
ಬೆಂಗಳೂರು(ಜ.15): ಅತ್ತಿದ್ದಕ್ಕೆ 2 ವರ್ಷದ ಮಗುವನ್ನೇ ಕಿರಾತಕಿಯೊಬ್ಬಳು ಹತ್ಯೆಗೈದಿರುವ ಘಟನೆ ಬೆಂಗಳೂರಿನ ನೀಲಸಂದ್ರದ ಎಂಜಿ ಗಾರ್ಡನ್'ನಲ್ಲಿ ಬೆಳಕಿಗೆ ಬಂದಿದೆ. ಅಳುತ್ತಿದ್ದ ಮಗುವನ್ನು ಮಹಿಳೆಯೊಬ್ಬಳು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ್ದಾಳೆ. ಕಸ್ತೂರಿ ಎಂಬಾಕೆಯೇ ಕೊಲೆ ಮಾಡಿದ ಆರೋಪಿ.
ಆರ್ಮುಗಂ ಮತ್ತು ಶಾರದಾ ದಂಪತಿಯ ಎರಡು ವರ್ಷದ ಮಗು ಜಯಭಾರತಿ ಆಲಿಯಾಸ್ ವಿಜಯ್ ಕೊಲೆಯಾದ ಮಗು. ಜನವರಿ 9ರಂದು ಮಗುವನ್ನು ಕಸ್ತೂರಿ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವಿನ ಅಣ್ಣ ಹಾಲು ತರಲು ಹೊರಗಡೆ ಹೋಗಿದ್ದಾಗ ಮಗು ಮನೆಯಲ್ಲಿ ಏರು ದನಿಯಲ್ಲಿ ಅಳುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಕಸ್ತೂರಿ ಮಗುವಿಗೆ ಕಾಲಿನಿಂದ ಒದ್ದು, ಕಡಗೋಲಿನಿಂದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ತೀವ್ರವಾಗಿ ಗಾಯಗೊಂಡ ಮಗು ಪ್ರಜ್ಞಾಹೀನವಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಪೋಸ್ಟ್ ಮಾರ್ಟಂ ವರದಿಯಲ್ಲಿ ಕೊಲೆ ಎಂದು ದೃಡಪಟ್ಟ ಹಿನ್ನೆಲೆಯಲ್ಲಿ ಅಶೋಕನಗರ ಪೊಲೀಸರು ಆರೋಪಿ ಕಸ್ತೂರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.