ಸಿಎಂ ದೂರಿದವರಿಗೆ ಜಮೀರ್ ಅಹ್ಮದ್ ಖಡಕ್ ಉತ್ತರ

By Web DeskFirst Published Nov 28, 2018, 3:30 PM IST
Highlights

ಅನುದಾನ ನೀಡುವಲ್ಲಿ ತಾರತಮ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದು, ಅಸಮಾಧಾನಗೊಂಡವರಿಗೆ ಖಡಕ್ ಉತ್ತರ ನೀಡಿದ್ದಾರೆ. 

ಹಾಸನ : ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಾರೆ ಎನ್ನುವ  ಆರೋಪಕ್ಕೆ ಇದೀಗ ಸಚಿವ ಜಮೀರ್ ಅಹ್ಮದ್  ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. 

ಹಾಸನ ಹಾಗೂ ಮೈಸೂರಿಗೆ ಮುಖ್ಯಮಂತ್ರಿ ಹೆಚ್ಚು ಅನುದಾನ ನೀಡುತ್ತಾರೆ, ಸಹೋದರ ರೇವಣ್ಣ ಅವರು ಒತ್ತಡ ಹಾಕಿ ಹೆಚ್ಚು ಅನುದಾನ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರದ ಸಂಬಂಧ ಪ್ರತಿಕ್ರಿಯಿಸಿದ್ದಾರೆ. 

ಹಾಸನ ಅಥವಾ ಮಂಡ್ಯ ಕ್ಕೆ ಮಾತ್ರ ಸಿಎಂ ಅಂತ ಹೆಚ್ ಡಿ ಕೆ ಎಲ್ಲಿಯಾದರು ಹೇಳಿಕೊಂಡಿದ್ದಾರಾ.?  ಅನುದಾನ ಕೊಡುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.  ಒತ್ತಡ ಹಾಕಿ ಅನುದಾನ ತೆಗೆದುಕೊಳ್ಳುವುದು ಅವರ ಜವಾಬ್ದಾರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಮೀರ್ ಹೇಳಿದ್ದಾರೆ. 

ಅಲ್ಲದೇ ನನಗೂ ಹಾವೇರಿ ಜಿಲ್ಲೆಗೆ ಅನುದಾನ ಬೇಕು. ವಕ್ಫ್ ಆಸ್ತಿಗೆ ಕಾಂಪೌಂಡ್ ಹಾಕಲು 500 ಕೋಟಿ ಅಗತ್ಯವಿದ್ದು, ಶೀಘ್ರ  100 ಕೋಟಿ ರಿಲೀಸ್ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ. 

ಅಲ್ಲದೇ ಸಚಿವ ರೇವಣ್ಣ ಅವರು ಸ್ಟ್ರಾಂಗ್ ವ್ಯಕ್ತಿತ್ವದವರಾಗಿದ್ದು, ಆದ್ದರಿಂದ ತಮಗೆ ಬೇಕಾದ ಅನುದಾನವನ್ನು ಅವರು ಪಡೆದುಕೊಳ್ಳುತ್ತಾರೆ. ನುದಾನ ಅಗತ್ಯವಿದ್ದವರು ಕೇಳಿ ಪಡೆಯಬೇಕೆಂದು ಸಿಎಂ ಪರ  ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. 

click me!