ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಭೂಕಬಳಿಕೆ ಆರೋಪ; ರೈತನಿಂದ ಆತ್ಮಹತ್ಯೆ ಯತ್ನ

By Suvarna Web DeskFirst Published Jan 15, 2017, 5:34 AM IST
Highlights

ಮಾಗಡಿ ತಾಲ್ಲೂಕಿನ ಕಣ್ಣೂರಿನಲ್ಲಿರುವ ತನ್ನ ಜಮೀನನ್ನು ಮೋಸ ಮಾಡಿ ಮೃತ್ಯುಂಜಯ ಸ್ವಾಮಿಜಿ ತನ್ನ ಭಾಮೈದುನ ಪಂಚಾಕ್ಷರಿಗೆ ಕೊಡಿಸಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾನೆ. ಅಲ್ಲದೆ ಮಹೇಶ್ ಅವರ ಜಮೀನಿಗೆ ಹಾದು ಹೋಗಲು ರಸ್ತೆ ಸಂಪರ್ಕ ಕಲ್ಪಿಸಲು ಮೃತ್ಯುಂಜಯ ಸ್ವಾಮೀಜಿ ಅಡ್ಡಿ ಪಡಿಸಿದ್ದಾರೆ ಎಂದು ಮಹೇಶ್ ಅಪಾದಿಸಿದ್ದಾರೆ.  

ತುಮಕೂರು (ಜ.15): ತನ್ನ ಸಾವಿಗೆ ಸ್ವಾಮೀಜಿಯವರೇ ಕಾರಣ ದು ಡೆತ್’ನೋಟ್’ನಲ್ಲಿ ಬರೆದಿಟ್ಟು ಯುವ-ರೈತನೊಬ್ಬ ತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಾಗಡಿ ತಾಲ್ಲೂಕಿನಲ್ಲಿ ನಡೆದಿದೆ.

ತುಮಕೂರಿನ ಖ್ಯಾತ ಮಠವೊಂದರಲ್ಲಿ ಪ್ರಾಂಶುಪಾಲರಾಗಿದ್ದ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಭೂಕಬಳಿಕೆ ಆರೋಪ ಮಾಡಿರುವ ಮಾಗಡಿ ತಾಲೂಕಿನ ಕಣ್ಣೂರು ನಿವಾಸಿ ಮಹೇಶ್, ತನ್ನ ಸಾವಿಗೆ ಮೃತ್ಯುಂಜಯ ಸ್ವಾಮೀಜಿ ಕಾರಣವೆಂದು, ಡೆತ್’ನೋಟ್ ಜತೆಗೆ ವಿಡಿಯೋ ರೆಕಾರ್ಡಿಂಗ್ ಕೂಡಾ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಾಗಡಿ ತಾಲ್ಲೂಕಿನ ಕಣ್ಣೂರಿನಲ್ಲಿರುವ ತನ್ನ ಜಮೀನನ್ನು ಮೋಸ ಮಾಡಿ ಮೃತ್ಯುಂಜಯ ಸ್ವಾಮಿಜಿ ತನ್ನ ಭಾಮೈದುನ ಪಂಚಾಕ್ಷರಿಗೆ ಕೊಡಿಸಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾನೆ. ಅಲ್ಲದೆ ಮಹೇಶ್ ಅವರ ಜಮೀನಿಗೆ ಹಾದು ಹೋಗಲು ರಸ್ತೆ ಸಂಪರ್ಕ ಕಲ್ಪಿಸಲು ಮೃತ್ಯುಂಜಯ ಸ್ವಾಮೀಜಿ ಅಡ್ಡಿ ಪಡಿಸಿದ್ದಾರೆ ಎಂದು ಮಹೇಶ್ ಅಪಾದಿಸಿದ್ದಾರೆ.  

ನೆಲಮಂಗಲ ಹರ್ಷ ಆಸ್ಪತ್ರೆಯಲ್ಲಿ ಮಹೇಶ್ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.  

ಆರೋಪ ನಿರಾಕರಿಸಿದ ಸ್ವಾಮೀಜಿ:

ಆದರೆ ಮೃತ್ಯುಂಜಯ ಸ್ವಾಮಿಜಿ ಈ ಎಲ್ಲಾ ಆರೋಪವನ್ನು ತಳ್ಳಿಹಾಕಿದ್ದಾರೆ. ಜಮೀನು ಮೋಸದಿಂದ ತೆಗೆದುಕೊಂಡಿಲ್ಲ.  ಮಹೇಶ್’ನ ಜಮೀನು ಪಕ್ಕ ನಮ್ಮ ಪರಿಚಯದವರೊಬ್ಬರು ಭೂಮಿ ಖರೀದಿಸಿದ್ದು ನಿಜ. ಅವರು ತಮ್ಮ ಜಮಿನಿಗೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಹಾಗಾಗಿ ಮಹೇಶ್ ಜಮಿನಿಗೆ  ಹೋಗಲು ದಾರಿ ಸಮಸ್ಯೆ ಆಗಿದೆ.  ಈ ದಾರಿ ಬಿಟ್ಟು ಬೇರೆದಾರಿಯಲ್ಲಿ  ಮಹೇಶ್ ಓಡಾಡಬಹುದು ಎಂದು ಮೃತ್ಯುಂಜಯ ಸ್ವಾಮಿಜಿ ಪ್ರತಿಕ್ರಿಯಿಸಿದ್ದಾರೆ.

click me!