ಭಾರತದಲ್ಲಿ ಆ್ಯಂಕರ್ ಇಲ್ಲದ ಚಾನೆಲ್ ಆರಂಭ!

By Web DeskFirst Published Dec 14, 2018, 10:12 AM IST
Highlights

ವೀಕ್ಷಕರಿಗೆ ನಿಷ್ಪಕ್ಷಪಾತ ಸುದ್ದಿ ಒದಗಿಸುವ ಉದ್ದೇಶ| ನಿರೂಪಕರಿಲ್ಲದ ಚಾನೆಲ್‌ ಆರಂಭ!

ನವದೆಹಲಿ[ಡಿ.14]: ಇತ್ತೀಚೆಗೆ ಚೀನಾದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌) ಹೊಂದಿದಂಥ ವಾರ್ತಾ ವಾಚಕರಿಬ್ಬರನ್ನು ಸಿದ್ಧಪಡಿಸಿ ಚೀನಾದ ಸುದ್ದಿವಾಹಿನಿಯೊಂದು ‘ಸುದ್ದಿ’ ಮಾಡಿತ್ತು. ಇದರ ನಡುವೆಯೇ ವಾರ್ತಾ ವಾಚಕರು ಇಲ್ಲದಂಥ ಸುದ್ದಿವಾಹಿನಿಯೊಂದನ್ನು ಭಾರತದ ಝೀ ಸಮೂಹ ಆರಂಭಿಸಿ ಗಮನ ಸೆಳೆದಿದೆ. ಈ ಹೊಸ ಹಿಂದಿ ಸುದ್ದಿವಾಹಿನಿಯ ಹೆಸರು ‘ಝೀ ಹಿಂದುಸ್ತಾನ್‌’.

‘ಸಾಮಾನ್ಯವಾಗಿ ಸುದ್ದಿವಾಚಕರು ಸುದ್ದಿ ಓದುವಾಗ ಅದರಲ್ಲಿ ತಮ್ಮ ಅಭಿಪ್ರಾಯಗಳನ್ನು ಸೇರಿಸುವ ಸಾಧ್ಯತೆ ಇರುತ್ತದೆ. ಆಗ ವೀಕ್ಷಕರು ಕಸಿವಿಸಿಗೊಳ್ಳುವುದುಂಟು. ಹೀಗಾಗಿ ವೀಕ್ಷಕರಿಗೆ ಯಾವುದೇ ಅಭಿಪ್ರಾಯ, ಪೂರ್ವಾಗ್ರಹ ಇಲ್ಲದ ಸುದ್ದಿ ಒದಗಿಸಬೇಕು ಎಂಬ ಉದ್ದೇಶದಿಂದ ಝೀ ಹಿಂದುಸ್ತಾನ್‌ ಚಾನೆಲ್‌ ಆರಂಭಿಸಲಾಗಿದೆ’ ಎಂದು ಝೀ ಸಮೂಹದ ಮುಖ್ಯಸ್ಥ ಸುಭಾಷ್‌ಚಂದ್ರ ಹೇಳಿದರು. ಬರೀ ಇಲ್ಲಿ ವಿಡಿಯೋಗಳನ್ನು ಹಾಕಿ ವಾಸ್ತವ ವರದಿಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

click me!