ರಾಜ್ಯ ರಾಜಕೀಯ ವಿಪ್ಲವಕ್ಕೆ ಯುವಕರ ಆಕ್ರೋಶ

By Web Desk  |  First Published Jul 11, 2019, 4:34 PM IST

ರಾಜ್ಯದಲ್ಲಿ ಸೃಸ್ಟಿಯಾಗಿರುವ ಅರಾಜಕತೆಯನ್ನು ಬಾಗಲಕೋಟೆಯ ಯುವಕರು ಖಂಡಿಸಿದ್ದಾರೆ. ಈಗಾಗಲೇ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡುವುದು, ರೆಸಾರ್ಟ್‌ನಲ್ಲಿ ಉಳಿದುಕೊಳ್ಳೋದು, ಅವರನ್ನು ಒಲಿಸಿಕೊಳ್ಳೋದು ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.


ಬಾಗಲಕೋಟೆ (ಜು.11): ಅತೃಪ್ತ ಶಾಸಕರ ನಡೆಯನ್ನು ಖಂಡಿಸಿ ಮುಧೋಳ ಯುವ ಪಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ನಾಟಕವನ್ನು ಖಂಡಿಸಿರುವ ಯುವ ಪಡೆ, ಸೃಸ್ಟಿಯಾಗಿರೋ ಅರಾಜಕತೆ ಬಗ್ಗೆ ಕಿಡಿ ಕಾರಿದೆ. ಈಗಾಗಲೇ ರಾಷ್ಟ್ರಮಟ್ಟದಲ್ಲಿಯೂ ತಮಾಷೆಯ ವಸ್ತುವಾಗಿರುವ ರಾಜ್ಯ ರಾಜಕೀಯದ ಬಗ್ಗೆ ರಾಜ್ಯದ ಯುವಕರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬಾಗಲಕೋಟೆಯ ಮುಧೋಳ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಪಡೆ ಅಧ್ಯಕ್ಷ ಬಸವರಾಜ್, 'ರಾಜಕಾರಣಿಗಳಿಗೆ ಮತದಾರನ ಅಭಿವೃದ್ಧಿ ಬೇಕಿಲ್ಲ. ಶಾಸಕರಿಗೆ ತಮ್ಮ ಅಭಿವೃದ್ಧಿ ಮುಖ್ಯವಾಗಿದೆ. ಇಂತಹ ರಾಜಕಾರಣಿಗಳು ನಮ್ಮ ರಾಜ್ಯಕ್ಕೆ ಮಾರಕ. ಶಾಸಕ ಸ್ಥಾನದ ಪಾವಿತ್ರ್ಯತೆ ಹಾಳುಮಾಡುವ ಶಾಸಕರು ಬೇಕಿಲ್ಲ. ಇಂತಹ ಶಾಸಕರಿಗೆ ಕ್ಷೇತ್ರದ ಜನತೆ ಮರಳಾಗಬಾರದು' ಎಂದಿದ್ದಾರೆ.

Tap to resize

Latest Videos

ರಾಜೀನಾಮೆ ಕೊಟ್ಟ ಇಬ್ಬರು ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಖತಂ?

click me!