
ಬೆಂಗಳೂರು (ಡಿ.23): ಕಾಶ್ಮೀರ ಸಮಸ್ಯೆ ನಾನು ಬಗೆಹರಿಸುತ್ತೇನೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಹುರಿಯತ್ ಪ್ರತ್ಯೇಕತಾವಾದಿ ಮುಖಂಡ ಗಿಲಾನಿ ಕಾಶ್ಮೀರ ಸ್ವಾಯತ್ತತೆಯ ವಿಚಾರವನ್ನು ಮುಂದಿಟ್ಟು ‘ಇದೊಂದನ್ನು ಒಪ್ಪಿಕೊಳ್ಳಿ ಸರ್’ ಎಂದು ದುಂಬಾಲುಬಿದ್ದರು. ದೇವೇಗೌಡರು ‘ನನ್ನ ಸಚಿವ ಸಂಪುಟದ ಸದಸ್ಯರನ್ನು ಮೊದಲು ಒಪ್ಪಿಸುತ್ತೇನೆ’ ಎಂದರು. ನಂತರ ಇದೇ ವಿಷಯವನ್ನು ದೇವೇಗೌಡರು ಮಾಧ್ಯಮದವರ ಮುಂದೆ ಪ್ರಸ್ತಾಪಿಸಿ ‘ನಾನು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತೇನೆ’ ಎಂದರು. ನಂತರ ಗಿಲಾನಿಯನ್ನು ದೇವೇಗೌಡರು ಮೂರು ಬಾರಿ ಮಾತುಕತೆಗೆ ಕರೆದರು. ಮೂರು ಬಾರಿಯೂ ‘ಮೂರನೇ ಪಕ್ಷವಾಗಿ ಅಮೆರಿಕದ ಸಮಕ್ಷಮದಲ್ಲಿ ಮಾತುಕತೆ ನಡೆಯಬೇಕು’ ಅಂದರು. ಅದಕ್ಕೆ ಪ್ರಧಾನಿ ‘ಅದು ಸಾಧ್ಯವಿಲ್ಲ. ಇದು ದ್ವಿಪಕ್ಷೀಯ ಚರ್ಚೆ, ಅಷ್ಟೆ. ಬೇರೆ ಮಾತೇ ಇಲ್ಲ’ ಎಂದುಬಿಟ್ಟರು. ಇದಾದದ್ದು 1997ರ ಮಾರ್ಚ್‌ನಲ್ಲಿ. ನಂತರ ಎಲ್.ಕೆ.ಅಡ್ವಾಣಿ ಹಾಗೂ ಆಗಿನ ಗೃಹಮಂತ್ರಿಗಳು ಸ್ವಾಯತ್ತತೆಯ ಬಗ್ಗೆ ಚರ್ಚಿಸಲು ಒಂದು ಸಮಿತಿ ಮಾಡಿ ಅಂದರು.
ದೇವೇಗೌಡರು ಸಮಿತಿ ರಚಿಸಿದರು. ಸಮಿತಿಯ ವರದಿ ಸಿದ್ಧವಾದ ಬಳಿಕ ಅದಕ್ಕೆ ಅಡ್ವಾಣಿ, ಸಚಿವ ಸಂಪುಟದಲ್ಲಿ ಇದು ಒಪ್ಪಿಗೆ ಪಡೆದಿಲ್ಲ ಅಂದರು. ಆಗ ಸಂಪುಟದಲ್ಲಿಟ್ಟು ಒಪ್ಪಿಗೆಯನ್ನೂ ಪಡೆದುಕೊಂಡದ್ದಾಯಿತು. ಅದಾದ ನಂತರ ಇದು ಕಾಶ್ಮೀರ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು ಅಂದರು. ಅಲ್ಲೂ ಚರ್ಚೆಯಾಯಿತು. ಆಮೇಲೆ ಅಡ್ವಾಣಿಯವರು ಗಿಲಾನಿಗೆ ನಾವು ಅವಕಾಶ ಕೊಡೆವು ಎಂದರು. ಕಾಶ್ಮೀರ ಸ್ವಾಯತ್ತತೆಯ ವಿಚಾರ ಹೀಗೆ ಮುರಿದುಬಿತ್ತು.
ಉಪರಾಷ್ಟ್ರಪತಿಯಾಗುತ್ತೇನೆ ಎಂದಿದ್ದರು!
1991ರಲ್ಲಿಯೇ ದೇವೇಗೌಡರು ತಮ್ಮ ಆತ್ಮೀಯ ಮಿತ್ರರೊಂದಿಗೆ ರಾಜಕೀಯದಿಂದ ನಿವೃತ್ತರಾಗುವ ವಿಚಾರದ ಬಗ್ಗೆ ಚರ್ಚಿಸಿದ್ದರು. ತರುಣರಿಗೆ ಅವಕಾಶ ಮಾಡಿಕೊಡಬೇಕೆಂಬುದೇ ಅದರ ಉದ್ದೇಶವಾಗಿತ್ತು. ಆದರೆ, ಅದೇ ವೇಳೆ, ಅವರಲ್ಲಿ ರಾಷ್ಟ್ರದ ರಾಜಕಾರಣದತ್ತ ಹೊರಳುವ ಇಚ್ಛೆಯೂ ಹೊಳೆದದ್ದುಂಟು. ಆಗ ಅವರು ಹೀಗೆಂದು ಹೇಳಿದ್ದರು, ‘ನಾನು ಉಪರಾಷ್ಟ್ರಪತಿಯಾಗಿಬಿಡುತ್ತೇನೆ. ಇಲ್ಲಿ ನೀವು ನನ್ನ ಸ್ಥಾನಕ್ಕೆ ಬರಬಹುದು.’ ಇದನ್ನು ಉಲ್ಲೇಖಿಸಿರುವ ರಾಜಕೀಯ ಇತಿಹಾಸಕಾರ, ಪತ್ರಕರ್ತ ಅತ್ತರ್ ಚಂದ್ ಅವರು ಹೀಗೆ ಹೇಳಿದ್ದರು - ‘ಗೌಡರ ಹೇಳಿಕೆ ಭವಿಷ್ಯವಾಣಿಯಾಗಿಯೇ ಪರಿಣಮಿಸಿತು. ಉಪರಾಷ್ಟ್ರಪತಿಯಾಗುವುದಕ್ಕೆ ಬದಲಾಗಿ ಅವರು ಪ್ರಧಾನ ಮಂತ್ರಿಯಾಗಿ ದೆಹಲಿಗೆ ಹೋದರು. ಮುಂದೆಯೂ ಅನೇಕ ಸಂದರ್ಭಗಳಲ್ಲಿ ಅವರು ರಾಜಕೀಯ ನಿವೃತ್ತಿಯ ಮಾತನಾಡಿದ್ದುಂಟು. ಆದರೆ, ಬದಲಾಗುತ್ತಿದ್ದ ರಾಜಕೀಯ ಸನ್ನಿವೇಶಗಳು, ದೇಶ ಎದುರಿಸಬೇಕಾಗಿ ಬರುತ್ತಿದ್ದ ಸಮಾವೇಶಗಳು, ಅದರಲ್ಲೂ ರೈತರ ಮತ್ತು ಕಾರ್ಮಿಕರ ಸಮಸ್ಯೆಗಳು, ಅಭಿಮಾನಿಗಳ ಮತ್ತು ಬೆಂಬಲಿಗರ ಒತ್ತಾಯಗಳು, ಇವೆಲ್ಲಕ್ಕಿಂತಲೂ ಅವರ ಆತ್ಮಸಾಕ್ಷಿಯೇ ರಾಜಕೀಯ ಸನ್ಯಾಸವನ್ನು ಕೈಗೊಳ್ಳದಂತೆ ಮಾಡುತ್ತಾ ಬಂದಿದೆ.’
ಕೈಕೊಟ್ಟ ಕೇಸರಿ, ಹಳ್ಳಕ್ಕೆ ಬಿದ್ದ ಗುಜ್ರಾಲ್ ಏಪ್ರಿಲ್ 12, 1997ರಂದು ಪ್ರಧಾನಿ ದೇವೇಗೌಡರು ಲೋಕಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸಬೇಕಾಯಿತು. ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಸಂಸ್ಕೃತಿಯ ಸ್ವರೂಪ ಮತ್ತು ಛವಿಯನ್ನು ನಾವು ಹೇಗೆ ಬದಲಾಯಿಸಿದೆವು ಎಂಬುದನ್ನೂ ಸ್ಪಷ್ಟಪಡಿಸಿದರು. ತಾವಾಗಲೀ, ತಮ್ಮ ಸಂಪುಟದ ಸದಸ್ಯರಾಗಲೀ ಮಾಡಿರಬಹುದಾದ ಯಾವುದೇ ಒಂದು ತಪ್ಪನ್ನು ಎತ್ತಿ ತೋರಿಸಿ ಎಂಬ ಸವಾಲನ್ನೂ ಎಸೆದರು. ಮುಚ್ಚುಮರೆ ಮಾಡುವ ಅಭ್ಯಾಸ ದೇವೇಗೌಡರಿಗೆ ಇಲ್ಲದೇ ಇದ್ದುದರಿಂದ, ಕಳಂಕಿತರಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿಯಿಂದ ಆದಷ್ಟೂ ದೂರದಲ್ಲಿಯೇ ಉಳಿದಿದ್ದರು. ಆದರೆ ಅವರ ಸಂಪುಟದಲ್ಲಿದ್ದ ವಿದೇಶಾಂಗ ಸಚಿವ ಐ.ಕೆ.ಗುಜ್ರಾಲ್ ಅವರು ಕೇಸರಿ ಜೊತೆ ಆಪ್ತರಾಗುತ್ತಾ ನಡೆದಿದ್ದರು.
ಹೀಗಾಗಿ ಸ್ವಲ್ಪಮಟ್ಟಿ ನ ವ್ಯಂಗ್ಯದೊಂದಿಗೇ, ಈ ವಿಚಾರವನ್ನು ತಮ್ಮ ವಿದಾಯ ಭಾಷಣದಲ್ಲಿ ಗೌಡರು ಉಲ್ಲೇಖಿಸಿದ್ದರು. ಪ್ರಧಾನ ಮಂತ್ರಿಯ ಸ್ಥಾನವನ್ನು ಅಲಂಕರಿಸುವ ಕನಸು ನನಸಾಗುವ ಸಂಭವ ಇಲ್ಲವೆಂಬ ಅರಿವಿದ್ದ ಹಿನ್ನೆಲೆಯಲ್ಲಿ ಕೇಸರಿ ಅವರು ದೇವೇಗೌಡರ ನ್ನು ಹೊರತುಪಡಿಸಿ ಸಂಯುಕ್ತರಂಗದ ಬೇರೆ ಯಾವ ವ್ಯಕ್ತಿಗೆ ಬೇಕಾದರೂ ಬೆಂಬಲ ನೀಡಲು ಸಿದ್ಧವಿರುವುದಾಗಿ ಹೇಳಿದ್ದರು. ನಂತರ ಗುಜ್ರಾಲ್ ಅವರೇ ಪ್ರಧಾನ ಮಂತ್ರಿಯ ಹುದ್ದೆ ವಹಿಸಿಕೊಂಡರಷ್ಟೆ! ಕೇಸರಿ ಅವರು ತಮ್ಮನ್ನು ಯಾವಾಗ ಬಲಿ ಕೊಡುತ್ತಾರೆಂಬ ಅರಿವಿಲ್ಲದೆ ಅವರ ಬಲೆಗೆ ಬಿದ್ದ ಗುಜ್ರಾಲ್ ಬಗ್ಗೆ ದೇವೇಗೌಡರ ಮನಸ್ಸಿನಲ್ಲಿ ಕನಿಕರವೇ ಮೂಡಿತ್ತು. ಮುಂದೆ, ಆರು ತಿಂಗಳ ಒಳಗಾಗಿ ತಮ್ಮ ಅನಿಸಿಕೆ ನಿಜವಾದುದಕ್ಕಾಗಿ ಅವರಿಗೆ ತುಂಬ ವ್ಯಥೆಯೇ ಆಯಿತು. ಇಷ್ಟಾಗಿಯೂ, ಸೀತಾರಾಮ್ ಕೇಸರಿ ತೀರಿಕೊಂಡಾಗ ಅವರಿಗೆ ಅಂತಿಮ ನಮನವನ್ನು ಸಲ್ಲಿಸಲು ಬಂದ ಮೊದಲಿಗರಲ್ಲಿ ದೇವೇಗೌಡರು ಇದ್ದುದನ್ನು ಕಂಡ ಪತ್ರಕರ್ತರೂ, ಪಕ್ಷದ ಹಿರಿಯ ಕಾರ್ಯಕರ್ತರೂ ಆಶ್ಚರ್ಯಪಟ್ಟರು. ಶತ್ರುವೇ ಆದರೂ ಸಾವಿನ ಬಳಿಕ ವೈರವನ್ನು ಮುಂದುವರಿಸಬಾರದೆಂಬುದು ನಮ್ಮ ಸಂಸ್ಕೃತಿ ಹೇಳಿಕೊಟ್ಟಿರುವ ಪಾಠ ಗೌಡರು ಕೇಸರಿ ಅವರನ್ನು ಶತ್ರುವೆಂದು ಪರಿಗಣಿಸಿರಲೇ ಇಲ್ಲವಲ್ಲ!
‘ನಿದ್ದೆ ಮಾಡುವ ಪ್ರಧಾನ ಮಂತ್ರಿ’
ಪ್ರತಿದಿವೂ 16-18 ಗಂಟೆಗಳ ಕಾಲ ದೇವೇಗೌಡರು ದೇಶಕ್ಕಾಗಿ ದುಡಿಯುತ್ತಿದ್ದರೆಂದರೆ ಅತಿಶಯೋಕ್ತಿಯಲ್ಲ. ರಾಷ್ಟ್ರದ ಹಿತಚಿಂತನೆ ಸದಾ ಅವರ ತಲೆಯಲ್ಲಿ ತುಂಬಿಕೊಂಡಿರುತ್ತಿದ್ದುದರಿಂದ ನಿದ್ದೆಯೂ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಕೆಲವೊಮ್ಮೆ ಪ್ರಮುಖ ಸಭೆಗಳು ನಡೆಯುತ್ತಿದ್ದ ಸಂದರ್ಭಗಳಲ್ಲಿ ಅವರು ತೂಕಡಿಸುತ್ತಿದ್ದುದು ಅಥವಾ ತೂಕಡಿಸುವಂತೆ ನಟಿಸುತ್ತಿದ್ದುದೂ ಉಂಟು. ಇದರ ಒಂದು ಮುಖವನ್ನು ಅವರೇ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. ವೀರ್ ಸಾಂಘ್ವಿ ಇದನ್ನು ಹೀಗೆ ದಾಖಲಿಸಿದ್ದಾರೆ. ‘ರಾತ್ರಿಯ ಹೊತ್ತು ನಿದ್ದೆ ಮಾಡುವಲ್ಲಿ ತೊಂದರೆ ಉಂಟಾಗುತ್ತಿದ್ದುದರಿಂದ ಪ್ರಮುಖ ಸಭೆಗಳಲ್ಲಿ ತಾನು ನಿದ್ದೆ ಮಾಡಿಬಿಡುತ್ತಿದ್ದುದಾಗಿ ದೇವೇಗೌಡರು ನನಗೆ ತಿಳಿಸಿದ್ದರು. ಇದರಿಂದಾಗಿ ಕೆಲ ಪತ್ರಕರ್ ರು ಅವರ ಅನವಧಾನವನ್ನು ‘ನಿದ್ದೆ ಮಾಡುವ ಪ್ರಧಾ ನ ಮತ್ರಿ’ ಎಂದು ಕುಹಕ ಮಾಡಿದ್ದೂ ಉಂಟು. ‘ಕೆಲವೊಮ್ಮೆ ಕಣ್ಣು ಮುಚ್ಚಿ ಕುಳಿತಿರುವಾಗಲೂ ನಾಡಿನ ಹಿತದ ಬಗ್ಗೆ ಚಿಂತಿಸುತ್ತಿರುತ್ತೇನೆ’ ಎಂದು ಹೇಳಿದ್ದನ್ನೂ
‘ನಿದ್ದೆ ಮಾಡುವ ಮಹಾತ್ಮ’ ಎಂದು ಲೇವಡಿ ಮಾಡಿದ್ದುಂಟು. ದೇವೇ ಗೌಡರ ಸಂಪುಟದ ಕಾರ್ಯದರ್ಶಿಯಾಗಿದ್ದ ಸುಬ್ರಮಣ್ಯಂ ಅವರು ನಿಜವಾದ ರಹಸ್ಯವನ್ನು ಹೊರಹಾಕುತ್ತ ಈ ಮಾತುಗಳನ್ನಾಡಿದ್ದಾರೆ, ‘ದೇವೇಗೌಡರು ಯಾವಾಗಲೂ ಎಚ್ಚರದಿಂದ ಇರುತ್ತಿದ್ದರು. ನಡೆದುದೆಲ್ಲವನ್ನೂ ಅವರು ಕೇಳಿಸಿಕೊಳ್ಳುತ್ತಿದ್ದರು. ಅವರು ತೂಕಡಿಸುವಂತೆ ತೋರಿದಾಗ, ಅದು ನನಗೆ ಚಿಟ್ಟುಹಿಡಿದಿದೆ ಎಂಬುದನ್ನು ಸೂಚಿಸುವ ಸಂಕೇತವಾಗಿರುತ್ತಿತ್ತು.’ ಆ ಅವಧಿಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಪದ್ಮನಾಭಯ್ಯ ಅವರು ಹೇಳಿರುವ ಮಾತುಗಳು ದೇವಗೌಡರ ನಿದ್ರಾವಸ್ಥೆಯ ಬಗೆಗಿನ ತಪ್ಪು ಕಲ್ಪನೆಯನ್ನು ನಿವಾರಿಸುತ್ತವೆ. ‘ಸಭೆಗಳ ಅವಧಿಯಲ್ಲಿ ವೇದಿಕೆ ಮೇಲೆ ಕುಳಿತಿರುವಾಗ, ನಿದ್ರಿಸುತ್ತಾರೆಂಬ ಟೀಕೆಗಳನ್ನು ಮಾಡಲಾಗುತ್ತಿತ್ತು.
ಆದರೆ ಮುಖಾಮುಖಿಯಾಗಿ ಅವರೊಂದಿಗೆ ನಡೆಯುತ್ತಿದ್ದ ಅನೇಕ ಸಭೆಗಳಲ್ಲಿ ಅವರು ಸಂಪೂರ್ಣವಾಗಿ ಗಮನ ಕೊಡುತ್ತಿದ್ದರು. ಒಮ್ಮೆ ದೇವೇಗೌಡರು ತಾವಾಗಿಯೇ ನನಗೆ ಹೇಳಿದ್ದರು - ‘ಕಣ್ಣುಗಳಲ್ಲಿ ಒಂದು ರೀತಿ ಶುಷ್ಕ ಸ್ಥಿತಿಯ ತೊಂದರೆಯನ್ನು ಅನುಭವಿಸುತ್ತಿದ್ದೇನೆ. ಕಣ್ಣುಗಳನ್ನು ತೆರೆದುಕೊಂಡಿದ್ದರೆ ಒಂದು ಬಗೆಯ ಕಲ್ಲಿನ ಕಣ ಅಥವಾ ಮರಳುಗಲ್ಲು ಕಣ್ಣಲ್ಲಿ ಓಡಾಡಿದ ಅನುಭವವಾ ಗುತ್ತದೆ. ಹಾಗಾಗಿ ಸಾಧ್ಯವಿರುವ ಎಲ್ಲಾ ಸಂದರ್ಭಗಳಲ್ಲೂ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರಿ ಎಂದು ವೈದ್ಯರು ನನಗೆ ಸಲಹೆ ನೀಡಿ ನೀವು ಹೂಂ ಅನ್ನಿ, ಅಣ್ವಸ್ತ್ರ ಪರೀಕ್ಷೆ ಮಾಡೇಬಿಡೋಣ!
ಗೌಡರು ವೇದಿಕೆಯಲ್ಲಿ ನಿದ್ದೆ ಮಾಡುವುದಕ್ಕೂ ಕಾರಣವಿದೆ!
ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆನಡೆಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು. ಅದಕ್ಕೂ ಮುನ್ನ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಅಣ್ವಸ್ತ್ರ ಪರೀಕ್ಷೆ ನಡೆಸುವ ಪ್ರಸ್ತಾಪ ವಿಜ್ಞಾನಿಗಳಿಂದ ಬಂದಿತ್ತು. ಆದರೆ ದೇವೇಗೌಡರು ಅದನ್ನು ಮುಂದೂಡಿದ್ದರು. ಆಗ ನಡೆದಿದ್ದ ಗುಪ್ತ ಸಂವಾದವನ್ನು ಹೀಗೆ ಉದ್ಧರಿಸಬಹುದು. ಈ ಸಂವಾದದಲ್ಲಿ ಭಾಗಿಯಾಗಿ ದ್ದ ಸಂಪುಟ ಕಾರ್ಯದರ್ಶಿ ಸತೀಶ್ ಚಂದ್ರ ಪ್ರಶ್ನಿಸಿದರು: ‘ಸರ್, ನಾವು ಆರ್ಥಿಕವಾಗಿ ಸದೃಢವಾಗಿಲ್ಲ. ನೂರಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ.
ಈಗೇನು ಮಾಡೋಣ ಅಂತೀ ರಿ?’ ದೇವೇಗೌಡರು ಹೀಗಂದರು, ‘ಮಿ.ಸತೀಶ್! ಈಗಷ್ಟೇ ಚೀನಾದ ಅಧ್ಯಕ್ಷರು ನಮ್ಮಲ್ಲಿಗೆ ಭೇಟಿ ನೀಡಿ ಹಿಂತಿರುಗಿದ್ದಾರೆ. ನಾನು ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸು ತ್ತಿದ್ದೇನೆ. ಪಾಕಿಸ್ತಾನದಿಂದ ಒಂದು ನಿಯೋಗ ಬರಲಿದೆ. ಒಟ್ಟಿನಲ್ಲಿ ನೆರೆಹೊರೆಯ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿ ದ್ದೇನೆ.’ ಆಗ ಅಬ್ದುಲ್ ಕಲಾಂ ಹೇಳಿದರು, ‘ಸರ್, ಅನೇಕ ತರುಣರು ನಮ್ಮ ನಿರ್ಧಾರಕ್ಕಾಗಿ ಕಾಯುತ್ತಿದ್ದಾ ರೆ. ನೀವು ಹೂಂ ಎಂದರೆ ಸಾಕು, ಉಳಿದೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ.’ ಇದಕ್ಕೆ ಪ್ರತಿಯಾಗಿ ದೇವೇಗೌಡರು ಹೇಳಿದರು. ‘ಅಮೆರಿಕ ವಿಧಿಸಬಹುದಾಗಿರುವ ದಿಗ್ಭಂಧನಗಳ ಚಿಂತೆಯೇನೂ ನನ್ನನ್ನು ಕಾಡುತ್ತಿಲ್ಲ. ಚೀನಾದ ಅಧ್ಯಕ್ಷರು 35 ವರ್ಷಗಳ ನಂತರ ನಮ್ಮಲ್ಲಿಗೆ ಭೇಟಿ ನೀಡಿ ದ್ದಾರೆ. ಭೂತಾನದ ನರೇಶರೂ ಅನುಕೂಲಕರವಾಗಿ ಸ್ಪಂದಿಸುತ್ತಿದ್ದಾರೆ. ನಾವು ಪಾಕಿಸ್ತಾನಕ್ಕೆ ಸಕ್ಕರೆ ರಫ್ತು ಮಾಡುತ್ತಿದ್ದೇವೆ. ಚೀನಾ ಮತ್ತು ರಷ್ಯಾ ಕೂಡ ಪ್ರಬಲ ರಾಷ್ಟ್ರಗಳೆಂಬುದನ್ನು ನಾವು ಮರೆಯಬಾರದು. ನಾವು ಈ ಸಂಧರ್ಭದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದೇ ಆದರೆ, ಅವರು ನಮ್ಮ ಬಗ್ಗೆ ಏನೆಂದು ಯೋಚಿಸು ವುದಿಲ್ಲ?’
ಡಾ| ಕಲಾಮ್ ಕೇಳಿದರು,‘ಸರ್, ಅಮೆರಿಕ ವಿಧಿಸಬಹುದಾಗಿರುವ ದಿಗ್ಭಂಧನಗಳ ವಿಚಾರ ನಿಮ್ಮನ್ನು ಕಾಡುತ್ತಿರುವಂತಿದೆ.’ ಆಗ ದೇವೇಗೌಡರು ಹೇಳಿ ದರು, ‘ಅಮೆರಿಕದ ದಿಗ್ಭಂಧನಗಳ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲಿ? ನಾವು ಒಂದು ನೂರು ಕೋಟಿಯಷ್ಟು ಬಲಿಷ್ಠರಾಗಿರುವ ರಾಷ್ಟ್ರ. ನಾವು ನಮ್ಮ ನೆರೆಹೊರೆಯವರ ಬಗ್ಗೆ ಯೋಚಿಸಬೇಕಾಗಿದೆ. ಹಾಗಾಗಿ ನಾವು ವಿವೇಕದಿಂದ ವರ್ತಿಸಬೇಕು.’
ಈ ಗೌಡನ ಸಾಧನೆ ಯಾರೂ ಗಮನಿಸಲೇ ಇಲ್ಲ!
ಎದುರಾಳಿಯೇ ಆದರೂ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಬೇಕು ಎಂಬ ನೀತಿಯನ್ನು ಪಾಲಿಸದಿರುವಂಥ ಕೆಲವು ಪತ್ರಕರ್ತರು ‘ದೇವೇಗೌಡರ ಪ್ರಧಾನ ಮಂತ್ರಿತ್ವದ ಅವಧಿ ಸಂಪೂರ್ಣವಾಗಿ ಮರೆತುಬಿಡುವಂಥಹುದು’ ಎಂದು ಅಭಿಪ್ರಾಯಪಟ್ಟಿರುವುದು ದೇವೇಗೌಡರ ಗಮನಕ್ಕೂ ಬಂದಿದೆ. ಅಂಥವರಿಗೆ ವಿನಯಪೂರ್ವಕವಾಗಿ ಅವರು ಮಾಡಿದ ಮನವಿ ಇದು. ‘ಯಾರಾದರೂ ನ್ಯಾಯಸಮ್ಮತವಾದ ವಿಚಾರ-ವಿಮರ್ಶೆ ಮಾಡಬೇಕೆಂದು ಬಯಸಿದ್ದೇ ಆದಲ್ಲಿ, ಅವರು ನನ್ನ ಸರ್ಕಾರದ ಮೊದಲ ಏಳು ತಿಂಗಳ ಕಾರ್ಯನಿರ್ವಹಣೆಯನ್ನು ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಅಧಿಕಾರಸ್ಥರಾಗಿದ್ದ ಯಾವ ಪ್ರಧಾನಿಯ ಮೊದಲ ಏಳು ತಿಂಗಳು ಕಾರ್ಯಸಾಧನೆಯೊಂದಿಗೆ ಬೇಕಾದರೂ ಹೋಲಿಸಿ ನೋಡಬಹುದು.’ ಇನ್ನೊಮ್ಮೆ ಒಂದು ದರ್ಶನದಲ್ಲಿ ಗೌಡರು ಹೇಳಿದ್ದರು.
‘ಇಂದಿನ ವ್ಯಂಗ್ಯ ಇದೇ. ಈ ಗೌಡನ ಸಾಧನೆ ಯನ್ನು ಯಾರೂ ಗಮನಕ್ಕೆ ತಂದುಕೊಳ್ಳಲೇ ಇಲ್ಲ. ನಾನು ಅಧಿಕಾರ ವಹಿಸಿಕೊಂಡ ೧೫ ದಿವಸಗಳ ಒಳಗೆ ರೈತರಿಗೆ ಪರಿಹಾರದ ರೂಪದಲ್ಲಿ 2,500 ಕೋಟಿ ರು. ಮಂಜೂರು ಮಾಡಿದೆ. ಸಾಮಾನ್ಯವಾಗಿ ಸಂಸತ್ತು ಇಂಥ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ ನಾನು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡೆ. ಎರಡನೆಯದು, ಪ್ರಾಥಮಿಕ ಶಿಕ್ಷಣ, ನೀರು ಇವೇ ಮೊದಲಾದ ಏಳು ಆದ್ಯತಾ ವಲಯಗಳನ್ನು ಗುರುತಿಸಿದ್ದೆ. 4 ವರ್ಷದೊಳಗೆ ಜಾರಿಗೊಳಿಸುವ ಕಾಲಬದ್ಧ ನಿರ್ಧಾರಗಳಾಗಿದ್ದವು ಅವು. ಬೇರೆ ಯಾವ ಪ್ರಧಾನಮಂತ್ರಿ ಇಂಥ ಕಾಲಬದ್ಧ ಕಾರ್ಯಕ್ರಮಗಳನ್ನು ಘೋಷಿಸಿದ್ದರು? ನನ್ನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪವೇನಾದರೂ ಇವೆಯೇ? ನಾವು ರಷ್ಯಾದೊಡನೆ ೧೬೦೦ ಕೋಟಿ ರು. ರಕ್ಷಣಾ ವ್ಯವಹಾರ ನಡೆಸಿದ್ದೆವು. ಈ ವಿಷಯವನ್ನು ವಾಜಪೇಯಿ ಕೂಡ ಮೆಚ್ಚಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.