ಸಾಮಾನ್ಯ ಜನತೆಗೆ ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಸತ್ಯಕ್ಕೆ ದೂರ

Published : Feb 18, 2017, 05:44 PM ISTUpdated : Apr 11, 2018, 12:55 PM IST
ಸಾಮಾನ್ಯ ಜನತೆಗೆ ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಸತ್ಯಕ್ಕೆ ದೂರ

ಸಾರಾಂಶ

ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್‌ಷಿಪ್ ಎಂಬ ಸಂಸ್ಥೆ ನಗರದ ದೊಮ್ಮಲೂರಿನ ಟೆರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇಶದ ವಿವಿಧ‘ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳೊಂದಿಗಿನ ಸಂವಾದದ ವೇಳೆ ಈ ಅಭಿಪ್ರಾಯಪಟ್ಟರು.

ಬೆಂಗಳೂರು(ಫೆ.18): ರಾಜಕಾರಣಕ್ಕೆ ಬರುವವರಿಗೆ ಸಾಮಾಜಿಕ ಕಾಳಜಿ ಇರುವುದಿಲ್ಲ. ತಮ್ಮ ಸ್ವಯಂ ಅಭಿವೃದ್ಧಿಗಾಗಿ ರಾಜಾಕಾರಣಕ್ಕೆ ಪ್ರವೇಶ ಮಾಡುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಶೇ. 95ಕ್ಕೂ ಹೆಚ್ಚು ಮಂದಿ ಸಾಮಾಜ ಸೇವೆ ಉದ್ದೇಶದಿಂದ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುತ್ತಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್ ಹೇಳಿದರು.

ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್‌ಷಿಪ್ ಎಂಬ ಸಂಸ್ಥೆ ನಗರದ ದೊಮ್ಮಲೂರಿನ ಟೆರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇಶದ ವಿವಿಧ‘ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳೊಂದಿಗಿನ ಸಂವಾದದ ವೇಳೆ ಈ ಅಭಿಪ್ರಾಯಪಟ್ಟರು.

ಸಾಮಾನ್ಯ ಜನತೆಗೆ ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ಅವರಿಗೆ ಸಾಮಾಜದ ಏಳಿಗೆಗೆ ಕುರಿತು ಕಾಳಜಿ ಇರುವುದಿಲ್ಲ. ಅಲ್ಲದೆ, ಏನೂ ಗೊತ್ತಿಲ್ಲದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಆರೋಪಗಳಿವೆ. ಇದೇ ಕಾರಣಕ್ಕೆ ಶಾಲೆಗೆ ಸೇರಿಸುವಾಗ ನೀವು ರಾಜಕಾರಣಿ ಎಂದು ಹೇಳಬೇಡಿ ಎಂದು ನನ್ನ ಮಗಳೇ ನನಗೆ ಮನವಿ ಮಾಡಿದ್ದಳು. ಆದರೆ, ಇದು ತಪ್ಪು ಸಂದೇಶವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವವರಲ್ಲಿ ಶೇ. 4 ರಷ್ಟು ಜನ ಮಾತ್ರ ಭ್ರಷ್ಟಾಚಾರದಂತಹ ಆರೋಪಗಳಿರುತ್ತವೆ. ಇನ್ನುಳಿದ ರಾಜಕಾರಣಿಗಳಿಗೆ ಅಭಿವೃದ್ಧಿಯೇ ಮುಖ್ಯ ಗುರಿ ಎಂದರು.

ಮೊದಲ ಬಾರಿ ಸಂಸತ್ ಪ್ರವೇಶಿದಾಗ ನನಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆ ವೇಳೆ ಉತ್ತರ ಭಾರತದ ಸಂಸದರೊಬ್ಬರ ಧೈರ್ಯ ತುಂಬಿದ್ದರು. ಉದ್ದಮಿಯಾಗಿದ್ದ ತಾನು ಸಾರ್ವಜನಿಕ ಜೀವನಕ್ಕೆ ಬಂದು ಜನ ಪರ ಕಾರ್ಯಗಳನ್ನು ಮಾಡುತ್ತಿದ್ದೇನೆ. ಜತೆಗೆ ಬೆಂಗಳೂರಿನ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಒಬ್ಬ ಹೋರಾಟಗಾರನಾಗಿ ರೂಪುಗೊಂಡಿದ್ದೇನೆ. ಹಾಗಾಗಿ ಸಂಸದನಾಗಿರುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆ ಎಂದರು.

ರಾಜ್ಯ ಸಭೆ ಪ್ರವೇಶಿಸಿದ ಸಂದರ್ಭದಲ್ಲಿ ನಗದು ರಹಿತ ವ್ಯವಹಾರದ ವಿಚಾರ ಪ್ರಸ್ತಾಪಿಸಿದೆ. ಆ ಸಂದರ್ಭದಲ್ಲಿ ಎಲ್ಲ ಸಂಸದರು ವಿರೋಧಿಸಿದ್ದರು. ಅಲ್ಲದೆ, ವ್ಯವಹಾರಸ್ಥರಾಗಿದ್ದು, ಇವರಿಗೆ ರಾಜಕಾರಣವೇ ಗೊತ್ತಿಲ್ಲ. ನಮ್ಮಲ್ಲಿ ಜಾರಿ ಮಾಡಲು ಅಸಾಧ್ಯವಾದ ವಿಚಾರ ಚರ್ಚಿಸುತ್ತಾರೆ ಎಂದಿದ್ದರು. ಜತೆಗೆ ನೆಟ್ ನ್ಯೂಟ್ರಾಲಿಟಿ ಜಾರಿಗೆ ನಾನು ವಿರೋಧಿಸಿದ್ದೆ. ಎಲ್ಲ ಜನತೆಗೆ ಉಚಿತವಾಗಿ ಇಂಟರ್‌ನೆಟ್  ಲಭ್ಯವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಆ ಕಾರ್ಯ ಇಂದು ಜಾರಿಯಾಗುತ್ತಿದೆ ಎಂದು ತಿಳಿಸಿದರು.

ಮೂಲಭೂತ ಕರ್ತವ್ಯ ಪಾಲಿಸಿ

ಜನತೆ ತಮ್ಮ ಮೂಲಭೂತ ಕರ್ತವ್ಯ ಪಾಲಿಸದ ಹಿನ್ನೆಲೆಯಲ್ಲಿ ನಗರದ ಪರಿಸರ ಹಾಳಾಗಲು ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಪರಿಸರದ ರಕ್ಷಣೆ ಸಂಬಂಧ‘ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದಾಗಿ ಇಂದು ಕಸದ ಸಮಸ್ಯೆ ಹಾಗೂ ನಗರದ ಕೆರೆಗಳು ಹಾಳಾಗಲು ಅವಕಾಶವಾಗಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಮಾಡುವುದಿಲ್ಲ

ಸಾರ್ವಜನಿಕರಿಗೆ ಎದುರಾಗುವ ಹಲವು ಸಮಸ್ಯೆಗಳ ಪರಿಹರಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಗಳಾಗಿರುತ್ತದೆ. ಆದರೆ, ಜನತೆ ಲೋಕಸಭೆ ಮತ್ತು  ವಿಧಾನಸಭೆ ಚುನಾವಣೆಗಳಲ್ಲಿ ‘ಭಾಗವಹಿಸಿದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ ಹಾಕುವುದಕ್ಕೆ ಬರುವುದಿಲ್ಲ. ಕೆಲ ಸಂದರ್ಭಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳ ಸರಿ ಪಡಿಸುವುದಕ್ಕೆ ಸಂಸದರಿಗೆ ಇ-ಮೇಲ್ ಸಂದೇಶ ರವಾನಿಸುತ್ತಾರೆ. ಸ್ಥಳೀಯ ಸಮಸ್ಯೆಗಳ ಪರಿಹರಿಸಿಕೊಳ್ಳು ಇದು ಮಾರ್ಗವಲ್ಲ ಎಂದು ತಿಳಿಸಿದರು.

ಮುಂದಿನ ಹತ್ತು ವರ್ಷಗಳ ಗುರಿ

ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಮುಂದಿನ ಹತ್ತು ವರ್ಷಗಳ ಗುರಿಯನ್ನು ಸರ್ಕಾರಗಳು ಹೊಂದಿರಬೇಕು. ಬೆಂಗಳೂರು ನಗರ ಐಟಿ ನಗರವಾಗಿ ಬೆಳೆಯುತ್ತಿದೆ. ಅಗತ್ಯಕ್ಕಿಂತ ಹೆಚ್ಚು ಜನ ಇಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅಷ್ಟು ಜನತೆಗೆ ಅಗತ್ಯವಿರುವ ಸೌಲಭ್ಯಗಳು ಇಲ್ಲಿ ಸಿಗುತ್ತಿಲ್ಲ. ಹಾಗಾಗಿ ಯೋಜನೆಗಳ ರೂಪಿಸುವ ಸಂದರ್ಭದಲ್ಲಿ ‘ಭವಿಷ್ಯದ ಗುರಿ ಹೊಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಸಂವಾದದಲ್ಲಿ ಭಾಗವಹಿಸಿದ್ದ ಯುವ ಜನತೆಯೊಂದಿಗೆ ಸಂವಾದ ನಡೆಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ