2ರೂ.ಗೆ ಗೋಧಿ. 3 ರೂ.ಗೆ ಅಕ್ಕಿ : 2018ರವರೆಗೆ ಮುಂದುವರಿಕೆ

By Suvarna Web DeskFirst Published Aug 1, 2017, 7:45 PM IST
Highlights

ಈ ಯೋಜನೆಯಡಿಯಲ್ಲಿಪ್ರತಿ ಕೆಜಿ ಅಕ್ಕಿಗೆ 3 ರೂ.ಗೋಧಿಗೆ 2 ರೂ. ಹಾಗೂ ಏಕದಳ ಪದಾರ್ಥಗಳಿಗೆ ಪ್ರತಿ ಕೆಜಿಗೆ 1 ರೂ. ದರದಲ್ಲಿ ನೀಡಲಾಗುತ್ತಿದೆ.

ನವದೆಹಲಿ(ಆ.01): ದೇಶದ 81 ಕೋಟಿ ಮಂದಿಗೆ ರಿಯಾಯಿತಿ ದರದಲ್ಲಿ 2 ರೂ.ಗೆ ಗೋಧಿ ಹಾಗೂ 3 ರೂ.ಗೆ ಅಕ್ಕಿ ನೀಡುತ್ತಿರುವ ಯೋಜನೆಯನ್ನು 2018ರವರೆಗೆ ಮುಂದುವರಿಸಲಾಗುವುದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್'ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನಾವಳಿ ವೇಳೆಯಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(ಎನ್'ಎಫ್'ಎಸ್ಎ)2013ರ ಪ್ರಕಾರ ಪ್ರತಿ 3 ವರ್ಷಗಳಿಗೊಮ್ಮೆ ಆಹಾರಪದಾರ್ಥ'ಗಳ ಬೆಲೆಗಳನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ. ಆದಾಗ್ಯೂ ನಾವು ಪ್ರಸ್ತುತ ಯೋಜನೆಯನ್ನು 2018ರವರೆಗೂ ಮುಂದುವರಿಸಲು ನಿರ್ಧರಿಸಿದ್ದೇವೆ.

ಈ ಯೋಜನೆಯಡಿಯಲ್ಲಿ  ಪ್ರತಿ ಕೆಜಿ ಅಕ್ಕಿಗೆ 3 ರೂ.ಗೋಧಿಗೆ 2 ರೂ. ಹಾಗೂ ಏಕದಳ ಪದಾರ್ಥಗಳಿಗೆ ಪ್ರತಿ ಕೆಜಿಗೆ 1 ರೂ. ದರದಲ್ಲಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಅತ್ಯುತ್ತಮ ಯೋಜನೆ ಜಾರಿಗೊಳಿಸಿದ್ದು, ಯಾರೊಬ್ಬರನ್ನು ಉಪವಾಸದಿಂದ ಇರಿಸಬಾರದೆಂಬ ಜವಾಬ್ದಾರಿ ರಾಜ್ಯ ಸರ್ಕಾರಗಳಾದ್ದಾಗಿದೆ.

click me!