
ಬೆಂಗಳೂರು(ಆ.01): ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಹುಟ್ಟುಹಬ್ಬ ಬಾಲಿವುಡ್ ತಾರೆಯರಿಂದ ರಂಗೇರಿತ್ತು. ಬಾಲಿವುಡ್ ನಟ ಸೋನು ಸೂದ್, ಸಲ್ಮಾನ್ ಖಾನ್ ಸಹೋದರರಾದ ಅರ್ಬಾಜ್ ಖಾನ್ , ಸೋಹೈಲ್ ಖಾನ್, ಗುಲ್ಶನ್ ಗ್ರೋವರ್ ಆಗಮಿಸಿದ್ದರು. ಅವರ ಸಮ್ಮುಖದಲ್ಲಿಯೇ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು.
ಬಳಿಕ ಮಾತನಾಡಿದ ಜಮೀರ್ ಅಹಮದ್, ಕಳೆದ ಒಂದು ತಿಂಗಳ ಹಿಂದಿನವರೆಗೂ ನಾವು ಜೆಡಿಎಸ್ ಪಕ್ಷದಲ್ಲೇ ಇರಲು ತಿರ್ಮಾನಿಸಿದ್ದೆವು. ಆದರೆ ಕುಮಾರ್‌ಸ್ವಾಮಿಯವರ ಲೂಸ್'ಟಾಕ್'ನಿಂದ ಹಿಂದೆ ಸರಿದಿದ್ದೇವೆ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡ ನನ್ನ ರಾಜಕೀಯ ಗುರು ಅವರ ಬಗ್ಗೆ ಅಭಿಮಾನವಿದೆ. ಆದರೆ ಜೆಡಿಎಸ್ ಪಕ್ಷದತ್ತ ಮತ್ತೆ ಮುಖ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.