ಮಹಾರಾಷ್ಟ್ರದ 26 ಅಣೆಕಟ್ಟಲ್ಲಿ ನೀರು ಸಂಪೂರ್ಣ ಖಾಲಿ!

By Web DeskFirst Published May 19, 2019, 10:57 AM IST
Highlights

ಮಹಾರಾಷ್ಟ್ರದ 26 ಜಲಾಶಯ ಸಂಪೂರ್ಣ ಖಾಲಿ| ಶೂನ್ಯಕ್ಕೆ ಇಳಿದ ನೀರಿನ ಸಂಗ್ರಹ

ಮುಂಬೈ[ಮೇ.19]: ಮಹಾರಾಷ್ಟ್ರದ 26 ಜಲಾಶಯಗಳಲ್ಲಿ ಅಕ್ಷರಶಃ ಸಂಪೂರ್ಣ ನೀರು ಖಾಲಿಯಾಗಿದ್ದು ಅಲ್ಲಿನ ನೀರಿನ ಸಂಗ್ರಹ ‘ಶೂನ್ಯ’ಕ್ಕೆ ಕುಸಿದಿದೆ. ಇದರಿಂದಾಗಿ ಈ ಜಲಾಶಯಗಳನ್ನೇ ಅವಲಂಬಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಅತ್ಯಂತ ಘೋರವಾಗಲಿದೆ.

ಈ ಕುರಿತು ರಾಜ್ಯ ಸರ್ಕಾರದ ಜಲ ಸಂರಕ್ಷಣಾ ಇಲಾಖೆ ಮೇ.18ಕ್ಕೆ ನೀಡಿದ ವರದಿಯಂತೆ 26 ಜಲಾಶಯಗಳ ನೀರಿನ ಸಂಗ್ರಹ ‘ಶೂನ್ಯ’. ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 103 ಸಣ್ಣ, ಮಧ್ಯಮ ಮತ್ತು ಬೃಹತ್‌ ಜಲಾಶಯಗಳಿದ್ದು, ಅದರಲ್ಲಿ ಈಗ ಶೇ.11.84ರಷ್ಟುಮಾತ್ರ ನೀರಿದೆ, ಕಳೆದ ವರ್ಷದ ಇದೇ ಹೊತ್ತಿಗೆ ಈ ಜಲಾಶಯಗಳಲ್ಲಿ ಶೇ.23.73ರಷ್ಟುನೀರಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!