಳು ಬೀಡುಬಿಟ್ಟಿವೆ. 93 ವರ್ಷದ ರಾಬರ್ಟ್ ಮುಗಾಂಬೆ 1980ರಿಂದ ಅಧಿಕಾರದಲ್ಲಿದ್ದು, ಹಲವು ವರ್ಷಗಳಿಂದ ಸೇನೆ ಹಾಗೂ ಮುಗಾಂಬೆ ಅವರಿಗೂ ರಾಜಕೀಯ ತಿಕ್ಕಾಟ ಶುರುವಾಗಿದೆ.

click me!