ರಾಜೀವ್ ಗಾಂಧಿ ಪ್ರತಿಷ್ಟಾನಕ್ಕೆ ಝಾಕೀರ್ ನಾಯ್ಕ್ ದೇಣಿಗೆ : ಬಿಜೆಪಿ ಟೀಕೆ

By chethan kumarFirst Published Sep 10, 2016, 2:50 PM IST
Highlights

''ಕಾಂಗ್ರೆಸ್ ಐಆರ್'ಎಫ್'ನಿಂದ ಪಡೆದ ದೇಣಿಗೆಯನ್ನು ಹಿಂತಿರುಗಿಸಿರುವುದಾಗಿ ಹೇಳಿದೆ ಆದರೆ ಐಆರ್'ಎಫ್ ತಾನು ಹಣ ವಾಪಸ್ ಪಡೆದಿಲ್ಲ ಎಂದು ಹೇಳುತ್ತಿದೆ' ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

ನವದೆಹಲಿ(ಸೆ.10): ವಿವಾದಿತ ಇಸ್ಲಾಂ ಧರ್ಮ ಗುರು ಝಾಕೀರ್ ನಾಯ್ಕ'ನ ರಿಸರ್ಚ್ ಫೌಂಡೇಷನ್'ನಿಂದ(ಐಆರ್'ಎಫ್) ಕಾಂಗ್ರೆಸ್'ನ ರಾಜೀವ್ ಗಾಂಧಿ ಫೌಂಡೇಶನ್  50 ಲಕ್ಷ ರೂ.ದೇಣಿಗೆ ಪಡೆದಿದ್ದು, ಇದು ಝಾಕೀರ್ ನಾಯ್ಕ್'ನ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಡಲು ಪಡೆದ ಲಂಚ ಎಂದು ಬಿಜೆಪಿ ಟೀಕಿಸಿದೆ.

''ಕಾಂಗ್ರೆಸ್ ಐಆರ್'ಎಫ್'ನಿಂದ ಪಡೆದ ದೇಣಿಗೆಯನ್ನು ಹಿಂತಿರುಗಿಸಿರುವುದಾಗಿ ಹೇಳಿದೆ ಆದರೆ ಐಆರ್'ಎಫ್ ತಾನು ಹಣ ವಾಪಸ್ ಪಡೆದಿಲ್ಲ ಎಂದು ಹೇಳುತ್ತಿದೆ' ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ರಾಜೀವ್ ಗಾಂಧಿ ಫೌಂಡೇಷನ್'ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಮಾಜಿ ಪ್ರಧಾನಿ ಮನ್'ಮೋಹನ್ ಸಿಂಗ್,  ಕಾಂಗ್ರೆಸ್ ನಾಯಕರಾದ  ಪಿ.ಚಿದಂಬರಂ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸದಸ್ಯರಾಗಿದ್ದಾರೆ.

ದೇಶದ ಭದ್ರತೆಗೆ ಅಪಾಯ ಒಡ್ಡುವ ಸಂಭಾವ್ಯ 24 ಅಕ್ರಮ ವಿದೇಶಿ ಚಾನಲ್'ಗಳನ್ನು 2012 ರಲ್ಲಿ ಅಂದಿನ ಕೇಂದ್ರ ವಾರ್ತಾ ಮಂತ್ರಿ ಮನೀಷ್ ತಿವಾರಿ ಪತ್ತೆ ಹಚ್ಚಿದ್ದರು. ಅದರಲ್ಲಿ ಝಾಕೀರ್ ನಾಯ್ಕ'ನ ಪೀಸ್ ಟಿವಿ ಸಹ ಒಂದು. ಆದರೆ ಅಂದಿನಿಂದ ರಾಜೀವ್ ಗಾಂಧಿ ಫೌಂಡೇಷನ್ ಏಕೆ ದೇಣಿಗೆಯನ್ನು ವಾಪಸ್ ಪಡೆದಿಲ್ಲ' ಎಂದು ಕಾಂಗ್ರೆಸ್ ನೀತಿಯ ಬಗ್ಗೆ ಟೀಕಿಸಿದರು.

click me!