(ವೈರಲ್ ಚೆಕ್) ಜೀವಂತ ನಾಯಿಯನ್ನು ಸುಟ್ಟ ಭಾರತೀಯ ಯುವಕ.!

Published : Dec 23, 2017, 10:09 AM ISTUpdated : Apr 11, 2018, 12:54 PM IST
(ವೈರಲ್ ಚೆಕ್) ಜೀವಂತ ನಾಯಿಯನ್ನು ಸುಟ್ಟ ಭಾರತೀಯ ಯುವಕ.!

ಸಾರಾಂಶ

ಯುವಕನೊಬ್ಬ ನಾಯಿಯೊಂದನ್ನು ಜೀವಂತವಾಗಿ ಬೆಂಕಿಯ ಮುಂದೆ ಹಿಡಿದು ಸುಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿರುವ ಯುವಕ ವಲ್ಸಾದ ಆರ್‌ವಿಎಂ ಶಾಲೆಯ ಶಿಕ್ಷಕೆಂದು ಹೇಳಲಾಗುತ್ತಿದೆ.

ನವದೆಹಲಿ (ಡಿ.23): ಯುವಕನೊಬ್ಬ ನಾಯಿಯೊಂದನ್ನು ಜೀವಂತವಾಗಿ ಬೆಂಕಿಯ ಮುಂದೆ ಹಿಡಿದು ಸುಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿರುವ ಯುವಕ ವಲ್ಸಾದ ಆರ್‌ವಿಎಂ ಶಾಲೆಯ ಶಿಕ್ಷಕೆಂದು ಹೇಳಲಾಗುತ್ತಿದೆ.

ಪ್ರಾಣಿಪ್ರಿಯರು ಈ ವಿಡಿಯೋವನ್ನು ನೋಡಿ ಆ ಕ್ರೂರಿಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ಈ ವಿಡಿಯೋ ಬಹುಬೇಗನೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗುತ್ತಿದೆ. ಹಾಗಾದರೆ ಈ ವಿಡಿಯೋ ನಿಜಕ್ಕೂ ಭಾರತದ್ದೇ, ಈ ವಿಡಿಯೋದಲ್ಲಿರುವ ಅಪರಿಚಿತ ಯುವಕ ಭಾರತೀಯನೇ? ಎಂದು ಪರಿಶೀಲಿಸಿದಾಗ ಬಯಲಾದ ಸತ್ಯವೇ ಬೇರೆ. ಏಕೆಂದರೆ ಇದು ಚೀನಾದಲ್ಲಿ ನಡೆದ ಘಟನೆ.

2017ರಲ್ಲಿ ಅಪರಿಚಿತ ಯುವಕನೊಬ್ಬ ತನಗೆ ನಾಯಿ ಮಾಂಸ ಇಷ್ಟವೆಂದು ಹೇಳುತ್ತಿದ್ದು, ಆತನ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದರು. ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ನಂತರ ಪ್ರಾಣಿಪ್ರಿಯರು ಪ್ರಾಣಿಯನ್ನು ಹಿಂಸಿಸಿದವರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸಾಮಾಜಿಕ ಮಾದ್ಯಮಗಳ ಮೂಲಕ ಆಗ್ರಹಿಸಿದ್ದಾರೆ.

 ಹೀಗೆ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿಬಿಡಲಾಗಿದ್ದ ವಿಡಿಯೋವು ಭಾರತದಲ್ಲಿ ಭಾರತೀಯ ಶಿಕ್ಷಕನೊಬ್ಬ ಈ ರೀತಿಯ ಅಮಾನವೀಯ ಕೃತ್ಯ ಮಾಡುತ್ತಿದ್ದಾನೆ ಎಂಬರ್ಥದಲ್ಲಿ ವೈರಲ್ ಆಗಿದೆ.  ಹೀಗಾಗಿ ನಾಯಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಬೆಂಕಿಯ ಮುಂದೆ ಹಿಡಿದು ಸುಡುತ್ತಿರುವುದು ಭಾರತೀಯ ಎಂದು ಬಿಂಬಿತವಾಗಿದ್ದ ವಿಡಿಯೋ ಸುಳ್ಳು ಎಂಬಂತಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ
ಬೈಕ್ ರೈಡಿಂಗ್‌ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್