ಕರ್ನಾಟಕದ 2 ಊರುಗಳಿಗೆ ಏರ್ಪೋರ್ಟ್ ಭಾಗ್ಯ

Suvarna Web Desk |  
Published : Feb 18, 2017, 05:08 PM ISTUpdated : Apr 11, 2018, 12:50 PM IST
ಕರ್ನಾಟಕದ 2 ಊರುಗಳಿಗೆ ಏರ್ಪೋರ್ಟ್ ಭಾಗ್ಯ

ಸಾರಾಂಶ

ಒಳನಾಡು ಪ್ರದೇಶಗಳಿಗೆ ವಿಮಾನ ಸೇವೆ ಕಲ್ಪಿಸುವ ನಿಟ್ಟಿನಿಂದ ಬಳಕೆಯಾಗದೇ ಇರುವ ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಇವುಗಳಲ್ಲಿ 10 ನಿಲ್ದಾಣಗಳು ದಕ್ಷಿಣ ಭಾರತದಲ್ಲಿವೆ

ಪಣಜಿ(ಫೆ.18): ದೇಶದೆಲ್ಲೆಡೆ ಪ್ರಾದೇಶಿಕ ಸಂಪರ್ಕ ಉತ್ತೇಜಿಸುವ ನಿಟ್ಟಿನಿಂದ ಕೇಂದ್ರ ವಿಮಾನಯಾನ ಸಚಿವಾಲಯ ಕರ್ನಾಟಕದ ಬೀದರ್ ಮತ್ತು ಬಳ್ಳಾರಿ ಜಿಲ್ಲೆಯ ಜಿಂದಾಲ್ ವಿಜಯನಗರ (ತೋರಣಗಲ್ಲು) ಏರ್‌ಪೋರ್ಟ್ ಸೇರಿದಂತೆ ದೇಶದಲ್ಲಿ ಬಳಕೆಯಾಗದೇ ಹಾಗೇ ಇರುವ 43 ವಿಮಾನ ನಿಲ್ದಾಣಗಳನ್ನು ಶೀಘ್ರದಲ್ಲೇ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ.

ಬೀದರ್ ವಿಮಾನ ನಿಲ್ದಾಣದಿಂದ ಬೆಂಗಳೂರು (524 ಕಿ.ಮಿ.), ಪುಣೆ (392 ಕಿ.ಮೀ.), ನಾಗ್ಪುರ (401 ಕಿ.ಮೀ.), ವಿಜಯವಾಡ (369 ಕಿ.ಮೀ.), ಔರಂಗಬಾದ್ (369 ಕಿ.ಮೀ.), ಗೋವಾ (470 ಕಿ.ಮೀ.), ತಿರುಪತಿ (512 ಕಿ.ಮೀ.), ವೈಜಾಗ್ (603 ಕಿ.ಮೀ.), ಮಂಗಳೂರು (626 ಕಿ.ಮೀ.), ಚೆನ್ನೈ (610 ಕಿ.ಮೀ.) ದೂರದಲ್ಲಿದ್ದು, ಈ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ.

ಜಿಂದಾಲ್ ವಿಜಯನಗರ ಏರ್ಪೋರ್ಟ್‌ನಿಂದ ಬೆಂಗಳೂರು (255 ಕಿ.ಮೀ.), ಹೈದರಾಬಾದ್ (299 ಕಿ.ಮೀ.), ಬಳಗಾವಿ( 235 ಕಿ.ಮೀ.), ವಿಜಯವಾಡ (292 ಕಿ.ಮಿ.), ಗೋವಾ (301 ಕಿ.ಮೀ.), ಮಂಗಳೂರು (330 ಕಿ.ಮೀ.), ತಿರುಪತಿ (345 ಕಿ.ಮೀ.), ಚೆನ್ನೆ‘ (456 ಕಿ.ಮೀ.), ಪುಣೆ (480 ಕಿ.ಮೀ.), ವೈಜಾಗ್ (745 ಕಿ.ಮೀ.) ದೂರದಲ್ಲಿದ್ದು, ಈ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ.

ಒಳನಾಡು ಪ್ರದೇಶಗಳಿಗೆ ವಿಮಾನ ಸೇವೆ ಕಲ್ಪಿಸುವ ನಿಟ್ಟಿನಿಂದ ಬಳಕೆಯಾಗದೇ ಇರುವ ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಇವುಗಳಲ್ಲಿ 10 ನಿಲ್ದಾಣಗಳು ದಕ್ಷಿಣ ಭಾರತದಲ್ಲಿವೆ ಎಂದು ಕೇಂದ್ರ ವಿಮಾನಯಾನ ಕಾರ್ಯದರ್ಶಿ ಆರ್.ಎನ್. ಚೌಬೇ ಹೇಳಿದ್ದಾರೆ.

ಸದ್ಯ ದೇಶದಲ್ಲಿ 72 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಜತೆ ಹೆಚ್ಚುವರಿಯಾಗಿ 43 ವಿಮಾನ ನಿಲ್ದಾಣಗಳ ಸೇರ್ಪಡೆಯಿಂದ ಸನ್ನಿವೇಶ ಸಂಪೂರ್ಣವಾಗಿ ಬದಲಾಗಲಿದೆ. ಬಳಕೆಯಾಗದ ವಿಮಾನ ನಿಲ್ದಾಣಗಳನ್ನು ವಾಣಿಜ್ಯಿಕ ವಿಮಾನ ನಿಲ್ದಾಣಗಳಾಗಿ ಪರಿವರ್ತಿಸಲು 11 ಬಿಡ್ಡರ್‌ಗಳಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ವಿಮಾನಯಾನ ಮಾರ್ಗವನ್ನು ನೀಡಲು 15- ರಿಂದ 20 ದಿನಗಳು ಬೇಕಾಗಲಿವೆ. ಒಂದರಿಂದ ಆರು ತಿಂಗಳ ಒಳಗಾಗಿ ವಿಮಾನ ನಿಲ್ದಾಣಗಳಲ್ಲಿ ಹೊಸ ಸೌಕರ್ಯಗಳೊಂದಿಗೆ ವಿಮಾನ ಹಾರಾಟ ಆರಂ‘ವಾಗಲಿದೆ ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ
ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?