
ನವದೆಹಲಿ (ಜ.17): ಅಪರೂಪವೆನ್ನಬಹುದಾದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಅದಕ್ಷ ಅಧಿಕಾರಿಗಳಿಗೆ ಕಠಿಣ ಸಂದೇಶವನ್ನು ನೀಡಿದೆ.
1992 ಬ್ಯಾಚ್’ನ ರಾಜ್ ಕುಮಾರ್ ದೇವಾಂಗನ್ ಹಾಗೂ 1998ರ ಬ್ಯಾಚ್’ನ ಮಯಾಂಕ್ ಶೀಲ್ ಚೋಹಾನ್ ಅವರನ್ನು ಸಮರ್ಥವಾಗಿ ಕಾರ್ಯನಿರ್ವಹಿಸದ ಕಾರಣಕ್ಕಾಗಿ ಸರ್ಕಾರವು ಕಡ್ಡಾಯ ನಿವೃತ್ತಿಗೊಳಪಡಿಸಿದೆ.
ಅಖಿಲ ಭಾರತ ಸೇವಾ ನಿಯಮಗಳನ್ವಯ, ಸೇವೆಯ 15 ಹಾಗೂ 25 ವರ್ಷಗಳಲ್ಲಿ ಪ್ರತಿ ಅಧಿಕಾರಿಯ ಸಾಧನೆಗಳ ಪರಿಶೀಲನೆ ನಡೆಯುತ್ತದೆ. ಅಧಿಕಾರಿಯ ಸೇವಾ ದಾಖಲೆ, ವಾರ್ಷಿಕ ಗೌಪ್ಯ ವರದಿ (ಏಸಿಆರ್) ಹಾಗೂ ಹಿರಿಯ ಅಧಿಕಾರಿಗಳು ನಡೆಸುವ ಪರಿಶೀಲನಾ ವರದಿಗಳನ್ನಾಧರಿಸಿ ಕ್ರಮ ಕೈಗೊಳ್ಳಲಾಗು
ಇಂತಹ ಅಪರೂಪದ ಕ್ರಮವನ್ನು ಸುಮಾರು 10 ವರ್ಗಳ ಹಿಂದೆ ಕೈಗೊಳ್ಳಲಾಗಿತ್ತು. ಇದು ದಂಡನೆಯಾಗಿರದೇ, ಕೇವಲ ಸಮರ್ಥವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗುವ ಕ್ರಮವಾಗಿದೆ. ಕಡ್ಡಾಯ ನಿವೃತ್ತಿಗೊಳಲ್ಪಟ್ಟ ಅಧಿಕಾರಿಗೆ, ನಿವೃತ್ತಿಯೋತ್ತರ ಸವಲತ್ತುಗಳು ಯಥಾರೀತಿ ಸಿಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.